ಲಖನೌ:ಸತತ ತೋಳಗಳ ದಾಳಿಯಿಂದ ಉತ್ತರ ಪ್ರದೇಶ ತಲ್ಲಣಗೊಂಡಿದೆ. ಅದರಲ್ಲೂ ಬಹ್ರೈಚ್ ಜಿಲ್ಲೆಯ ಹಲವು ಗ್ರಾಮಗಳಲ್ಲಿನ ಜನರು ಈ ಪರಭಕ್ಷಕಗಳ ದಾಳಿಗೆ ಗುರಿಯಾಗುತ್ತಿದ್ದಾರೆ. ತೋಳಗಳನ್ನು ಹಿಡಿಯಲು ರಾಜ್ಯ ಸರ್ಕಾರ ದೊಡ್ಡ ಕಾರ್ಯಾಚರಣೆಯನ್ನೇ ನಡೆಸುತ್ತಿದ್ದು, ನೂರಾರು ಅಧಿಕಾರಿಗಳು ಮತ್ತು ಪಡೆಗಳನ್ನು ನಿಯೋಜಿಸಿದೆ. ಒಟ್ಟು ಆರು ತೋಳಗಳಲ್ಲಿ ಈವರೆಗೂ ನಾಲ್ಕು ತೋಳಗಳನ್ನು ಸೆರೆಹಿಡಿಯಲಾಗಿದ್ದು, ಇನ್ನೆರಡು ತೋಳಗಳು ತಮ್ಮ ದಾಳಿಯನ್ನು ಮುಂದುವರೆಸಿವೆ.
ವಿಶೇಷವಾಗಿ ಮಕ್ಕಳನ್ನು ತೋಳಗಳು ಗುರಿಯಾಗಿಸಿಕೊಂಡಿವೆ. ಮನೆಗಳಿಂದಲೇ ಎಳೆದೊಯ್ದು ಕೊಂದು ತಿನ್ನುತ್ತಿವೆ. ನರಭಕ್ಷಕ ತೋಳಗಳು ಸೆಪ್ಟೆಂಬರ್ 2ರವರೆಗೆ ಏಳು ಮಕ್ಕಳು ಸೇರಿದಂತೆ ಎಂಟು ಜನರ ಮೇಲೆ ದಾಳಿ ಮಾಡಿ ಕೊಂದಿವೆ. ಈ ದಾಳಿಯಲ್ಲಿ 36 ಜನರು ಗಾಯಗೊಂಡಿದ್ದಾರೆ. ಬಹ್ರೈಚ್‌ನಲ್ಲಿ ಕಳೆದ ಮಾರ್ಚ್‌ನಿಂದ ಮಕ್ಕಳು ಸೇರಿದಂತೆ ಮಾನವರ ಮೇಲೆ ತೋಳಗಳ ದಾಳಿಗಳು ನಡೆಯುತ್ತಿವೆ. ಆದರೆ, ಜುಲೈ 17 ರಿಂದ ಈ ದಾಳಿಗಳು ಹೆಚ್ಚಾಗಿವೆ.
ದಾಳಿ ಹಿಂದಿದೆ ಸೇಡುತೋಳಗಳ ಈ ದಾಳಿಯ ಹಿಂದೆ ಸೇಡು ಅಡಗಿದೆ ಎನ್ನುತ್ತಾರೆ ತಜ್ಞರು. ತೋಳಗಳು ತಮ್ಮ ಆವಾಸಸ್ಥಾನವನ್ನು ಕಳೆದುಕೊಂಡಿರುವುದು ಹಾಗೂ ತಮ್ಮ ಮರಿಗಳ ಹತ್ಯೆಯಂತಹ ಕಾರಣಗಳಿಂದಾಗಿ ಮನುಷ್ಯರ ಮೇಲೆ ಸೇಡಿನ ದಾಳಿ ನಡೆಸಲು ಪ್ರೇರೇಪಿಸಿರಬಹುದು ಎಂದು ಶಂಕಿಸಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ತೋಳದ ದಾಳಿಗೂ ಮುನ್ನ ಎರಡು ತೋಳ ಮರಿಗಳು ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸಾವನ್ನಪ್ಪಿವೆ. ಅಂದಿನಿಂದ ದಾಳಿ ಆರಂಭವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಮಾಜಿ ಅರಣ್ಯಾಧಿಕಾರಿ ಬಿಚ್ಚಿಟ್ಟರು ರೋಚಕ ಸಂಗತಿಬಹ್ರೈಚ್ ಜಿಲ್ಲೆಯ ಕತರ್ನಿಯಾಘಾಟ್ ವನ್ಯಜೀವಿ ವಿಭಾಗದ ನಿವೃತ್ತ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಜ್ಞಾನ್ ಪ್ರಕಾಶ್ ಸಿಂಗ್ ಮಾತನಾಡಿ, ತೋಳಗಳು ಇತರ ಕಾಡು ಪ್ರಾಣಿಗಳಿಗಿಂತ ಭಿನ್ನವಾಗಿ ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದರೆ, ತೋಳಗಳು ಸೇಡು ತೀರಿಸಿಕೊಳ್ಳುತ್ತವೆ. ಈ ಹಿಂದೆ ಮನುಷ್ಯರು ತೋಳಗಳಿಗೆ ಯಾವುದೋ ಒಂದು ರೀತಿಯಲ್ಲಿ ತೊಂದರೆ ಕೊಟ್ಟಿರುವುದರಿಂದ ಈ ದಾಳಿಗಳು ನಡೆಯುತ್ತಿವೆ ಎಂದರು.
