ನೋಯ್ಡಾ:ಗಂಡ ಮನೆಯಲ್ಲಿಲ್ಲದ ಸಮಯದಲ್ಲಿ ಗಂಡನ ತಂಗಿಯೊಂದಿಗೆ ಜಗಳವಾಡಿದ ಮಹಿಳೆಯೊಬ್ಬಳು, ತನ್ನ ಮಗುವಿನೊಂದಿಗೆ 17ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಇದೀಗ ನಾದಿನಿಯೂ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವಂತಾಗಿದೆ.
ಇದನ್ನೂ ಓದಿ:ಬೀಚ್​ನಲ್ಲಿ ಬೆತ್ತಲೆ ಓಡಾಡಿದ್ದ ಮಿಲಿಂದ್​ ವಿರುದ್ಧವೂ ದಾಖಲಾಯ್ತು ಕೇಸ್​
ಶನಿವಾರ ಬೆಳಗ್ಗೆಯೇ ಈ ಘಟನೆ ನಡೆದಿದೆ. 28 ವರ್ಷದ ಮಹಿಳೆಯ ಗಂಡ ತನ್ನೂರಿಗೆ ತೆರಳಿದ್ದರಂತೆ. ಆತನ ತಂಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ನೋಯ್ಡಾದಲ್ಲಿ ಹಾಸ್ಟೆಲ್​ನಲ್ಲಿ ಇರುತ್ತಿದ್ದಳು. ಅಣ್ಣ ಊರಿಗೆ ಹೋದ ಕಾರಣ, ಅತ್ತಿಗೆ ಮತ್ತು ಅಣ್ಣನ ಮಗುವಿನೊಂದಿಗೆ ಇರುವುದಕ್ಕಾಗಿ ಆಕೆ ಅಣ್ಣನ ಮನೆಗೆ ಬಂದಿದ್ದಾಳೆ. ಆದರೆ ಅತ್ತಿಗೆ ಮತ್ತು ನಾದಿನಿಯ ಮಧ್ಯೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಇದರಿಂದ ಮನನೊಂದ ಅತ್ತಿಗೆ ಮಗುವಿನೊಂದಿಗೆ ಕೆಳಕ್ಕೆ ಹಾರಿದ್ದಾಳೆ. ಪೊಲೀಸರು ಸ್ಥಳಕ್ಕೆ ತೆರಳುವಾಗ ಜೀವವಿತ್ತಾದರೂ, ಆಸ್ಪತ್ರೆಗೆ ದಾಖಲಿಸುವುದರೊಗೆ ಪ್ರಾಣ ಹಾರಿಹೋಗಿದೆ.
ಇದನ್ನೂ ಓದಿ:ಮಕ್ಕಳ ರಕ್ಷಣೆಗೆ ನೂರೆಂಟು ಸವಾಲು, ಸಾರ್ವಜನಿಕರಿಂದ ಪ್ರತಿರೋಧ, ವಾಹನ ಸೌಲಭ್ಯವಿಲ್ಲದೆ ಪರದಾಟ
ಘಟನೆಯ ವಿವರ ಪಡೆಯುವುದಕ್ಕೆ ನಾದಿನಿಯನ್ನು ಪ್ರಶ್ನಿಸೋಣವೆಂದರೆ ಇದೀಗ ಆಕೆಯ ಸ್ಥಿತಿಯೂ ಗಂಭೀರವಾಗಿದೆ. ಆಕೆಯ ಮೈಯೆಲ್ಲ ಸುಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗಳಕ್ಕೆ ಕಾರಣವೇನು? ಅತ್ತಿಗೆ ಸಾವನ್ನು ನೋಡಿ ನಾದಿನಿಯೂ ಆತ್ಮಹತ್ಯೆಗೆ ಪ್ರಯತ್ನ ಪಟ್ಟಳೆ ಎನ್ನುವ ವಿಚಾರಗಳು ತನಿಖೆಯಿಂದ ತಿಳಿದುಬರಬೇಕಿದೆ. ಸದ್ಯ ನಾದಿನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. (ಏಜೆನ್ಸೀಸ್​)
7, 8 ವರ್ಷದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 13ರ ಬಾಲಕ

ಪಾರ್ಕಿಂಗ್​ ಸ್ಥಳದಲ್ಲಿ ನಾಯಿ ಮೇಲೇ ಅತ್ಯಾಚಾರ ಮಾಡಿದ ಕಾಮುಕ; ನಾಯಿಯ ಬಾಯಿ ಕಟ್ಟಿ ವಿಕೃತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 13 =
Remember me
