ಪಾಟನಾ:ಮಹಿಳೆಯೊಬ್ಬರು ರೈಲು ಹತ್ತಲು ಯತ್ನಿಸಿ ಇಬ್ಬರು ಮಕ್ಕಳೊಂದಿಗೆ ಪ್ಲಾಟ್‌ಫಾರ್ಮ್‌ನಿಂದ ಬಿದ್ದಿದ್ದಾರೆ. ರೈಲು ಚಲಿಸುತ್ತಿದ್ದಂತೆ ಮಕ್ಕಳನ್ನು ರಕ್ಷಿಸಲು ಯತ್ನಿಸಿದ್ದಾಳೆ. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಅನಿಮಲ್ ಒಟಿಟಿ ಬಿಡುಗಡೆ?: ನಿರ್ದೇಶಕರು ಆ ಶಾಟ್‌ಗಳನ್ನು ಸೇರಿಸುತ್ತಿರುವುದು ಏಕೆ?ಬಿಹಾರದ ಬೇಗುಸರಾಯ್‌ನ ಮಹಿಳೆಯೊಬ್ಬರು ಕುಟುಂಬ ಸಮೇತ ದೆಹಲಿಗೆ ತೆರಳಲು ಶನಿವಾರ ಬಾರ್ಹ್ ರೈಲು ನಿಲ್ದಾಣಕ್ಕೆ ಬಂದಿದ್ದರು. ತನ್ನ ಇಬ್ಬರು ಮಕ್ಕಳೊಂದಿಗೆ ವಿಕ್ರಮಶೀಲ ಎಕ್ಸ್‌ಪ್ರೆಸ್‌ ರೈಲು ಹತ್ತಲು ಯತ್ನಿಸಿದ್ದಾರೆ. ಆದರೆ ಭಾರೀ ಟ್ರಾಫಿಕ್‌ನಿಂದಾಗಿ ಇಬ್ಬರು ಮಕ್ಕಳೊಂದಿಗೆ ತೌಪುಲತ್‌ನಲ್ಲಿ ಪ್ಲಾಟ್‌ಫಾರ್ಮ್‌ನಿಂದ ರೈಲು ಹಳಿಗೆ ಬಿದ್ದಿದ್ದಾರೆ.
ಕೃಪೆ:https://twitter.com/smaurya_journo/status/1738816807660834989
ಅಷ್ಟರಲ್ಲಿ ರೈಲು ನಿಲ್ದಾಣದಿಂದ ಮುಂದಕ್ಕೆ ತೆರಳಿದೆ. ಆದರೆ ರೈಲು ಹಳಿ ಮೇಲೆ ಬಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ರಕ್ಷಿಸಲು ಯತ್ನಿಸಿದ್ದಾಳೆ. ಆಕೆ ಅವರನ್ನು ಬಿಗಿಯಾಗಿ ಹಿಡಿದು ಅಪಾಯದಿಂದ ರಕ್ಷಿಸಿದ್ದಾಳೆ. ಈ ರೋಚಕ ಘಟನೆ ಎಂತಹವರನ್ನೂ ಮೈ ಜುಂ ಎನಿಸುವಂತಿದೆ. ಅದೃಷ್ಟವಶಾತ್ ಮಹಿಳೆ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತೊಂದೆಡೆ, ರೈಲು ಹೋದ ತಕ್ಷಣ ಪ್ಲಾಟ್‌ಫಾರ್ಮ್‌ನಲ್ಲಿದ್ದ ಕೆಲವರು ಕೆಳಗೆ ಇಳಿದರು. ರೈಲು ಹಳಿಗಳ ಮೇಲೆ ಬಿದ್ದ ಮಹಿಳೆ ಮತ್ತು ಆಕೆಯ ಮಕ್ಕಳನ್ನು ಪ್ಲಾಟ್‌ಫಾರ್ಮ್‌ನ ಮೇಲಕ್ಕೆ ಎತ್ತಿದರು. ಸಣ್ಣಪುಟ್ಟ ಗಾಯಗಳಾಗಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತು. ಕೆಲವರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿರುವ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅದೃಷ್ಟವೋ, ಜನರು ಹೇಳವಂತೆ ಆಯಸ್ಸು ಗಟ್ಟಿಯಾಗಿದ್ದರೆ ಹೇಗಾದರೂ ಜೀವ ಉಳಿಯುತ್ತದೆ. ಅದಿಲ್ಲದಿದ್ದರೆ ಎಂತಹ ರಕ್ಷಣೆಯಲ್ಲಿದ್ದರೂ ಬದುಕುಳಿಯಲಾಗದು ಎಂಬುದಕ್ಕೆ ಇದು ನಿದರ್ಶನವಾಗಿ ನಿಲ್ಲುತ್ತದೆ.
ವಂದೇ ಭಾರತ್ ರೈಲ್​ಗಳು ಸ್ಪೀಡ್​ ಹೆಚ್ಚಾಗಲಿದೆಯೇ?: ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
