ದೆಹಲಿ:ಬಾಲಾಕೋಟ್​​ನ ಏರ್ ಸ್ಟ್ರೈಕ್​ ಹೀರೋ ವಿಂಗ್ ಕಮಾಂಡರ್​ ಅಭಿನಂದನ್ ವರ್ಧಮಾನ್​​ಗೆ ದೀಪಾವಳಿಯ ಶುಭಾಶಯಗಳ ಜೊತೆಗೇ ಅಭಿನಂದನೆಗಳನ್ನು ಹೇಳುವ ಸಂದರ್ಭ ಒದಗಿ ಬಂದಿದೆ. ಏಕೆಂದರೆ ಅವರಿಗೆ ಪದೋನ್ನತಿ ಲಭಿಸಿದೆ.
ವಿಂಗ್ ಕಮಾಂಡರ್ ಅಭಿನಂದನ್ ಎಂದಾಕ್ಷಣ ಅವರು ಅಂದು ಪಾಕ್​ ನೆಲದೊಳಕ್ಕೆ ಹೊಕ್ಕು ಎದೆಗುಂದದೆ ದಿಟ್ಟ ಉತ್ತರ ಕೊಟ್ಟು ಜೀವಂತ ಮರಳಿದ ಆ ರೋಚಕ ಕ್ಷಣಗಳೇ ಕಣ್ಮುಂದೆ ಬರುತ್ತವೆ. 2019ರ ಫೆ. 27ರಂದು ನಡೆದಿದ್ದ ಪಾಕ್ ದಾಳಿಯಲ್ಲಿ ಶತ್ರುಗಳ ಎಫ್​-16 ಯುದ್ಧವಿಮಾನವನ್ನು ಅಭಿನಂದನ್​ ತಮ್ಮ ಮಿಗ್-21 ಮೂಲಕವೇ ಹೊಡೆದರುಳಿಸಿದ್ದರು.
ಇದನ್ನೂ ಓದಿ:ಇದು ಅಪ್ಪುವನ್ನೇ ಒಪ್ಪುವ ರೂಪು.. ತಕ್ಷಣಕ್ಕೆ ನೋಡಿದರೆ ಥೇಟ್ ಪುನೀತ್​!
ನಂತರ ಗಾಯಗೊಂಡು ಶತ್ರುಗಳ ವಶವಾದರೂ ದಿಟ್ಟತನದಿಂದಲೇ ಪರಿಸ್ಥಿತಿಯನ್ನು ಎದುರಿಸಿ ಭಾರತಕ್ಕೆ ಮರಳಿ ದೇಶದ ಜನರಿಂದ ಅಪಾರ ಮೆಚ್ಚುಗೆ ಗಳಿಸಿದ್ದರು. ಇವರಿಗೆ ನಂತರ ಶೌರ್ಯಪ್ರಶಸ್ತಿಯನ್ನೂ ನೀಡಲಾಯಿತು. ಇದೀಗ ಭಾರತೀಯ ವಾಯುಸೇನೆ ಗ್ರೂಪ್​ ಕ್ಯಾಪ್ಟನ್​ ಆಗಿ ಪದೋನ್ನತಿ ನೀಡಿದೆ.
ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್

‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 19 =
Remember me
