ವಾಷಿಂಗ್ಟನ್​:ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಶ್ವೇತಭವನದಲ್ಲಿ ವಿಶೇಷವಾದ ಭೋಜನಕೂಟವನ್ನು ಏರ್ಪಡಿಸಲಾಗಿದ್ದು ರಾಗಿ , ಸುಟ್ಟ ಮೆಕ್ಕೆಜೋಳದ ಸಲಾಡ್, ಕಲ್ಲಂಗಡಿ ಮತ್ತು ಆವಕಾಡೊ ಸಾಸ್‌ನಂತಹ ವಸ್ತುಗಳನ್ನು ಒಳಗೊಂಡಿರುವ ಮೆನು ಕೆಂಪು ವೈನ್​ನ್ನು ಸಹ ಒಳಗೊಂಡಿದೆ.ಈ ಕೆಂಪು ವೈನ್​ನ ವಿಶೇಷವೆನೆಂದರೆ ಇದು ಗುಜರಾತ್​ ಮೂಲದ ವ್ಯಕ್ತಿಯೊಬ್ಬರ ಒಡೆತನದ ಕಂಪನಿಯ ವೈನ್​ ಆಗಿದ್ದು, ಭೋಜನಕೂಟದಲ್ಲಿ ಭಾಗಿಯಾಗಲಿರುವ ಅತಿಥಿಗಳಿಗೆ ಪಟೇಲ್ ರೆಡ್ ಬ್ಲೆಂಡ್-2019 ವೈನ್​ನ್ನು ನೀಡಲಾಗುತ್ತದೆ.ಇದನ್ನೂ ಓದಿ:ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ದುರಂತ ಅಂತ್ಯ: ಸಾವಿಗೆ ಆಮ್ಲಜನಕ ಕೊರತೆ ಕಾರಣವಲ್ಲ, ಇಲ್ಲಿದೆ ಪೂರ್ಣ ಮಾಹಿತಿ…ರಾಜ್​ ಪಟೇಲ್​ ಒಡೆತನದ ನಾಪಾ ವ್ಯಾಲಿ ವೈನರಿಯಿಂದ ತಯಾರಿಸಲಾಗಿರುವ ಈ ವಿಶೇಷವಾದ ವೈನ್​ ಅಮೇರಿಕಾದಲ್ಲಿಯೇ ತಯಾರಾಗಿದ್ದು, ಕಂಪನಿಯು ವರ್ಷಕ್ಕೆ ಕೇವಲ ಬೆರಳಣಿಕೆಯಷ್ಟು ಮಾತ್ರ ವೈನ್​ನ್ನು​ ಉತ್ಪಾದನೆ ಮಾಡುತ್ತದೆ.ಉತ್ತಮ ರುಚಿಯ ಜೊತೆ ದೀರ್ಘಕಾಲ ಬಾಳಿಕೆ ಬರುವ ಸಾಮರ್ಥ್ಯವನ್ನು ಹೊಂದಿರುವ ಈ ವೈನ್​​ಗೆ ಅಲ್ಲಿನ ಭಾರತೀಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭೋಜನಕೂಟಕ್ಕಾಗಿ ಅಮೇರಿಕಾದ ಶ್ವೇತಭವನವು ಪಟೇಲ್​ ಕಂಪನಿಗೆ ವಿಶೇಷ ವೈನ್​ನ್ನು ನೀಡುವಂತೆ ಪತ್ರ ಬರೆದಿತ್ತು. ಕಂಪನಿಯು ಕೂಡ ಮನವಿ ಮೇರೆಗೆ ಈ ವೈನ್​ನ್ನು ಒದಗಿಸಿದೆ.ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಿ ಮೋದಿಯವರಿಗೆ ಅನಿವಾಸಿ ಭಾರತೀಯರ ಭವ್ಯ ಸ್ವಾಗತದ ಕುರಿತು ಮಾತನಾಡಿದ ಪಟೇಲ್, ಅಮೆರಿಕದಲ್ಲಿರುವ ಭಾರತೀಯರ ದೃಷ್ಟಿಕೋನದಲ್ಲಿ ಮೋದಿಯವರು ಭಾರತದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಮಧ್ಯಮ ವರ್ಗದ ಜನರಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + nine =
Remember me
