ಸ್ವಿಜರ್‌ಲ್ಯಾಂಡ್‌:ಮಿಂಚಿನ ವೇಗದಲ್ಲಿ ಬಂದು ಮರೆಯಾಯಿತು ಎನ್ನುವ ಮಾತೇ ಇದೆಯಲ್ಲವೆ? ಮಿಂಚೇ ಹಾಗೆ. ಹೀಗೆ ಬಂದು ಹಾಗೆ ಹೋಗಿಬಿಡುತ್ತದೆ. ಒಂದೇ ಒಂದು ಸೆಕೆಂಡ‌ಗಳಲ್ಲಿ ಆಗಸವನ್ನೇ ಸೀಳಿ ಬಂದಂತೆ ಭಾಸವಾಗುವ ಈ ಮಿಂಚಿಗೂ ದಾಖಲೆ ಬರೆದಿಡುತ್ತಾರೆ ಎನ್ನುವುದು ನಿಮಗೆ ಗೊತ್ತೆ?ಹೌದು. ಅಮೆರಿಕದ ಸ್ವಿಜರ್‌ಲ್ಯಾಂಡ್‌ನಲ್ಲಿರುವ ವಿಶ್ವ ಹವಾಮಾನ ಇಲಾಖೆಯು ಇದೀಗ ದಾಖಲೆ ಮಾಡಿರುವ ಮಿಂಚಿನ ಕುರಿತಾಗಿ ವಿವರಣೆ ನೀಡಿದೆ.
ಇಲ್ಲಿಯವರೆಗಿನ ಬಲು ಉದ್ದದ ಮಿಂಚು ಎಂದು ಎನಿಸಿಕೊಂಡಿರುವುದು 2018ರ ಅಕ್ಟೋಬರ್‌ 31ರಂದು ಕಾಣಿಸಿಕೊಂಡ ಮಿಂಚು. ಬ್ರೆಜಿಲ್‌‌ನ ಆಗಸದಲ್ಲಿ ಈ ಮಿಂಚು ಕಾಣಿಸಿಕೊಂಡಿತ್ತಂತೆ. ಇದು 709 ಕಿ.ಮೀ. ಉದ್ದವಿರುವುದಾಗಿ ಇಲಾಖೆ ಹೇಳಿದ್ದು, ಅದನ್ನು ದಾಖಲೆಯ ಪಟ್ಟಿಗೆ ಸೇರಿಸಲಾಗಿದೆ.
WMO has recognized 2 new world records for a single#lightning#megaflashLongest distance: 709 km (440.6 miles),#Brazil, 31.10.2018Longest duration 16.7 seconds,#Argentina, 4.3.2019DOUBLE the previous recordsVerified with new satellite lightning imagery technologypic.twitter.com/DfG9NUrjEl
— World Meteorological Organization (@WMO)June 26, 2020

ಅದೇ ರೀತಿ ಇನ್ನೊಂದು ದಾಖಲೆಯಾಗಿರುವುದು ಉತ್ತರ ಅರ್ಜೆಂಟಿನಾದ ಆಗಸದಲ್ಲಿ ಮೂಡಿದ ಮಿಂಚು. 16.73 ಸೆಕೆಂಡ್‌ಗಳ ಕಾಲ ಈ ಮಿಂಚು ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ ಕಾಣಿಸಿಕೊಂಡಿರುವ ಅತಿ ಹೆಚ್ಚು ಕಾಲ ಹೊಡೆದ ಮಿಂಚು ಇದಾಗಿದೆ. 2019ರ ಮಾರ್ಚ್ 4ರಂದು ಕಾಣಿಸಿಕೊಂಡ ಈ ಮಿಂಚು, ಅತ್ಯಂತ ಸುದೀರ್ಘಾವಧಿಗೆ ಕಾಣಸಿಕ್ಕ ಮಿಂಚು ಎಂದು ತಿಳಿದು ಬಂದಿದೆ. ಈ ಹೊಸ ದಾಖಲೆಗಳನ್ನು ಉಪಗ್ರಹಾಧರಿತ ತಂತ್ರಜ್ಞಾನವೊಂದರಿಂದ ಸೆರೆ ಹಿಡಿಯಲಾಗಿದೆ.
ವಿಡಿಯೋ: ನಾಯಿಗೆ ಕೈತುತ್ತು ನೀಡೋ ಬಾಲೆಗೆ ಭಾರಿ ಮೆಚ್ಚುಗೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:17 − eight =
Remember me
