ಭೋಪಾಲ್​:ಗಂಡ ಕೆಲಸದಿಂದ ಲೇಟಾಗಿ ಮನೆಗೆ ಬಂದ ಎನ್ನುವ ಕ್ಷುಲ್ಲಕ ಕಾರಣಕ್ಕೆ ಹೆಂಡತಿ ಆತನ ಮುಖದ ಮೇಲೆ ಬಿಸಿ ಎಣ್ಣೆ ಸುರಿದು, ಗಾಯಗೊಳಿಸಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಆಸ್ಪತ್ರೆಗೆ ದಾಖಲಾಗಿರುವ ಸೌರವ್​ ಗಂಗೂಲಿಯ ಹೃದಯ ಹೇಗಿದೆ? ಡಾ.ದೇವಿ ಶೆಟ್ಟಿ ಏನು ಹೇಳಿದರು ನೋಡಿ..
35 ವರ್ಷದ ಶಿವಕುಮಾರಿ ಅಹಿರ್ವಾರ್​ ಗಂಡ ಅರವಿಂದ್​ ಅಹಿರ್ವಾರ್(38)​ ಜತೆ ಸಾಗರದಲ್ಲಿ ಬದುಕುತ್ತಿದ್ದಳು. ಅರವಿಂದ್ ದೈನಂದಿನ ಸಂಬಳಕ್ಕೆ ದುಡಿಯುವ ಕೂಲಿ ಕಾರ್ಮಿಕನಾಗಿದ್ದ. ಕೆಲಸದ ಒತ್ತಡದಿಂದಾಗಿ ಆತ ಕೆಲವು ದಿನ ಮನೆಗೆ ಲೇಟಾಗಿ ಬರುತ್ತಿದ್ದನಂತೆ. ಆಗೆಲ್ಲ ಶಿವಕುಮಾರಿ ಅವನೊಂದಿಗೆ ಜಗಳವಾಡುತ್ತಿದ್ದಳಂತೆ.
ಇತ್ತೀಚೆಗೆ ಒಂದು ದಿನ ಅರವಿಂದ್​ ಲೇಟಾಗಿ ಮನೆಗೆ ಬಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಶಿವಕುಮಾರಿ, ಗಂಡನೊಂದಿಗೆ ಜಗಳವಾಡಿದ್ದಾಳೆ. ಇಬ್ಬರ ಜಗಳ ತಾರಕಕ್ಕೇರುವಷ್ಟರಲ್ಲಿ ಕುಟುಂಬಸ್ಥರು ಮಧ್ಯೆ ಪ್ರವೇಶಿಸಿದ್ದು, ಜಗಳ ನಿಲ್ಲಿಸಿದ್ದಾರೆ. ಜಗಳ ನಿಲ್ಲಿಸಿ ಎಲ್ಲರೂ ನಿದ್ರೆ ಮಾಡಿದ್ದಾರೆ. ಆದರೆ ಶಿವಕುಮಾರಿಗೆ ಸಿಟ್ಟು ಕರಗಿಲ್ಲ. ಬೆಳಗ್ಗೆ 5 ಗಂಟೆ ಸಮಯಕ್ಕೆ ಎದ್ದು ಸಿಟ್ಟಿನಿಂದ ಗಂಡನ ಮುಖದ ಮೇಲೆ ಬಿಸಿ ಎಣ್ಣೆ ಸುರಿದಿದ್ದಾಳೆ. ಸುಡುತ್ತಿದ್ದ ಎಣ್ಣೆಯಿಂದಾಗಿ ಅರವಿಂದ್​ ಮುಖ ಸುಟ್ಟಿದ್ದು, ಆತ ಚೀರಿಕೊಂಡಿದ್ದಾನೆ. ಅರವಿಂದ್​ ಕೂಗಿಕೊಳ್ಳುವುದನ್ನು ಕೇಳಿಸಿಕೊಂಡ ಕುಟುಂಬಸ್ಥರು, ಅವನ ರೂಮಿಗೆ ಬಂದಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಸಂಕ್ರಾಂತಿಯೊಳಗೇ ಸಿಗಲಿದೆ ಕರೊನಾ ಲಸಿಕೆ! ಲಸಿಕೆ ವಿತರಣೆಗೆ ಮುಹೂರ್ತವಿಟ್ಟ ಕೇಂದ್ರ ಸರ್ಕಾರ
ಶಿವಕುಮಾರಿಯ ವಿರುದ್ಧ ಕುಟುಂಬ ದೂರು ದಾಖಲಿಸಿದೆ. ಸಿಟ್ಟಿನಿಂದಾಗಿ ನಾನು ತಪ್ಪು ಮಾಡಿದೆ ಎಂದು ಶಿವಕುಮಾರಿ ಒಪ್ಪಿಕೊಂಡಿರುವುದಾಗಿ ಆಖೆಯ ಸಹೋದರ ತಿಳಿಸಿದ್ದಾರೆ. (ಏಜೆನ್ಸೀಸ್​)
ತಂಗಿಗಾಗಿ ಅಕ್ಕನನ್ನೇ ನಗ್ನಗೊಳಿಸಿದ! ಸಹಾಯಕ್ಕೆ ಕೇಳಿ ಬರಲಿ ಎಂದು ಕಾದಿದ್ದವನಿಗೆ ಕಾದಿತ್ತು ದೊಡ್ಡ ಶಾಕ್​!

ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − ten =
Remember me
