ರಾಯ್​ಪುರ:ಮದುವೆಯಾಗಿ ಐದು ಹೆಣ್ಣು ಮಕ್ಕಳಿದ್ದರೂ, ಜವಾಬ್ದಾರಿ ವಹಿಸದೆ, ಕಂಠಪೂರ್ತಿ ಕುಡಿದು ಮನೆಗೆ ಬರುತ್ತಿದ್ದ ಗಂಡನ ಬಗ್ಗೆ ಮನನೊಂದ ಹೆಂಡತಿ, ತನ್ನ ಮಕ್ಕಳೊಂದಿಗೆ ರೈಲಿಗೆ ತಲೆ ಕೊಟ್ಟು ಪ್ರಾಣ ಬಿಟ್ಟಿರುವ ಘಟನೆ ಛತ್ತೀಸಗಢದ ಮಹಾಸಮುಂದ್​ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಜಿಲ್ಲೆಯ ಬೆಮ್ಚಾ ಗ್ರಾಮದ ನಿವಾಸಿ ಉಮಾ ಸಾಹು ಹಾಗೂ ಅವರ ಮಕ್ಕಳಾದ ಅನ್ನಪೂರ್ಣ, ಭೂಮಿಕಾ, ಸ್ವಾಜಾ, ತುಳಸಿ ಮತ್ತು ಕುಮ್ಕುಮ್ ಎಂದು ಗುರುತಿಸಲಾಗಿದೆ. ಉಮಾಳ ಗಂಡ ರಾಮ್ ಸಾಹು ಕುಡುಕನಾಗಿದ್ದು, ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಜಗಳವಾಡುತ್ತಿದ್ದ. ಅದೇ ರೀತಿ ನಿನ್ನೆಯೂ ಕಂಠ ಪೂರ್ತಿ ಕುಡಿದು ಮನೆಗೆ ಬಂದು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ.
ಪ್ರತಿನಿತ್ಯ ಜಗಳವಾಡುತ್ತಿದ್ದ ಗಂಡನ ಹಿಂಸೆಯನ್ನು ತಾಳಲಾರದ ಉಮಾ ತನ್ನ ಐದು ಹೆಣ್ಣು ಮಕ್ಕಳನ್ನು ಕರೆದುಕೊಂಡು ರೈಲು ಹಳಿ ಬಳಿ ಹೋಗಿದ್ದಾಳೆ. ರೈಲು ಬರುವ ಸಮಯ ನೋಡಿ ರೈಲಿನ ಎದುರು ಜಿಗಿದು ಆರೂ ಜನರು ಪ್ರಾಣ ಬಿಟ್ಟಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಬಟ್ಟೆಯೇ ಹಾಕದೆ, ಕೇವಲ ಆಭರಣ ತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡ ಮಿಯಾ ಖಲೀಫಾ!

ಸ್ನೇಹಿತರಿಂದ ಹೆಂಡತಿಯನ್ನೇ ರೇಪ್​ ಮಾಡಿಸಿದ ಗಂಡ! ಸಾಲದ ಬದಲು ಸೆಕ್ಸ್​ ಎಂದ ಪಾಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + five =
Remember me
