ಮುಂಬೈ:ದಸರಾ, ದೀಪಾವಳಿಗೆ ಉಡುಪು, ಆಭರಣಗಳ ಹೊಸ ವಿನ್ಯಾಸದ ಜಾಹೀರಾತನ್ನು ಬಿಡುಗಡೆ ಮಾಡುವುದು ಸಾಮಾನ್ಯ. ಆದರೆ ಈ ಬಾರಿ ಕೆಲವು ಬಟ್ಟೆ ಮಾರಾಟದ ಜಾಹೀರಾತುಗಳಲ್ಲಿ ಬಿಂದಿ ಇಲ್ಲದೆ ಕಾಣಿಸಿಕೊಂಡಿದ್ದರಿಂದ ಸಾರ್ವಜನಿಕರಿಂದ ಸಾಕಷ್ಟು ಟೀಕೆಗೆ ಗುರಿಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಮಾತುಗಳೂ ಕೇಳಿಬಂದವು.
ಇದನ್ನೂ ಓದಿ:ಚಿಕ್ಕಪ್ಪ ವಿರುದ್ಧವೇ ದೂರು ದಾಖಲಿಸಿದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ
ಭಾರತೀಯ ಸಂಪ್ರದಾಯದಲ್ಲಿ ಬಿಂದಿ ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಹಿಂದುಗಳನ್ನೇ ನೆಚ್ಚಿಕೊಂಡು ಹಬ್ಬಕ್ಕೆ ಕೊಡುವ ಜಾಹೀರಾತುಗಳಲ್ಲಿ ಬಿಂದಿ ಇಲ್ಲದ ಮಾಡೆಲ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಅದೂ ನವರಾತ್ರಿಯ ಶುಭ ಸಂದರ್ಭದಲ್ಲಿ ಜಾಹೀರಾತುಗಳು ಬಂದಿದ್ದಕ್ಕೆ `ಇದೇನು ಅಶುಭ?` ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು.
ಅನೇಕ ನೆಟ್ಟಿಗರು “ನೋ ಬಿಂದಿ ನೋ ಬ್ಯುಸಿನೆಸ್” ಎಂದು “x”ಎಕ್ಸ್‌ನಲ್ಲಿ ಟ್ವೀಟ್​ ಮಾಡಿದರು. ಇದು ಹಬ್ಬದ ಆಚರಣೆಯಂತೆ ಕಾಣುತ್ತಿಲ್ಲ” ಎಂದು ಬಳಕೆದಾರರು ಹೇಳಿದರು.
“ಮೊದಲು ಬಿಂದಿ ಧರಿಸಿ …, ಹಿಂದುಗಳು ಮದುವೆ, ಮಹಾನವಮಿ, ದೀಪಾವಳಿ ಇತ್ಯಾದಿಗಳಿಗೆ ನಿಮ್ಮ ಉತ್ಪನ್ನಗಳನ್ನು ಖರೀದಿಸುತ್ತಾರೆ. ಇದರಿಂದ ನಿಮ್ಮ ವ್ಯಾಪಾರವನ್ನು ವೃದ್ಧಿಸಿಕೊಂಡಿದ್ದೀರಿ. ಆದರೆ ನೀವು ಹಿಂದು ಧರ್ಮಕ್ಕೆ ವಿರುದ್ಧವಾಗಿ ಕೊಳಕು ತಂತ್ರ ಮಾಡಲು ಪ್ರಯತ್ನಿಸುತ್ತೀರಿ, ನಾಚಿಕೆಗೇಡು!” ಎಂದು ನೆಟ್ಟಿಗನೊಬ್ಬ ಟೀಕಿಸಿದ್ದಾನೆ.
ಜಾಹೀರಾತು ನೋಡಿ ಆ ಸಂಸ್ಥೆಗಳು ಶೋಕ ನೋಟಕ್ಕೆ ಬಿದ್ದಿರುವುದಕ್ಕೆ ದುಃಖವಾಗಿದೆ! #NoBindi-NoBusiness.” ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಹಾಕಿದ್ದಾರೆ. “ಜನರು ಹಬ್ಬದ ಶಾಪಿಂಗ್‌ಗಾಗಿ ನಿಮ್ಮಲ್ಲಿಗೆ ಭೇಟಿ ನೀಡುತ್ತಾರೆ. ಇದು ಅಷ್ಟೇನೂ ಹಬ್ಬದಂತೆ ಕಾಣುತ್ತಿಲ್ಲ”, “ಇದೇನು ಬಿಂದಿಯಿಲ್ಲದ ದಡ್ಡ ನೋಟ? ಇದು ಹಬ್ಬದ ಸಮಯ, ಆದರೆ ಜಾಹೀರಾತಿನಲ್ಲಿ ಇರುವವಳು ಅಂತ್ಯಕ್ರಿಯೆಗೆ ಹೋಗುತ್ತಿದ್ದಾಳಾ?”, “ಇನ್ನು ಮುಂದೆ ನಿಮ್ಮ ಉತ್ಪನ್ನ ಖರೀದಿಸುವುದಿಲ್ಲ, ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ”…ಹೀಗೆ ಹಲವರು ಕಾಮೆಂಟ್​ ಮಾಡಿದ್ದರೆ, ಕೆಲವರು ಬ್ರ್ಯಾಂಡ್ ಅನ್ನು ಸಂಪೂರ್ಣವಾಗಿ “ಬಹಿಷ್ಕರಿಸುವುದಾಗಿ” ಎಚ್ಚರಿಸಿದ್ದಾರೆ.
ಮರಾಠಿ ನಟಿ ಆದಿತಿ ಡ್ರಾವಿಡ್​ಗೆ ರಾಹುಲ್​ ಡ್ರಾವಿಡ್​ ಏನಾಗಬೇಕು? ವೈರಲ್​ ಆಗುತ್ತಿದೆ ನಟಿಯ ಫೋಟೋಗಳು…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten − six =
Remember me
