ಮುಂಬೈ:ಎರಡು ತಿಂಗಳ ಹಿಂದೆ ಪತಿಯೊಂದಿಗೆ ಜಗಳವಾಡಿ ಮೂರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದ ಮಹಿಳೆಯ ಮೃತದೇಹ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಂಡನಿಂದಾಗಿ ನೊಂದ ಮಹಿಳೆ ತನ್ನ ಮಕ್ಕಳೊಂದಿಗೆ ನೇಣಿಗೆ ಶರಣಾಗಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ಜಾನಪದ ಕಲಾವಿದರಿಗೆ ತಿಂಗಳಿಗೆ 5 ಸಾವಿರ ವಿದ್ಯಾರ್ಥಿವೇತನ ಘೋಷಣೆ
ಇಂತದ್ದೊಂದು ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ತಾಲೂಕಿನಲ್ಲಿ ನಡೆದಿದೆ. ರಂಜನಾ (30) ಮತ್ತು ಶ್ರೀಪಥ್​ ದಂಪತಿಗೆ ಮೂರು ಮಕ್ಕಳಿದ್ದರು. ಆದರೂ ಶ್ರೀಪಥ್​ ರಂಜನಾಳ ದೂರದ ಸಂಬಂಧಿ ಸವಿತಾ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರವಾಗಿ ದಂಪತಿಯ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಎರಡು ತಿಂಗಳ ಹಿಂದೆ ಶ್ರೀಪಥ್​ ಸವಿತಾಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವಿಚಾರವಾಗಿ ದೊಡ್ಡ ಜಗಳವೇ ಆಗಿದೆ. ನಾಲ್ಕು ದಿನ ಅವರೊಂದಿಗೆ ರಂಜನಾ ಬದುಕಿದ್ದಾಳೆ. ಅಕ್ಟೋಬರ್​ 20ರಂದು ಮತ್ತೊಮ್ಮೆ ಜಗಳವಾಡಿದ್ದು, ತನ್ನ ಮೂರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ.
ಮನೆ ಬಿಟ್ಟು ಹೋದ ರಂಜನಾ ಮತ್ತು ಮಕ್ಕಳಿಗಾಗಿ ಶ್ರೀಪಥ್​ ಹುಡುಕಾಡಿದ್ದಾನೆ. ನಂತರ ಪೊಲೀಸ್​ ಠಾಣೆಯಲ್ಲಿ ಕಾಣೆಯಾಗಿರುವ ದೂರು ದಾಖಲಿಸಿದ್ದಾನೆ. ಗುರುವಾರ ಗ್ರಾಮಸ್ಥರೊಬ್ಬರು ಕಾಡೊಳಗೆ ಕಟ್ಟಿಗೆ ತರಲು ಹೋದಾಗ ದುರ್ವಾಸನೆ ಬಂದಿದೆ. ಏನೆಂದು ಹುಡುಕಿದಾಗ ಒಂದು ಮರದಲ್ಲಿ ನಾಲ್ಕು ದೇಹಗಳು ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಪೊಲೀಸರಿಗೆ ವಿಷಯ ತಿಳಿಸಿ, ಶವ ಗುರುತಿಸಲು ಶ್ರೀಪಥ್​ ಮತ್ತು ಸವಿತಾರನ್ನು ಕರೆಸಲಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ದೇಹಗಳನ್ನು ರಂಜನಾ, ದರ್ಶನ್​ (12), ರೋಹಿತ್​ (9), ರೋಷಿಣಿ(6) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್​ ಬಿಜೆಪಿ ಒಟ್ಟಾಗಿದಾವೆ! ನಾವು ಮೈತ್ರಿ ಮುರೀತೀವೆ ಎಂದ ಮೈತ್ರಿ ಪಕ್ಷ
ಶವ ಗುರುತಿಸಿದ ಶ್ರೀಪಥ್​ ದಂಪತಿ ಮನೆಗೆ ಹೋಗಿ ವಿಷ ಕುಡಿದು ಸಾಯುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ವಿರುದ್ಧ ರಂಜನಾ ಆತ್ಮಹತ್ಯೆ ಪ್ರೇರೇಪಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)
8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?

ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 8 =
Remember me
