ಉತ್ತರ ಪ್ರದೇಶ:ಜೂಜಾಟದ ಹುಚ್ಚನ್ನ ಹತ್ತಿಸಿಕೊಂಡವರು ಮನೆ, ಆಸ್ತಿ, ಚಿನ್ನ, ಪಾತ್ರೆ, ಸಾಕು ಪ್ರಾಣಿ… ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗುವುದನ್ನ ಕಂಡಿದ್ದೇವೆ. ಆದರೆ, ಇಲ್ಲೊಬ್ಬ ಜೂಜಾಟಕ್ಕೆ ಮಹಿಳೆ ತನ್ನನ್ನು ತಾನೇ ಪಣಕ್ಕಿಟ್ಟು ಸೋತು ಪರ ಪುರುಷನ ಪಾಲಾಗಿದ್ದಾಳೆ!
ಇಂತಹ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಜೂಜಾಟದಲ್ಲಿ ಗೆದ್ದವ ಮಹಿಳೆಯನ್ನು ತನ್ನ ಮನೆಗೆ ಹೊತ್ತೊಯ್ದಿದ್ದಾನೆ. ಈ ವಿಚಾರ ಗೊತ್ತಾಗಿ ವಾಪಸ್ ಮನೆಗೆ ಬಾ ಎಂದು ಗಂಡ ಗೋಗರೆದರೂ ಪತ್ನಿ ಮಾತ್ರ ಬರಲು ಒಪ್ಪುತ್ತಿಲ್ಲ. ನಾನು ಜೂಜಾಟದಲ್ಲಿ ಸೋತಿರುವೆ. ಕೊಟ್ಟ ಮಾತಿನಂತೆ ನಾನೀಗ ಆಟದಲ್ಲಿ ಗೆದ್ದ ವ್ಯಕ್ತಿಯ ಪಾಲಾಗಿದ್ದೇನೆ ಎಂದು ಹಠ ಹಿಡಿದಿದ್ದಾಳೆ. ಅಂದಹಾಗೆ ಆ ಮಹಿಳೆ ಹೆಸರು ರೇಣು. ಈಕೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಡಿಯೋರಿಯಾ ಜಿಲ್ಲೆಯ ಭಾಗಲ್‌ಪುರ ಬ್ಲಾಕ್‌ನ ದೇವಕಾಲಿ ಪ್ರದೇಶದಲ್ಲಿ ಗಂಡ ಮತ್ತು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಇತ್ತೀಚಿಗೆ ಗಂಡ ಕೆಲಸದ ಮೇರೆಗೆ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ. ದುಡಿಮೆಯ ಹಣವನ್ನು ಪತ್ನಿಗೆ ಕಳುಹಿಸುತ್ತಿದ್ದ. ಅತ್ತ ಲುಡೋ ಜೂಜಾಟದ ವ್ಯಸನ ಅಂಟಿಸಿಕೊಂಡ ರೇಣು, ತನ್ನ ಮನೆಯ ಮಾಲೀಕನ ಜತೆಗೇ ಜೂಜಾಟವಾಡಿ ಪದೇಪದೆ ಸೋತಿದ್ದಾಳೆ.
ಗಂಡ ಕಳುಹಿಸುತ್ತಿದ್ದ ಹಣವನ್ನೂ ಜೂಜಾಟದಲ್ಲೇ ಕಳೆದಿದ್ದಳು. ಸಾಲ ಕೂಡ ಮಾಡಿದ್ದಳು. ಆದರೂ ಸುಮ್ಮನಾಗದ ಈಕೆ, ಮತ್ತೆ ಜೂಜಾಟ ಮುಂದುವರಿಸಿದ್ದು ಪಣಕ್ಕೆ ತನ್ನನ್ನೇ ಇಟ್ಟಿದ್ದಾಳೆ. ಈ ಗೇಮ್​ನಲ್ಲಿ ತಾನು ಸೋತರೆ ನಿನ್ನ ಪಾಲಾಗುವೆ. ನಾನು ನಿನ್ನ ಸ್ವತ್ತಾಗುವೆ ಎಂದಿದ್ದಾಳೆ. ಇಬ್ಬರೂ ಆಟವಾಡಿದ್ದು, ಕೊನೆಗೆ ಈ ಆಟದಲ್ಲೂ ರೇಣು ಸೋತಿದ್ದು, ಮನೆ ಮಾಲೀಕನ ಜತೆ ಹೋಗಿದ್ದಾಳೆ. ಸದ್ಯ ಆತನ ಮನೆಯಲ್ಲೇ ಇದ್ದಾಳೆ.
ಈ ಬಗ್ಗೆ ತನ್ನ ಗಂಡನಿಗೆ ಕರೆ ಮಾಡಿ ರೇಣು ತಿಳಿಸಿದ್ದು, ಆತಂಕಗೊಂಡ ಪತಿ ಊರಿಗೆ ದೌಡಾಯಿಸಿದ್ದಾನೆ. ಪತ್ನಿಗೆ ವಾಪಸ್​ ಮನೆಗೆ ಬಾ ಎಂದು ಎಷ್ಟೇ ಮನವೊಲಿಸಿದರೂ ಆಕೆ ಒಪ್ಪಿಲ್ಲ. ಲುಡೋ ಗೇಮ್​ನಲ್ಲಿ ನಾನು ಸೋತಿರುವೆ. ಬೆಟ್ಟಿಂಗ್​ಗೆ ನನ್ನನ್ನು ನಾನೇ ಪಣಕ್ಕಿಟ್ಟು ಸೋತಿರುವೆ. ಕೊಟ್ಟ ಮಾತಿಗೆ ತಪ್ಪಲಾರೆ ಎಂದಿದ್ದಾಳೆ. ದಿಕ್ಕು ತೋಚದೆ, ಪತ್ನಿಗಾಗಿ ಗಂಡ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ. ಅತ್ತ ಮಕ್ಕಳೂ ಅನಾತವಾಗಿವೆ.(ಏಜೆನ್ಸೀಸ್​)
ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ! ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಪುತ್ರನ ಬದುಕು ದುರಂತ ಅಂತ್ಯ

ಲೇಡಿ ಪಿಎಸ್​ಐ ಕಿರುಕುಳ ಕೊಡುತ್ತಿದ್ದಾರೆ… ಡೆತ್​ನೋಟ್​ ಬರೆದಿಟ್ಟು ನಾಪತ್ತೆಯಾಗಿದ್ದ ಸಿರಿವಾರದ ಯುವಕ 3 ದಿನದ ಬಳಿಕ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
