ಲಖನೌ:ಬೇಸಿಗೆ ಮುಗಿದು ಮಳೆಗಾಲ ಆರಂಭವಾದರೂ ಉತ್ತರ ಭಾರತದ ಹಲವೆಡೆ ಬಿಸಿಲಿನ ಆರ್ಭಟ ಹೆಚ್ಚುತ್ತಿದ್ದು, ಉತ್ತರಪ್ರದೇಶದಲ್ಲಿ ತುಸು ಹೆಚ್ಚು ಎಂದು ಹೇಳಬಹುದಾಗಿದೆ. ಜನರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಎಸಿ ಹಾಗೂ ಕೂಲರ್​ಗಳ ಮೊರೆ ಹೋಗುತ್ತಿದ್ದು, ಇದೀಗ ಕೂಲರ್​ ವಿಚಾರವಾಗಿ ಮದುವೆ ಮುದಿರು ಬಿದ್ದಿರುವ ಘಟನೆ ಬೆಳಕಿಗೆ ಬಂದಿದ್ದು, ಇದು ಉತ್ತರಪ್ರದೇಶದ ಬಲಿಯಾದಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಮದುವೆ ಕಾರ್ಯಕ್ರಮಗಳು ಒಂದಿಲ್ಲೊಂದು ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದು, ಕ್ಷುಲಕ ಕಾರಣಗಳಿಗೆ ವ್ಯಾಪಕ ಸದ್ದು ಮಾಡುತ್ತಿವೆ. ಇದೀಗ ಕೂಲರ್​ ವಿಚಾರವಾಗಿ ಶುರುವಾದ ಗಲಾಟೆಯಿಂದ ಮದುವೆ ಮುರಿದು ಬಿದ್ದಿದ್ದು, ಘಟನೆ ಸಾಕಷ್ಟು ಸದ್ದು ಮಾಡುತ್ತಿದೆ. ಇಂತಹ ಕಾರಣಗಳಿಗೂ ಜನ ಮದುವೆ ಮುರಿದುಕೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಕೆಲವು ವರನ ಕಡೆಯವರ ದರ್ಪವನ್ನು ಖಂಡಿಸಿದರೆ, ಇನ್ನೂ ಕೆಲವರು ವಧುವಿನ ಕಡೆಯವರ ನಡೆಗೆ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಆತ ಬೆಂಕಿ ಹಚ್ಚುವುದಂತು ಪಕ್ಕಾ; ಗೌತಮ್​ ಗಂಭೀರ್​ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ಲೆಜಂಡರಿ ಆಟಗಾರ
ಈ ಕುರಿತು ಬಲಿಯಾ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿ ಪಂಕಜ್​ ಜೈಸ್ವಾಲ್​, ಮದುವೆಗೆ ಆಗಮಿಸಿದ ವಧು ಹಾಗೂ ವರನ ಕಡೆಯವರು ಡೆಸರ್ಟ್​ ಕೂಲರ್​ ಎದುರು ಕೂರುವ ವಿಚಾರವಾಗಿ ಜಗಳ ಶುರುವಾಗಿದೆ. ವರನ ಸಂಬಂಧಿಕರ ವರ್ತನೆಯನ್ನು ಪ್ರಶ್ನಿಸಿದ ವಧು ನನಗೆ ಈತನ ಜೊತೆ ಮದುವೆ ಬೇಡ ಎಂದು ನಿರಾಕರಿಸಿ ಹೊರಟು ಹೋಗಿದ್ದಾಳೆ.
ಘಟನೆ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 126 (ತಪ್ಪಾದ ನಿರ್ಬಂಧ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣದಲ್ಲಿ ವರ ಹುಕುಂ ಚಂದ್ ಜೈಸ್ವಾಲ್, ಆತನ ಸಂಬಂಧಿ ಪಂಕಜ್, ವಧುವಿನ ತಂದೆ ನಂದ್ ಜಿ ಗುಪ್ತಾ ಮತ್ತು ಸಹೋದರ ರಾಜೇಶ್​ ಗುಪ್ತಾನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಪಂಕಜ್​ ಜೈಸ್ವಾಲ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
