ಹೈದರಾಬಾದ್​:ಗಂಡನ ಕುಡಿತದ ಚಟ ಮತ್ತು ಆತ ಕೊಡುತ್ತಿದ್ದ ಕಿರುಕುಳವನ್ನು ತಾಳಲಾರದ ಹೆಂಡತಿ, ಮನೆಯಲ್ಲಿದ್ದ ಕುಟ್ಟಾಣಿಯಿಂದಲೇ ಗಂಡನ ತಲೆ ಕುಟ್ಟಿ ಕೊಂದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.
ಇದನ್ನೂ ಓದಿ:ಅಮ್ಮ ಮಗಳನ್ನು ರಸ್ತೆಯಲ್ಲೇ ರೇಪ್​ ಮಾಡಿದ ಕಾಮುಕರು! ರಕ್ಷಿಸುವುದನ್ನು ಬಿಟ್ಟು ವಿಡಿಯೋ ಮಾಡಿ ಪೋಸ್ಟ್ ಮಾಡಿದ ಸ್ಥಳೀಯ!
ನಗರದ ಕೆಸ್ಸಾರದ ಉದ್ಯಮಿ ದಶರಥ್​ ಹೆಸರಿನ ವ್ಯಕ್ತಿಗೆ ಸೇರಿದ ಫ್ಲ್ಯಾಟ್​ ಒಂದಕ್ಕೆ ಶ್ಯಾಮ್​ ಹೆಸರಿನ ವ್ಯಕ್ತಿಯನ್ನು ವಾಚ್​ಮೆನ್​ ಆಗಿ ನೇಮಿಸಿಕೊಳ್ಳಲಾಗಿತ್ತು. ಶ್ಯಾಮ್​ಗೆ ಮದುವೆಯಾಗಿದ್ದು, ಮೂರು ವರ್ಷದ ಮಗುವಿದೆ. ಫ್ಲ್ಯಾಟ್​ನ ಹತ್ತಿರದಲ್ಲೇ ಶೆಡ್​ ಒಂದನ್ನು ನಿರ್ಮಿಸಿಕೊಂಡು ಅದರಲ್ಲೇ ಆತನ ಕುಟುಂಬ ಜೀವಿಸುತ್ತಿತ್ತು. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಶ್ಯಾಮ್​ ಪ್ರತಿದಿನ ಕುಡಿದೇ ಬರುತ್ತಿದ್ದನಂತೆ.
ಇದನ್ನೂ ಓದಿ:ಮಗಳಿಗೆ ಹೆಮ್ಮೆಯಿಂದ ಸಲ್ಯೂಟ್ ಮಾಡಿದ ಸರ್ಕಲ್ ಇನ್ಸ್​ಪೆಕ್ಟರ್!
ಗಂಡನ ಕುಡಿತದ ಚಟದಿಂದ ಪತ್ನಿ ಸರೋಜಾ ಬೇಸತ್ತಿದ್ದಳು. ಕುಡಿತ ಬಿಡುವಂತೆ ಸಾಕಷ್ಟು ಬಾರಿ ಬೇಡಿಕೊಂಡಿದ್ದಳು. ಆದರೆ ಅದ್ಯಾವುದಕ್ಕೂ ಶ್ಯಾಮ್​ ಬಗ್ಗಿರಲಿಲ್ಲ. ಕುಡಿದು ಬಂದು ಸದಾ ಹೆಂಡತಿಗೆ ಕಿರುಕುಳ ನೀಡುತ್ತಿದ್ದನಂತೆ. ಅದರಂತೆ ಶನಿವಾರದಂದು ಮನೆಗೆ ಕುಡಿದು ಬಂದ ಶ್ಯಾಮ್​ ಹೆಂಡತಿ ಮತ್ತು ಮಗುವಿಗೆ ಹೊಡೆಯಲಾರಂಭಿಸಿದ್ದಾನೆ. ಇದರಿಂದಾಗಿ ರೊಚ್ಚಿಗೆದ್ದ ಸರೋಜಾ ಗಂಡನ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಮನೆಯಲ್ಲಿದ್ದ ಕುಟ್ಟಾಣಿ ತೆಗೆದುಕೊಂಡು ಗಂಡನ ತಲೆಯೆ ಮೇಲೆ ಜೋರಾಗಿ ಹೊಡೆಯಲಾರಂಭಿಸಿದ್ದಾಳೆ. ಆತನ ಮೇಲಿದ್ದ ಸಿಟ್ಟೆಲ್ಲ ತೀರುವವರೆಗೂ ಹೊಡೆದಿದ್ದಾಳೆ. ಭಾರೀ ಹೊಡೆತ ತಿಂದ ಶ್ಯಾಮ್​ ಅಲ್ಲಿಯೇ ಸಾವನ್ನಪ್ಪಿದ್ದಾನೆ. ಆತನ ಮನೆಯ ಅಕ್ಕ ಪಕ್ಕದಲ್ಲಿ ನೆಲೆಸಿದ್ದವರು ಈ ವಿಚಾರವನ್ನು ಉದ್ಯಮಿ ದಶರಥಗೆ ಕರೆ ಮಾಡಿ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸರೋಜಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)
‘ಸಿದ್ದರಾಮಯ್ಯನವರು ನಮ್ಮೂರಿಗೆ ಏನೂ ಮಾಡಿಲ್ಲ’ ಸಿದ್ದರಾಮಯ್ಯ ಎದುರೇ ಅಸಮಾಧಾನ ತೋಡಿಕೊಂಡ ಗ್ರಾ.ಪಂ ಸದಸ್ಯ! ವೇದಿಕೆಯಿಂದ ಕೆಳಕ್ಕೆ ನೂಕಿದ ಸಿದ್ದರಾಮಯ್ಯ!

54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
