ನವದೆಹಲಿ:ಕಾರುಗಳು, ಮನೆಗಳು ಮತ್ತು ಇತರ ವಸ್ತುಗಳನ್ನು ಬಾಡಿಗೆಗೆ ನೀಡುವುದು ಹಾಗೂ ತೆಗೆದುಕೊಳ್ಳುವುದು ಭಾರತದಲ್ಲಿ ಸಾಮಾನ್ಯ ಸಂಗತಿ. ಆದರೆ, ನೀವು ಎಂದಾದರೂ ಪತ್ನಿಯನ್ನು ಬಾಡಿಗೆಗೆ ನೀಡುವ ಬಗ್ಗೆ ಕೇಳಿದ್ದೀರಾ? ಭಾರತದಲ್ಲಿ ಇಂತಹದ್ದೊಂದು ಪದ್ಧತಿ ಇನ್ನೂ ಜೀವಂತವಾಗಿ ಇರುವ ಒಂದು ಸ್ಥಳವಿದೆ.
ಹೌದು, ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಒಳನಾಡಿನ ಹಳ್ಳಿಗಳಲ್ಲಿ ಈ ವಿಚಿತ್ರ ಪದ್ಧತಿ ಇದೆ. ಧಾಡಿಚಾ ಪ್ರಾಥ ಎಂದು ಕರೆಯಲ್ಪಡುವ ಈ ವ್ಯವಸ್ಥೆಯಲ್ಲಿ ಹೆಂಡತಿಯರನ್ನು ಒಂದು ತಿಂಗಳಿಂದ ಒಂದು ವರ್ಷದ ಅವಧಿಗೆ ಬಾಡಿಗೆಗೆ ನೀಡಲಾಗುತ್ತದೆ. ಹಳ್ಳಿಯ ಶ್ರೀಮಂತ ವ್ಯಕ್ತಿಗಳು ವಧುವನ್ನು ಹುಡುಕಲು ವಿಫಲರಾದಾಗ ಇಂತಹ ಆಚರಣೆಗಳನ್ನು ಮಾಡಲಾಗುತ್ತದೆ. ಇದಕ್ಕಾಗಿ ಮಾರುಕಟ್ಟೆ ಆಧಾರಿತ ವ್ಯವಸ್ಥೆಯನ್ನು ಸಹ ಸಿದ್ಧಪಡಿಸಲಾಗುತ್ತದೆ. ಈ ಮಾರುಕಟ್ಟೆಯಲ್ಲಿಯೇ ಮಹಿಳೆಯರನ್ನು ಬಾಡಿಗೆಗೆ ತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.
ವಹಿವಾಟು ಪೂರ್ಣಗೊಂಡ ನಂತರ, ಖರೀದಿದಾರ ಮತ್ತು ಮಹಿಳೆಯ ನಡುವೆ ಒಂದು ಒಪ್ಪಂದವು ರೂಪುಗೊಳ್ಳುತ್ತದೆ. 10ರಿಂದ 100 ರೂ. ಸ್ಟಾಂಪ್ ಪೇಪರ್​ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಸ್ಟಾಂಪ್​ ಪೇಪರ್ ನೀಡಿ ಖರೀದಿಸಿದ ಮಹಿಳೆಯರನ್ನು ಮರುಮಾರಾಟ ಮಾಡಲು ಈ ವ್ಯವಸ್ಥೆಯು ಅವಕಾಶ ನೀಡುತ್ತದೆ. ಒಪ್ಪಂದದ ಅವಧಿಯ ಕೊನೆಯಲ್ಲಿ ಮಹಿಳೆಯರ ಮಾಲೀಕತ್ವವನ್ನು ಹೆಚ್ಚಿನ ಮೊತ್ತಕ್ಕೆ ವರ್ಗಾಯಿಸಬಹುದು ಮತ್ತು ಒಪ್ಪಂದವನ್ನು ನವೀಕರಿಸಬಹುದು.
