ಚೆನ್ನೈ:ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ಕೆಲ ವಾಹನ ಸವಾರರು ನಿತ್ಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ವಾಹನ ಚಲಾಯಿಸುವಾಗ ನಿರ್ಲಕ್ಷ್ಯ, ನಿದ್ರೆಯ ಕೊರತೆ, ಅರಿವಿಲ್ಲದೆ ವಾಹನ ಚಾಲನೆ, ಮದ್ಯಪಾನ ಮಾಡಿ ನಿಯಂತ್ರಣ ತಪ್ಪಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಸಂಚಾರ ಅಧಿಕಾರಿಗಳು. ರಸ್ತೆ ಅಪಘಾತದಲ್ಲಿ ನಿತ್ಯವೂ ನೂರಾರು ಮಂದಿ ಸಾಯುತ್ತಿದ್ದಾರೆ. ಕೆಲ ಕುಟುಂಬಗಳು ರಸ್ತೆಗೆ ಬೀಳುತ್ತಿವೆ.
ತಾಜಾ ಸಂಗತಿ ಏನೆಂದರೆ ಸಂಚಾರ ನಿಯಮ ಉಲ್ಲಂಘಿಸಿದ ಆಟೋ ಚಾಲಕನಿಗೆ ಕೋರ್ಟ್ ವಿನೂತನ ಶಿಕ್ಷೆ ನೀಡಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ.
ಹೆಸರು ವಿವೇಕ್ (33). ಈತ ಚೆನ್ನೈನ ನೀಲಂಗರೈ ಸಮೀಪದ ವೆಟ್ಟುವಾಂಗೇಣಿ ಪ್ರದೇಶದ ಆಟೋ ಚಾಲಕ. ಇದೇ ತಿಂಗಳು 4ರಂದು ಮನೆಗೆ ತೆರಳುವ ಆತುರದಿಂದ ಪೂರ್ವ ಬೀಚ್ ರಸ್ತೆ ವೆಟ್ಟುವಾಂಗೇಣಿ ಜಂಕ್ಷನ್​ನಲ್ಲಿ ರಾಂಗ್ ರೂಟ್​ನಲ್ಲಿ ವಾಹನ ಚಲಾಯಿಸಿದ್ದ. ಅಲ್ಲದೆ, ಎದುರಿನಿಂದ ಬರುತ್ತಿದ್ದ ವಾಹನಕ್ಕೂ ಡಿಕ್ಕಿ ಹೊಡೆದಿದ್ದ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಇದೇ ಸಂದರ್ಭದಲ್ಲಿ ಅಲ್ಲಿಯೇ ಡ್ಯೂಟಿಯಲ್ಲಿದ್ದ ನೀಲಂಗರೈ ಲೇಡಿ ಟ್ರಾಫಿಕ್ ಪೊಲೀಸ್ ಪ್ರಿಯಾ, ವಾಹನ ಸವಾರರಿಬ್ಬರ ಕೀ ಕಿತ್ತುಕೊಳ್ಳಲು ಯತ್ನಿಸಿದರು. ಅಷ್ಟರಲ್ಲಿ ವಿವೇಕ್ ಮಹಿಳಾ ಪೇದೆಯನ್ನು ಮನಬಂದಂತೆ ನಿಂದಿಸಿದ್ದ.
ಈ ಸಂಬಂಧ ಪ್ರಿಯಾ ಅವರು ನೀಲಂಗರೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಲಕ ವಿವೇಕ್​ನನ್ನು ವಶಕ್ಕೆ ಪಡೆದು ಶೋಲಿಂಗನಲ್ಲೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇತ್ತ ವಿವೇಕ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಅರ್ಜಿಯ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್, ಕಾರ್ತಿಕ್​ಗೆ ವಿನೂತನ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದೆ.
ಕೋರ್ಟ್​ ಷರತ್ತಿನ ಅನ್ವಯ ನಿರ್ದಿಷ್ಟ ದಿನಗಳವರೆಗೆ ವಿವೇಕ್​ ನೀಲಂಗರೈ ಪೊಲೀಸ್ ಠಾಣೆಗೆ ಬೆಳಿಗ್ಗೆ ಮತ್ತು ಸಂಜೆ ತೆರಳಿ ಸಹಿ ಮಾಡಬೇಕಿದೆ. ಅಷ್ಟೇ ಅಲ್ಲದೆ, ವೆಟ್ಟುವಾಂಗೇವಿ ಸಿಗ್ನಲ್‌ನಲ್ಲಿ ಒಂದು ವಾರದವರೆಗೆ ಬೆಳಗ್ಗೆ 8 ರಿಂದ 10 ರವರೆಗೆ ಮತ್ತು ಸಂಜೆ 5 ರಿಂದ 7 ರವರೆಗೆ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಆದೇಶಿಸಲಾಗಿದೆ. ಅದರ ಭಾಗವಾಗಿ ಭಾನುವಾರದಿಂದ ಆಟೋ ಚಾಲಕ ವಿವೇಕ್ ಕೆಲ ಟ್ರಾಫಿಕ್ ಪೊಲೀಸ್ ಕರ್ತವ್ಯ ನಿರ್ವಹಿಸಿದ್ದಾರೆ. ಈ ವಿಷಯ ಇದೀಗ ಚೆನ್ನೈನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದರೆ ಇದೇ ರೀತಿಯ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
ಅಪರೂಪದ ಡೂಮ್ಸ್​ಡೇ ಮೀನು ಸಾವು! ಸಮುದ್ರ ದೇವರ ಸಂದೇಶ, ಜಗತ್ತಿಗೆ ಕಾದಿದೆ ಗಂಡಾಂತರ?

ಗೂಡ್ಸ್​ ರೈಲು ಬರುವ ಸಮಯದಲ್ಲೇ ಹಳಿಗಳ ಮೇಲೆ ಬಂದ ಸಿಂಹಗಳು! ನಂತರ ನಡೆದಿದ್ದಿಷ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − six =
Remember me
