ಉತ್ತರಪ್ರದೇಶ:ಪತ್ನಿ ವ್ಯಾಸಂಗಕ್ಕೆ ಸಹಾಯ ಮಾಡಿದ್ದು, ಜೀವನದಲ್ಲಿ ಮುಂದೆ ಬಂದ ನಂತರ ಆಕೆ ತನ್ನನ್ನು ತೊರೆದಿದ್ದಾಳೆ ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಹೆಂಡತಿಯೊಬ್ಬಳು ಸರ್ಕಾರಿ ನೌಕರಿ ಸಿಕ್ಕಿದ ಬೆನ್ನಲ್ಲೇ ತನ್ನ ಗಂಡನ ಬಿಟ್ಟು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ವಿಶ್ವಕರ್ಮ ಎಂಬ ವ್ಯಕ್ತಿ 2 ವರ್ಷದ ಹಿಂದಷ್ಟೇ ರಿಚಾಳನ್ನು ಮದುವೆಯಾಗಿದ್ದ. ಸರ್ಕಾರಿ ನೌಕರಿ ಆಸೆ ಹೊಂದಿದ್ದ ಪತ್ನಿಗೆ ಓದಿನಲ್ಲೂ ಸಹಾಯ ಮಾಡಿದ್ದ. ಆಕೆಗೆ ಈಗ ಸರ್ಕಾರಿ ಕೆಲಸ ಸಿಕ್ತಾಯಿದ್ದಂತೆ ಗಂಡನನ್ನು ಬಿಟ್ಟು ಪರಾರಿಯಾಗಿದ್ದಾಳೆ. ಮನನೊಂದಿರುವ ಪತಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾನೆ.
ಪತ್ನಿ ಇನ್ನು ಮುಂದೆ ತನ್ನೊಂದಿಗೆ ಮಾತನಾಡುತ್ತಿಲ್ಲ ಮತ್ತು ತನ್ನ ಕರೆಗಳನ್ನು ಸಹ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಕಾಲೇಜಿಗೆ ಭೇಟಿ ನೀಡುವ ನೆಪದಲ್ಲಿ ಮನೆಯಿಂದ ಹೊರಟರು. ಆದರೆ, ಆ ಬಳಿಕ ಆಕೆ ಹಿಂತಿರುಗಿರಲಿಲ್ಲ ಎಂದು ಗೋಳಿಟ್ಟಿದ್ದಾನೆ.
ಅಂದ್ಹಾಗೆ ಗಂಡನ ಬಿಟ್ಟು ಹೋದ ಮಹಿಳೆ ಲೆಕ್ಕಪತ್ರ ಪರಿಶೀಲನಾ ಅಧಿಕಾರಿಯಾಗಿ ನೇಮಕಗೊಂಡಿದ್ದಾಳೆ. 2022 ಫೆಬ್ರವರಿ 6ರಲ್ಲಿ ಇಬ್ಬರು ನ್ಯಾಯಾಲಯದಲ್ಲಿ ಮದುವೆ ಆಗಿದ್ದರು. ಪತ್ನಿ ಮಾಡಿದ ವಂಚನೆಯಿಂದ ಪತಿ ಕಂಗಾಲ್ ಆಗಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 + seventeen =
Remember me