ಸುಮಾರು 25 ವರ್ಷಗಳ ಹಿಂದೆ ಉತ್ತರ ಪ್ರದೇಶದ ಜೌನ್‌ಪುರ ಮತ್ತು ಪ್ರತಾಪ್‌ಗಢ ಜಿಲ್ಲೆಗಳ ಸಾಯಿ ನದಿಯ ಜಲಾನಯನ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮಕ್ಕಳನ್ನು ತೋಳಗಳು ಕೊಂದಿದ್ದವು. ಈ ಬಗ್ಗೆ ತನಿಖೆ ಮಾಡಿದ ನಂತರ ಕೆಲವು ಮಕ್ಕಳು ಎರಡು ತೋಳದ ಮರಿಗಳನ್ನು ಗುಹೆಯಲ್ಲಿ ಕೊಂದಿರುವುದು ಕಂಡುಬಂದಿತು. ಬಳಿಕ ತೋಳದ ಮರಿಗಳ ಪೋಷಕರು ತುಂಬಾ ಆಕ್ರಮಣಕಾರಿಯಾದವು ಮತ್ತು ಆ ಪ್ರದೇಶದಲ್ಲಿ ವಾಸಿಸುವ ಮನುಷ್ಯರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಕೆಲವು ತೋಳಗಳನ್ನು ಹಿಡಿಯಲಾಯಿತು ಆದರೆ, ಎರಡು ನರಭಕ್ಷಕ ತೋಳಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದವು. ಅಂತಿಮವಾಗಿ ಆ ತೋಳಗಳನ್ನು ಗುರುತಿಸಿ, ಗುಂಡಿಕ್ಕಿ ಕೊಲ್ಲಲಾಯಿತು ಎಂದು ಜ್ಞಾನ್ ಪ್ರಕಾಶ್ ಸಿಂಗ್ ಹೇಳಿದರು.
ಬಹ್ರೈಚ್‌ನಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ಎರಡು ತೋಳ ಮರಿಗಳು ಟ್ರ್ಯಾಕ್ಟರ್‌ನ ಚಕ್ರದಡಿಯಲ್ಲಿ ಸಿಲುಕಿ ಮೃತಪಟ್ಟಿವೆ. ಇದರಿಂದ ಕೋಪಗೊಂಡ ತೋಳಗಳು ಸ್ಥಳೀಯ ನಿವಾಸಿಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದವು. ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿ ಕೆಲವು ತೋಳಗಳನ್ನು ಹಿಡಿದು 40 ಕಿ.ಮೀ ದೂರದಲ್ಲಿರುವ ಚಾಕಿಯಾ ಅರಣ್ಯದಲ್ಲಿ ಬಿಡಲಾಯಿತು. ಆದರೆ, ಬಹುಶಃ ಇಲ್ಲಿ ತಪ್ಪಾಗಿದೆ. ಚಾಕಿಯಾ ಅರಣ್ಯವು ತೋಳಗಳ ನೈಸರ್ಗಿಕ ಆವಾಸಸ್ಥಾನವಲ್ಲ. ಹೀಗಾಗಿ ತೋಳಗಳು ಹಿಂತಿರುಗಿ ಸೇಡು ತೀರಿಸಿಕೊಳ್ಳಲು ಈ ದಾಳಿಗಳನ್ನು ನಡೆಸುತ್ತಿರುವ ಸಾಧ್ಯತೆಯಿದೆ ಎಂದು ಜ್ಞಾನ್ ಪ್ರಕಾಶ್ ಸಿಂಗ್​ ಹೇಳಿದರು.
ಅರಣ್ಯ ಇಲಾಖೆಯು ಇಲ್ಲಿಯವರೆಗೆ ಸೆರೆಹಿಡಿಯಲಾದ ನಾಲ್ಕು ತೋಳಗಳ ಬಗ್ಗೆ ಮಾತನಾಡಿದ ಸಿಂಗ್, ಇದುವರೆಗೆ ಸಿಕ್ಕಿಬಿದ್ದಿರುವ ನಾಲ್ಕು ತೋಳಗಳು ನರಭಕ್ಷಕರು ಎಂಬ ಭರವಸೆ ಇಲ್ಲ. ನರಭಕ್ಷಕರು ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ. ಬಹುಶಃ ಇದರಿಂದಾಗಿಯೇ ಮೂರ್ನಾಲ್ಕು ದಾಳಿಗಳು ನಡೆದಿವೆ ಎಂದರು.
