ಜೈಪುರ:ಮಕ್ಕಳು ಸಣ್ಣ ತಪ್ಪು ಮಾಡಿದರೂ ಅಮ್ಮ ಸಹಿಸುವುದಿಲ್ಲ. ಬೈದು, ಹೊಡೆದು ಬುದ್ಧಿ ಹೇಳುತ್ತಾಳೆ. ಅದರೆ ಇಲ್ಲೊಬ್ಬ ತಾಯಿ ಮಾತ್ರ ಮಗ ಕೊಲೆ ಮಾಡುತ್ತಿದ್ದರೂ ಆತನನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಮಗನನ್ನು ತಪ್ಪು ಮಾಡುವದರಿಂದ ತಪ್ಪಿಸಬೇಕಾಗಿದ್ದ ತಾಯಿ ಇಲ್ಲಿ ಮಾಡಿದ್ದು ಏನೆಂದು ಕೇಳಿದರೆ ನೀವು ಗಾಬರಿಯಾಗುತ್ತೀರಿ.
ಇದನ್ನೂ ಓದಿ:Video | ಇಷ್ಟ್​ ಚಿಕ್ ಹುಡುಗ ಸಾಯಿಸ್ತೀನಿ ಅಂದಿದ್ಯಾಕೆ!; ಈ ವಿಡಿಯೋ ನೋಡಿದ್ರೆ ನೀವು ಫಿದಾ ಆಗ್ತೀರಿ!
ರಾಜಸ್ಥಾನದ ಕೋಟಾ ಜಿಲ್ಲೆಯ ಬಾಂಬೆ ವಸತಿ ಯೋಜನೆಯಲ್ಲಿ ಸದ್ದಾಮ್​ (33) ಹೆಸರಿನ ವ್ಯಕ್ತಿ ತನ್ನ ಕುಟುಂಬದೊಂದಿಗೆ ಬದುಕುತ್ತಿದ್ದ. ಪಕ್ಕದ ಮನೆಯಲ್ಲಿ ಆರೋಪಿ ಬಾಲಕನ ಕುಟುಂಬವಿತ್ತು. ಇತ್ತೀಚೆಗೆ ಒಂದು ದಿನ ಸೈಕಲ್​ ಓಡಿಸುತ್ತಿದ್ದ ಬಾಲಕ, ಸದ್ದಾಮ್​ನ ಪುಟ್ಟ ಸೋದರ ಸೊಸೆಯನ್ನು ಗುರಾಯಿಸಿದ್ದನಂತೆ. ಈ ವಿಚಾರವಾಗಿ ಸದ್ದಾಮ್​ ಮಂಗಳವಾರದಂದು ಬಾಲಕನಿಗೆ ಬೈದಿದ್ದಾನೆ. ಇನ್ನೊಮ್ಮೆ ಆ ರೀತಿ ಗುರಾಯಿಸಬೇಡ ಎಂದು ಬುದ್ಧಿ ಹೇಳಿದ್ದಾನೆ.
ಸದ್ದಾಮ್​ ಬುದ್ಧಿ ಹೇಳಿದ್ದಕ್ಕೆ ಸಿಟ್ಟಾದ ಬಾಲಕ ಆತನ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕು ಎಂದು ಯೋಚಿಸಿದ್ದಾನೆ. ಅದೇ ದಿನ ರಾತ್ರಿ ಸದ್ದಾಮ್​ ಮನೆ ಎದುರು ನಿಂತು ಆತನನ್ನು ಹೊರಗೆ ಬರುವಂತೆ ಕೂಗಿದ್ದಾನೆ. ಬಾಲಕನ ಕೂಗು ಕೇಳಿ ಹೊರಬಂದ ಸದ್ದಾಮ್​ಗೆ ಬಾಲಕ ಚಾಕುವಿನಿಂದ ಇರಿದಿದ್ದಾನೆ. ಅಘಾತಕಾರಿ ವಿಚಾರವೇನೆಂದರೆ ಬಾಲಕ ಸದ್ದಾಮ್​ನ ಹೊಟ್ಟೆಗೆ ಚಾಕುವಿನಿಂದ ಇರಿಯುವಾಗ ಬಾಲಕನ ತಾಯಿಯೇ ಸದ್ದಾಮ್​ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಳಂತೆ. ಸದ್ದಾಮನ ಮೇಲೆ ಮಗನಿಗಿದ್ದ ಕೋಪ ತಣ್ಣಗಾಗುವವರೆಗೂ ಚಾಕು ಇರಿಯಲು ಬಿಟ್ಟ ತಾಯಿ ನಂತರ ಮಗನೊಂದಿಗೆ ಮನೆಗೆ ಹೋಗಿ ನಿದ್ದೆ ಮಾಡಿದ್ದಾಳೆ.
ಇದನ್ನೂ ಓದಿ:ಮುಂಬೈ ದಾಳಿಗೆ 12 ವರ್ಷ- ಸಾವಿಗೇ ಸವಾಲೆಸೆದು ಹುತಾತ್ಮರಾದ ಯೋಧರಿವರು…
ರಕ್ತದ ನಡುವೆ ಬಿದ್ದ ಸದ್ದಾಮ್​ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಬುಧವಾರ ಬಾಲಕನ ಮನೆಗೆ ಬಂದ ಪೊಲೀಸರು ತಾಯಿ ಮತ್ತು ಮಗನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. (ಏಜೆನ್ಸೀಸ್​)
ಆರು ಪತ್ನಿಯರನ್ನು ಏಕಕಾಲದಲ್ಲಿ ಗರ್ಭಿಣಿಯರನ್ನಾಗಿ ಮಾಡಿದ ಪತಿರಾಯ; ಮದುವೆಯಲ್ಲಿ ಟ್ರೆಂಡ್​ ಆದ ಕುಟುಂಬ

VIDEO| ನಾನು ಸಾಯುವ ಸಾಧ್ಯತೆಯಿದೆ ಎಂದು ಭಾವುಕರಾದ ರಾಣಾ: ಕಣ್ಣೀರಿಟ್ಟ ಸಮಂತಾ, ವೀಕ್ಷಕರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + fifteen =
Remember me
