ಅಸ್ಸಾಂ:ಗೋಲಾಪುರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-17 ರಲ್ಲಿ ಅಸ್ಸಾಂನ(Assam)ಬಿಜೆಪಿಯ ಜಿಲ್ಲಾ ಮಹಿಳಾ ಕಾರ್ಯದರ್ಶಿಯಾಗಿದ್ದ ಜೊನಾಲಿ ನಾಥ್(Jonali Nath)ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ:ವಿಚ್ಛೇದನಕ್ಕಾಗಿ ಪತಿಯಿಂದ 6 ಕೋಟಿ ರೂ. ಜೀವನಾಂಶಕ್ಕೆ ಬೇಡಿಕೆಯಿಟ್ಟ ಪತ್ನಿ…
ಗೋಲಾಪುರ್​ನಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜೊನಾಲಿ ನಾಥ್ ಸಾವನ್ನಪ್ಪಿರುವ ಘಟನೆಯನ್ನು ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ಇದು ಅನುಮಾನಸ್ಪದ ಸಾವಲ್ಲ! ಮುಂಚಿತವಾಗಿ ಸಂಚು ಹೂಡಿ ಹತ್ಯೆ(Murder)ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ನಾವು ಈ ಪ್ರಕರಣವನ್ನು ಹಲವು ಕೋನಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಭಾನುವಾರ ರಾತ್ರಿ ಕೃಷ್ಣ ಸಲಪರ್ ಪ್ರದೇಶದಲ್ಲಿ ಸೊನಾಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕುಟುಂಬಸ್ಥರು ಮಾತನಾಡಿದ್ದು, “ಜೊನಾಲಿ ದೇಹದ ಮೇಲೆ ಹಲವು ಗಾಯಗಳ ಗುರುತಿದೆ. ಇದು ಖಂಡಿತ ಹತ್ಯೆಯೇ! ಕಿಡಿಗೇಡಿಗಳು ಆಕೆಯನ್ನು ಹತ್ಯೆಗೈದು ನಂತರ ದೇಹವನ್ನು ಇಲ್ಲಿ ಎಸೆದಿದ್ದಾರೆ” ಎಂದು ಸುದ್ದಿಗಾರರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಡೊಳ್ಳು ಹೊಟ್ಟೆಯವನೇ ಗಂಡನಾಗಬೇಕೆಂದ ಸುರ ಸುಂದರಾಂಗಿ; ಮದುವೆಗೆ ಷರತ್ತುಗಳು ಅನ್ವಯ!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ,(ಏಜೆನ್ಸೀಸ್).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 4 =
Remember me
