ಚೆನ್ನೈ:ಮಾಜಿ ಮುಖ್ಯಮಂತ್ರಿ ಪುತ್ರ ತನಗೆ ಕಿರುಕುಳ ನೀಡುತ್ತಿದ್ದು, ತನಗೆ ಮತ್ತು ತನ್ನ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕೆಂದು ಮಹಿಳೆಯೊಬ್ಬಳು ದೂರು ನೀಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.ಇದನ್ನೂ ಓದಿ:ಹೆಂಡತಿ ಮೆಚ್ಚಿಸಲು ದೊಡ್ಡ ಸಾಹಸಕ್ಕೆ ಕೈಹಾಕಿದ ಗಂಡ: ನಡೆದದ್ದು ಮಾತ್ರ ಜೀವನದಲ್ಲಿ ಎಂದೂ ಮರೆಯದ ಆಘಾತತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂರ ಪುತ್ರ ಪಿ.ರವೀಂದ್ರನಾಥ್ ತನಗೆ ಕಿರುಕುಳ ನೀಡುತ್ತಿದ್ದಾರೆ. ಆತ ತನಗೆ ಲೈಂಗಿಕವಾಗಿ ಸಹಕರಿಸುವಂತೆ ವಿಡಿಯೋ ಕಾಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಅಲ್ಲದೇ, ರವೀಂದ್ರನಾಥ್ ತನಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಮಹಿಳೆ ಮಂಗಳವಾರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕಚೇರಿಗೆ ದೂರು ನೀಡಿದ್ದಾಳೆ.ಮಹಿಳೆಯು, 2014ರಲ್ಲಿ ಪನ್ನೀರಸೆಲ್ವಂರ ಮಗನನ್ನು ಮದುವೆ ಸಮಾರಂಭದಲ್ಲಿ ಭೇಟಿಯಾಗಿದ್ದೆ. ಕೊಡೈಕೆನಾಲ್‌ನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಸ್ನೇಹಿತೆ ನಾಗಪ್ರಿಯಾ ಈ ವೇಳೆ ತನ್ನನ್ನು ರವೀಂದ್ರನಾಥ್, ಆತನ ಪತ್ನಿ ಅನಂತಿ ಮತ್ತು ಸಹೋದರಿ ಕವಿತಾಗೆ ಪರಿಚಯಿಸಿದ್ದಳು. ತಾನು 2022ರಲ್ಲಿ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದು, ರವೀಂದ್ರ ಏಪ್ರಿಲ್ ತಿಂಗಳಿನಲ್ಲಿ ಮಧ್ಯರಾತ್ರಿ 1 ಗಂಟೆಗೆ ವಾಟ್ಸಾಪ್ ಕರೆ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ.ಎಐಎಡಿಎಂಕೆ ಪಕ್ಷದ ಏಕೈಕ ಸಂಸದ ರವೀಂದ್ರನಾಥ್​​ರ ಆಯ್ಕೆ ಅನೂರ್ಜಿತ ಎಂದು ಮದ್ರಾಸ್ ಹೈಕೋರ್ಟ್ ಕಳೆದ ಜುಲೈನಲ್ಲಿ ಘೋಷಿಸಿತ್ತು, ಆದಾಯದ ಮೂಲಗಳ ದಮನ ಮತ್ತು ಮತದಾರರಿಗೆ ಲಂಚ ನೀಡುವ ಆಧಾರದ ಮೇಲೆ ರವೀಂದ್ರನಾಥ್ ಆಯ್ಕೆಯನ್ನು ಪ್ರಶ್ನಿಸಿ ಅರ್ಜಿಯ ಸಲ್ಲಿಸಲಾಗಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