ಮಹಿಳೆ ಬಯಸಿದಲ್ಲಿ ಯಾವುದೇ ಸಮಯದಲ್ಲಿ ಒಪ್ಪಂದದಿಂದ ಹಿಂದೆ ಸರಿಯಬಹುದು. ಇದಕ್ಕೆ ಮಹಿಳೆ ಅಫಿಡವಿಟ್ ನೀಡಬೇಕು. ಅಲ್ಲದೆ, ಮಹಿಳೆ ತನ್ನ ಮಾಜಿ ಪತಿಗೆ ಪೂರ್ವನಿರ್ಧರಿತ ಮೊತ್ತವನ್ನು ಹಿಂದಿರುಗಿಸಬೇಕು. ಮಹಿಳೆ ಇನ್ನೊಬ್ಬ ಪುರುಷನಿಂದ ಹೆಚ್ಚು ಹಣವನ್ನು ಸ್ವೀಕರಿಸುವುದನ್ನು ಸಹ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಪುರುಷನು, ಮಹಿಳೆಯೊಂದಿಗೆ ಒಪ್ಪಂದವನ್ನು ಮುಂದುವರಿಸಲು ಬಯಸಿದರೆ, ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕು.
ಇಂತಹ ವಿಚಿತ್ರ ಹಾಗೂ ಕಾನೂನು ಬಾಹಿರ ಆಚರಣೆಗಳ ಬಗ್ಗೆ ಪೊಲೀಸರಿಗೆ ಗೊತ್ತಿದ್ದರೂ ದೂರುದಾರರು ಇಲ್ಲದ ಕಾರಣ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಈ ಪದ್ಧತಿಗೆ ಹೆಚ್ಚು ಬಲಿಯಾಗುತ್ತಿರುವುದು ಮಾತ್ರ ಬಡ ಮನೆಯ ಹೆಣ್ಣುಮಕ್ಕಳು. ಆಧುನಿಕ ಕಾಲದಲ್ಲಿಯೂ ಇಂಥದ್ದೊಂದು ಪದ್ಧತಿ ಜೀವಂತವಾಗಿರುವುದು ಕಳವಳಕಾರಿ ಸಂಗತಿಯಾಗಿದೆ.
ಇನ್ನು ಶಿವಪುರಿ ಗ್ರಾಮವಲ್ಲದೆ ಗುಜರಾತ್‌ನಲ್ಲೂ ಇಂತಹ ಪ್ರಕರಣಗಳು ವರದಿಯಾಗಿವೆ. ಕೃಷಿ ಕೂಲಿ ಕಾರ್ಮಿಕನಾಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮಾಲಿಕನಿಗೆ ತಿಂಗಳ ಬಾಡಿಗೆಗೆ ನೀಡಿದ್ದ ಎಂದು ವರದಿಯಾಗಿದೆ. ಗುಜರಾತ್ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಈ ಅಭ್ಯಾಸವು ವ್ಯಾಪಾರವಾಗಿದೆ. ಹಲವು ಪ್ರಕರಣಗಳಲ್ಲಿ ಮಹಿಳೆಯರನ್ನು 500 ರೂ.ವರೆಗೆ ಮಾರಾಟ ಮಾಡಲಾಗುತ್ತದೆ. ಬಡತನ ಮತ್ತು ಕಳಪೆ ಲಿಂಗ ಅನುಪಾತದಿಂದಾಗಿ ಅನೇಕ ಪುರುಷರು ಕೆಲವು ಪ್ರದೇಶಗಳಲ್ಲಿ ವಿವಾಹ ಪಾಲುದಾರರನ್ನು ಹುಡುಕಲು ಕಷ್ಟಪಡುತ್ತಾರೆ. ಮತ್ತೊಂದೆಡೆ ಬಡತನದಿಂದ ಮಹಿಳೆಯರು ಮಾರಾಟವಾಗುತ್ತಿದ್ದಾರೆ. ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳ ಹೆಣ್ಣುಮಕ್ಕಳು ಕೂಡ ಈ ರೀತಿ ಸಾಗಣೆಗೆ ಒಳಗಾಗುತ್ತಾರೆ.(ಏಜೆನ್ಸೀಸ್​)
ಭಾರತದ ಈ ಗ್ರಾಮದಲ್ಲಿ ಮಹಿಳೆಯರು 5 ದಿನ ಬಟ್ಟೆ ಧರಿಸುವಂತಿಲ್ಲ! ವಿಚಿತ್ರ ಆಚರಣೆ ಹಿಂದಿದೆ ಕರಾಳ ಕತೆ

ಮೃತ ಅಭಿಮಾನಿಗಳ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿದ ಯಶ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 16 =
Remember me
