ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) 2 ಸಾವಿರ ರೂ. ನೋಟುಗಳನ್ನು ಹಿಂಪಡೆಯುವ ಕುರಿತಂತೆ ಈಗಾಗಲೇ ಸುತ್ತೋಲೆ ಹೊರಡಿಸಿದ್ದು, ಇದೀಗ ಅದೇ ವಿಚಾರವಾಗಿ ಮತ್ತೆ ಮನವಿ ಮಾಡಿಕೊಂಡಿದೆ. ಎರಡು ಸಾವಿರ ರೂ. ನೋಟುಗಳ ವಾಪಸಾತಿ ಕುರಿತು ವಿವರ ನೀಡಿರುವ ಆರ್​​ಬಿಐ, ಸಾರ್ವಜನಿಕರಲ್ಲಿ ಇದೊಂದು ಮನವಿಯನ್ನೂ ಮಾಡಿಕೊಂಡಿದೆ.
ಎರಡು ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಇದೇ ವರ್ಷ ಮೇ 19ರಂದು ಸುತ್ತೋಲೆ ಹೊರಡಿಸಿತ್ತು. 2023ರ ಮಾರ್ಚ್ 31ಕ್ಕೆ 3.62 ಲಕ್ಷ ಕೋಟಿ ರೂಪಾಯಿಯಷ್ಟಿದ್ದ 2 ಸಾವಿರ ರೂ ನೋಟುಗಳು ಮೇ 19ಕ್ಕೆ 3.56 ಲಕ್ಷ ಕೋಟಿ ರೂ.ಗೆ ಇಳಿದಿತ್ತು ಎಂದಿರುವ ಆರ್​ಬಿಐ, 2 ಸಾವಿರ ರೂ. ನೋಟುಗಳ ಸ್ಥಿತಿಗತಿ ಕುರಿತು ಇನ್ನೊಂದು ಅಪ್​ಡೇಟ್ ಹೊರಡಿಸಿದೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಆ ಪ್ರಕಾರ, ಇದೇ ಜು. 31ರ ಅಂಕಿ-ಅಂಶದಂತೆ ಎಲ್ಲ ಬ್ಯಾಂಕ್​ಗಳಿಗೆ ಒಟ್ಟು 3.14 ಲಕ್ಷ ಕೋಟಿ ಮೊತ್ತದ 2 ಸಾವಿರ ರೂ. ನೋಟುಗಳು ವಾಪಸ್ ಬಂದಿವೆ. ಅಂದರೆ ಮೇ 19ರ ವರೆಗೆ ಹೊರಗಡೆ ಚಲಾವಣೆಯಲ್ಲಿದ್ದ 2 ಸಾವಿರ ರೂ. ನೋಟುಗಳ ಪೈಕಿ ಶೇ. 88 ಬ್ಯಾಂಕ್​ಗೆ ಮರಳಿಸಲ್ಪಟ್ಟಿವೆ. ಅರ್ಥಾತ್​, 0.42 ಲಕ್ಷ ಕೋಟಿ ರೂ. ಮೊತ್ತದ 2 ಸಾವಿರ ರೂ. ನೋಟುಗಳು ಇನ್ನೂ ಚಲಾವಣೆಯಲ್ಲಿವೆ.
ಇದನ್ನೂ ಓದಿ:2000 ರೂ. ನೋಟು ಹಿಂಪಡೆತ: ಒಮ್ಮೆಗೆ 20 ಸಾವಿರ ರೂ. ಮಾತ್ರ ಬದಲಿಸಿಕೊಳ್ಳಲು ಅವಕಾಶ
ವಾಪಸ್​ ಬಂದಿರುವ ನೋಟುಗಳ ಪೈಕಿ ಶೇ. 87 ಠೇವಣಿ ರೂಪದಲ್ಲಿ ಹಾಗೂ ಶೇ. 13 ವಿನಿಮಯ ರೂಪದಲ್ಲಿ ಸಂಗ್ರಹಗೊಂಡಿವೆ. ಅದಾಗ್ಯೂ ಇನ್ನೂ 0.42 ಲಕ್ಷ ಕೋಟಿ ರೂ. ಮೊತ್ತದ 2 ಸಾವಿರ ರೂ. ನೋಟುಗಳು ಚಲಾವಣೆಯಲ್ಲಿದ್ದು, ಅವುಗಳೂ ಬ್ಯಾಂಕ್​ಗೆ ಮರಳಬೇಕಾಗಿವೆ. ಹೀಗೆ 2 ಸಾವಿರ ರೂ. ನೋಟು ಹಿಂದಿರುಗಿಸಲು ಸೆ. 30 ಕಡೇ ದಿನವಾಗಿದ್ದು, ಕೊನೆಯ ಹಂತದ ಗಡಿಬಿಡಿ ಜನಜಂಗುಳಿಯನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರು ಆದಷ್ಟು ಬೇಗ 2 ಸಾವಿರ ರೂ. ನೋಟುಗಳನ್ನು ಬ್ಯಾಂಕ್​ಗಳಿಗೆ ಹಿಂದಿರುಗಿಸಬೇಕು ಎಂದು ಆರ್​ಬಿಐ ಮನವಿ ಮಾಡಿಕೊಂಡಿದೆ.
Withdrawal of ₹2000 Denomination Banknotes – Statushttps://t.co/J3MOYyCGIU
— ReserveBankOfIndia (@RBI)August 1, 2023

ಇನ್ನು ಜನನ ಪ್ರಮಾಣಪತ್ರವೇ ಎಲ್ಲದಕ್ಕೂ ದಾಖಲೆ; ಸಂಸತ್ತಲ್ಲಿ ಮಹತ್ವದ ಮಸೂದೆ ಅಂಗೀಕಾರ

ನಿದ್ರಿಸಲು ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕೇಸು ದಾಖಲಿಸಬಹುದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eleven =
Remember me