ಬಹ್ರೈಚ್‌ನ ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಮಾತನಾಡಿ, ಸಿಂಹಗಳು ಮತ್ತು ಚಿರತೆಗಳು ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿಲ್ಲ, ಆದರೆ ತೋಳಗಳು ಹೊಂದಿವೆ. ತೋಳಗಳ ಆವಾಸಸ್ಥಾನಕ್ಕೆ ಯಾವುದೇ ತೊಂದರೆ ಉಂಟಾದರೆ ಅಥವಾ ಅವುಗಳ ಮರಿಗಳನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಿದರೆ, ಅವು ಮನುಷ್ಯರನ್ನು ಬೇಟೆಯಾಡುವ ಮೂಲಕ ಸೇಡು ತೀರಿಸಿಕೊಳ್ಳುತ್ತವೆ ಎಂದು ಹೇಳಿದರು.
ನರಭಕ್ಷಕ ತೋಳಗಳನ್ನು ಹಿಡಿಯಲು ಸಾಧ್ಯವಾಗದಿದ್ದರೆ ಮತ್ತು ಅವುಗಳ ತಮ್ಮ ದಾಳಿಯನ್ನು ಮುಂದುವರಿಸಿದರೆ, ಕೊನೆಯ ಅಸ್ತ್ರವಾಗಿ, ಅವುಗಳನ್ನು ಶೂಟ್ ಮಾಡಲು ಆದೇಶ ನೀಡಲಾಗುವುದು ಎಂದು ದೇವಿಪಟ್ಟಣದ ವಿಭಾಗೀಯ ಆಯುಕ್ತ ಶಶಿಭೂಷಣ್ ಲಾಲ್ ಸುಶೀಲ್ ಹೇಳಿದ್ದಾರೆ. ದೇವಿಪಟ್ಟಣ ವಿಭಾಗವು ಗೊಂಡಾ, ಬಲರಾಮ್‌ಪುರ್, ಬಹ್ರೈಚ್ ಮತ್ತು ಶ್ರಾವಸ್ತಿ ಜಿಲ್ಲೆಗಳನ್ನು ಒಳಗೊಂಡಿದೆ.
ಅಂದಹಾಗೆ ವರದಿಯ ಪ್ರಕಾರ ಜುಲೈ 17 ರಂದು ಮೊದಲ ದಾಳಿ ನಡೆದಿದ್ದು, ಬಹ್ರೈಚ್‌ನ ಮಹಾಸಿ ಬ್ಲಾಕ್ ಬಳಿಯ 30 ಹಳ್ಳಿಗಳ ಜನರು ಭಯದ ಭೀತಿಯಲ್ಲಿ ನಿತ್ಯವೂ ಬದುಕು ನಡೆಸುತ್ತಿದ್ದಾರೆ. ಮನೆಯಿಂದ ಹೊರಗೆ ಬರಲು ಸಹ ಜನರು ಹೆದರುತ್ತಿದ್ದಾರೆ. ಎಲ್ಲಿಗೆ ಹೋಗಬೇಕಾದರೂ ಗುಂಪು ಗುಂಪಾಗಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ತೋಳಗಳ ಭಯದಿಂದ ಏಕಾಂಗಿಯಾಗಿ ಇರಲು ಸಹ ಭಯಪಡುವಂತಾಗಿದೆ. ಇನ್ನು ಥರ್ಮಲ್ ಡ್ರೋನ್‌ಗಳ ಸಹಾಯದಿಂದ ತೋಳಗಳನ್ನು ಹಿಡಿಯಲು ಉತ್ತರ ಪ್ರದೇಶದ ಅರಣ್ಯ ಇಲಾಖೆಯು ಒಂಬತ್ತು ಸದಸ್ಯರ ತಂಡವನ್ನು ನಿಯೋಜಿಸಿದ್ದು, ಇದುವರೆಗೆ ಹಿಡಿದ 4 ತೋಳಗಳನ್ನು ಲಖನೌ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ.(ಏಜೆನ್ಸೀಸ್​)
ಬೊಜ್ಜು ಕರಗಿಸಿ ಫಿಟ್​ ಆದ ರೋಹಿತ್! ಹಿಟ್​ಮ್ಯಾನ್​ ಹೊಸ ಅವತಾರದ ಹಿಂದಿದೆ ಈ ಮಾಸ್ಟರ್​ ಪ್ಲಾನ್​

ಸಮಂತಾ SSLC ಮಾರ್ಕ್ಸ್​ ಕಾರ್ಡ್ ವೈರಲ್​! ಇಷ್ಟು ಅಂಕ ಹೇಗೆ ಸಾಧ್ಯ? ಅಂಕಪಟ್ಟಿಯಲ್ಲೂ ಇಷ್ಟೊಂದು ತಪ್ಪುಗಳಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − sixteen =
Remember me
