ಭೋಪಾಲ್​:ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಮಾರ್ಗ ಮಧ್ಯೆ ಕೆಲವರು ವಾಂತಿ ಮಾಡುವುದು ಸಾಮಾನ್ಯ. ಹೀಗಾಗಿ ಅನೇಕರು ಕಿಟಕಿ ಪಕ್ಕದ ಸೀಟನ್ನೇ ಕೇಳುತ್ತಾರೆ. ಏಕೆಂದರೆ, ವಾಂತಿ ಮಾಡಲು ಸುಲಭ ಆಗಲೆಂದು.
ಆದರೆ, ಕಿಟಕಿಯಿಂದ ಹೊರಗೆ ತಲೆ ಹಾಕಿ ವಾಂತಿ ಮಾಡುವಾಗ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ಸ್ವಲ್ಪ ಮೈಮರೆತರೆ ಪ್ರಾಣಕ್ಕೆ ಸಂಚಕಾರ ತಪ್ಪಿದ್ದಲ್ಲ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಮಧ್ಯಪ್ರದೇಶದ ಖಾಂದ್ವಾ ಪ್ರದೇಶದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದ 11 ವರ್ಷದ ಬಾಲಕಿ ವಾಂತಿ ಮಾಡಲೆಂದು ಬಸ್​ನಿಂದ ತಲೆಯನ್ನು ಹೊರಹಾಕಿದಾಗ ಅದೇ ಸಮಯದಲ್ಲಿ ಬಂದ ಟ್ರಕ್ ಬಾಲಕಿಯ ತಲೆಯನ್ನು ಗುದ್ದಿಕೊಂಡು ಹೋಗಿದೆ. ಇದರ ಪರಿಣಾಮ ತಲೆ ತುಂಡಾಗಿ ಬಾಲಕಿ ಮೃತಪಟ್ಟಿದ್ದಾಳೆ.
ಇದನ್ನೂ ಓದಿರಿ:ಹುಡುಗಿ ಸಿಕ್ಕಳೆಂದು ದೈಹಿಕ ಸಂಪರ್ಕ ಮಾಡುವಾಗ ಅಮ್ಮ ನೆನಪಾಗಿಲ್ವಾ? ಮದ್ವೆ ವಿಷ್ಯ ಬಂದಾಗ ನೆನಪಾಗ್ತಾರಾ?
ಮೃತ ಬಾಲಕಿಯ ಹೆಸರು ತಮನ್ನಾ. ತನ್ನ ಕುಟುಂಬದೊಂದಿಗೆ ಬಾಲಕಿ ಬರ್ವಾಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಸುಮಾರು 9.30ರ ಸುಮಾರಿಗೆ ಖಾಂದ್ವಾ-ಇಂದೋರ್​ ಹೆದ್ದಾರಿಯ ನಡುವೆ ಬರುವ ರೊಸಿಯಾ ಫತಾ ಗ್ರಾಮದಲ್ಲಿ ತಮನ್ನಾಗೆ ವಾಕರಿಕೆ ಬಂದಿದೆ. ತಕ್ಷಣ ಆಕೆ ತನ್ನ ತಲೆಯನ್ನು ಬಸ್ಸಿನ ಕಿಟಕಿಯಿಂದ ಹೊರಹಾಕಿದ್ದಾಳೆ.
ಅದೇ ಸಮಯದಲ್ಲಿ ಬಂದು ಟ್ರಕ್​ ಬಾಲಕಿಯ ತಲೆಯನ್ನು ಕತ್ತರಿಸಿಕೊಂಡು ಹೋಗಿದೆ. ಭಯಾನಕ ಘಟನೆಯನ್ನು ಕಣ್ಣೆದುರಲ್ಲೇ ನೋಡಿದ ಕುಟುಂಬ ಆಘಾತಕ್ಕೆ ಒಳಗಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಟ್ರಕ್​ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
45 ವರ್ಷ ಬ್ರಹ್ಮಚಾರಿಯಾಗಿದ್ದವನನ್ನು ಮದುವೆ ಆಗುವಂತೆ ಮಾಡಿದ ಗ್ರಾಮ ಪಂಚಾಯಿತಿ ಚುನಾವಣೆ..!

ರಾತ್ರಿ ಬೆತ್ತಲೆಯಾಗಿ ಮಾಡೆಲ್​ ಮನೆಗೆ ನುಗ್ಗಿದ ವ್ಯಕ್ತಿ: ಗದ್ದಲ ಕೇಳಿ ಎಚ್ಚರಗೊಂಡವಳಿಗೆ ಕಾದಿತ್ತು ಶಾಕ್!

ಎಂಟು ಅತ್ಯುನ್ನತ ಬ್ರಾಹ್ಮಣ ಗೋತ್ರಗಳಲ್ಲಿ ಒಂದಾದ ಶಾಂಡಿಲ್ಯದಲ್ಲಿ ಜನಿಸಿದವಳು ನಾನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 8 =
Remember me
