ಬೀಜಿಂಗ್​:ವಿಶ್ವಾದ್ಯಂತ ಈ ಭಾನುವಾರ (ಮೇ 10) ವಿಶ್ವ ಅಮ್ಮಂದಿರ ದಿನ ಆಚರಿಸಲಾಗುತ್ತಿದೆ. ತನ್ನ ಬದುಕಿನುದ್ದಕ್ಕೂ ತನ್ನೆಲ್ಲಾ ಆಸೆ-ಕಾಮನೆಗಳನ್ನು ಬದಗಿತ್ತು, ಗಂಡ, ಮಕ್ಕಳು, ಕುಟುಂಬಕ್ಕಾಗಿ ದುಡಿಯುವ ಅಮ್ಮನಿಗೊಂದು ಪ್ರೀತಿಯ ಹಾರೈಕೆ ಮಾಡುವ ಸಂಬಂಧ ಈ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಇದೇ ಹೊತ್ತಿನಲ್ಲಿ, ಜೀವಂತ ಅಮ್ಮನನ್ನೇ ಸಮಾಧಿ ಮಾಡಿದ್ದಾನೆ ಇಲ್ಲೊಬ್ಬ ಕಟುಕ ಮಗ!
ಇಂಥದ್ದೊಂದು ಭೀಭತ್ಸ ಕೃತ್ಯ ಎಸಗಿರುವುದು ಉತ್ತರ ಚೀನಾದ ಶಾನ್​ಕ್ಸಿ ಪ್ರಾಂತ್ಯದಲ್ಲಿ. ಯಾನ್​ ಎಂಬ 58 ವರ್ಷದ ವ್ಯಕ್ತಿ ಈ ಕೃತ್ಯ ಎಸಗಿದ್ದು ಇದೀಗ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಕಂದಮ್ಮಗಳನ್ನೂ ಬಿಡದ ಕರೊನಾ ಮಾರಿ: ಒಂದೇ ದಿನದಲ್ಲಿ ನಾಲ್ಕು ನಗರ ತತ್ತರ!
ಈತನ 79 ವರ್ಷದ ತಾಯಿಗೆ ಕೆಲವರ್ಷಗಳಿಂದ ಅನಾರೋಗ್ಯ ಬಾಧಿಸಿತ್ತು. ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅವರ ಸೇವೆಯನ್ನು ಮಾಡುವುದು ಈ ಮಗನಿಗೆ ಸಾಕು ಸಾಕಾಗಿ ಹೋಗಿತ್ತು. ಆದ್ದರಿಂದ ಆಕೆಯನ್ನು ಸಾಯಿಸುವ ಯೋಚನೆ ಮಾಡಿದ ಈ ಪಾಪಿ ಮಗ. ಅದಕ್ಕಾಗಿ ಸ್ಕೆಚ್​ ಹಾಕಿಕೊಂಡ ಆತ, ತಾಯಿಯನ್ನು ಹೊರಗೆ ಕರೆದುಕೊಂಡು ಹೋಗುವ ನೆಪದಲ್ಲಿ ಸ್ಮಶಾನಕ್ಕೆ ಕರೆದೊಯ್ದು ಅಲ್ಲಿಯೇ ಜೀವಂತವಾಗಿ ಸಮಾಧಿಯನ್ನೂ ಮಾಡಿಬಿಟ್ಟ.
ಈತ ತಾಯಿಗೆ ನೀಡುತ್ತಿದ್ದ ಹಿಂಸೆ ಹಾಗೂ ಅನುಮಾನಾಸ್ಪದವಾಗಿ ತಾಯಿಯನ್ನು ಕರೆದುಕೊಂಡು ಹೋದುದರನ್ನು ಯಾನ್​ ಹೆಂಡತಿ ನೋಡಿದ್ದಳು. ಮೂರು ದಿನವಾದರೂ ಅತ್ತೆ ಮರಳಿ ಬಾರದಾಗ ಗಂಡನಲ್ಲಿ ಪ್ರಶ್ನಿಸಿದಳು. ಆತ ತಾಯಿ ಇನ್ನಾರದ್ದೋ ಮನೆಗೆ ಹೋಗಿರುವುದಾಗಿ ಸಬೂಬು ಹೇಳಿದ. ಆತನ ಗಂಡನ ಮೇಲೆ ಸಂದೇಹ ಬಂದ ಪತ್ನಿ ಅತ್ತೆ ಕಾಣೆಯಾಗಿರುವ ಬಗ್ಗೆ ಪೊಲೀಸರಲ್ಲಿ ದೂರು ದಾಖಲು ಮಾಡಿದಳು.
ಇದನ್ನೂ ಓದಿ:VIDEO: ಹಂದಿಗಳು ಸಾರ್​ ಹಂದಿಗಳಿವು, ಕಲ್ಲು ತೂರಿದ್ರೆ ಸುಮ್ನೆ ಬಿಟ್ಟಾವೆ?‘
ಪೊಲೀಸರು ವಿಚಾರಣೆ ನಡೆಸಿದಾಗ ಯಾನ್​ ಸತ್ಯಾಂಶ ಬಾಯಿಬಿಟ್ಟಿದ್ದಾನೆ. ನಂತರ ಸಮಾಧಿ ಮಾಡಿದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ನಡೆದದ್ದೇ ಅಚ್ಚರಿಯ ಸಂಗತಿ. ಅದೇನೆಂದರೆ ಸಮಾಧಿ ಮಾಡಿದ ಜಾಗವನ್ನು ಪೊಲೀಸರು ಅಗೆದಾಗ ಅಲ್ಲಿ ಈ ತಾಯಿ ಇನ್ನೂ ಉಸಿರಾಡುತ್ತಿದ್ದರು!
ಪೊಲೀಸರಿಗೆ ಅರೆಕ್ಷಣ ಶಾಕ್​ ಆಯಿತು. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಈಗ ಈ ಕುರಿತು ಪೊಲೀಸರು ಯಾನ್​ನನ್ನು ಬಂಧಿಸಿದ್ದಾರೆ. ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್​)
ಇದನ್ನೂ ಓದಿ:ಅಮೆರಿಕದಲ್ಲಿ ಶೇ.47ರಷ್ಟು ಉದ್ಯೋಗಿಗಳು ಪ್ಯಾಂಟೇ ಹಾಕಲ್ವಂತೆ, ಉಳಿದವರು ಇನ್ನೇನು ಮಾಡ್ತಾರೆ ನೋಡಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + four =
Remember me
