ಅಹಮದಾಬಾದ್:ಹದಿನೈದು ದಿನದ ಟೂರಿಸ್ಟ್ ವೀಸಾ ಮೇಲೆ ಭಾರತಕ್ಕೆ ಬಂದ ಇಂಡೋನೇಷಿಯಾದ ಮಹಿಳೆಯೊಬ್ಬಳು ಭಾರತೀಯನನ್ನು ಮದುವೆ ಆಗಿ ಎಂಟು ವರ್ಷಗಳಿಂದ ಇಲ್ಲೇ ನೆಲೆಸಿದ್ದಾಳೆ! ಹೆಸರು ಬದಲಿಸಿಕೊಂಡು, ಭಾರತೀಯ ನಾಗರೀಕರಿಗೆ ಮಾತ್ರ ಸಿಗುವ ಆಧಾರ್ ಕಾರ್ಡ್, ಪಾಸ್​ಪೋರ್ಟ್, ವೋಟರ್ ಐಡಿ ಎಲ್ಲವನ್ನೂ ಮಾಡಿಸಿಕೊಂಡಿದ್ದ ಮಹಿಳೆ, ಈಗ ಗಂಡನೊಂದಿಗೆ ಪೊಲೀಸರ ಅತಿಥಿಯಾಗಿದ್ದಾಳೆ.
ಅಹಮದಾಬಾದಿನ ಅದಾಣಿ ಶಾಂತಿಗ್ರಾಂ ಸೊಸೈಟಿಯ ನಿವಾಸಿ ನೀಲು ರೆದಿಯಾ ಅಲಿಯಾಸ್ ಟಿನಿ ಜೋಶಿ ಮತ್ತು ಆಕೆಯ ಗಂಡ ಸಂದೀಪ್ ಜೋಶಿ ಈ ರೀತಿ ಸಿಕ್ಕಿಹಾಕಿಕೊಂಡಿರುವ ದಂಪತಿ. ಈರ್ವರನ್ನೂ ಭಾನುವಾರ (ಫೆಬ್ರವರಿ 14) ಬಂಧಿಸಿರುವ ಅಹಮದಾಬಾದ್ ಪೊಲೀಸರು, ಐಪಿಸಿ ಮತ್ತು ಪಾಸ್​ಪೋರ್ಟ್ ಕಾಯ್ದೆಯಡಿ ಫೋರ್ಜರಿ ಮತ್ತು ಚೀಟಿಂಗ್ ಕೇಸ್​ ದಾಖಲಿಸಿದ್ದಾರೆ.
ಇದನ್ನೂ ಓದಿ:ಮತ್ತಿಗಾಗಿ ಕೆಮ್ಮಿನ ಔಷಧ ಕುಡಿಯುತ್ತಿದ್ದ… ಅದಕ್ಕಾಗಿ ಬ್ಯಾಂಕ್ ಲೂಟಿ ಮಾಡಿದ !
ಇಂಡೋನೇಷಿಯಾದ ನಾಗರೀಕಳಾದ ನೀಲು, 2013ರಲ್ಲಿ ಚೆನ್ನೈನ ಹೋಟೆಲೊಂದರಲ್ಲಿ ವರ್ಕ್ ವೀಸಾದೊಂದಿಗೆ ಕೆಲಸ ಮಾಡುತ್ತಿದ್ದಾಗ ಸಂದೀಪ್​ನನ್ನು ಭೇಟಿಯಾದಳು. ಅವಳ ವೀಸಾ ಎಕ್ಸ್​ಪೈರ್ ಆದ ಮೇಲೆ ಇಂಡೋನೇಷಿಯಾಗೆ ವಾಪಸಾದ ಆಕೆ, ಮತ್ತೆ 15 ದಿನದ ಟೂರಿಸ್ಟ್ ವೀಸಾ ಪಡೆದು ಭಾರತಕ್ಕೆ ಬಂದಳು. ಆಗ ಮದುವೆಯಾದ ಇಬ್ಬರೂ ಅಹಮದಾಬಾದ್​ನಲ್ಲಿ ಸೆಟಲ್ ಆದರು. 2018ರಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಮತ್ತು ಮನೆ ಬಾಡಿಗೆ ಕರಾರನ್ನು ಬಳಸಿಕೊಂಡು ಸಂದೀಪ್, ನೀಲುವಿಗೆ ತನ್ನ ಹೆಂಡತಿ ಟಿನಿ ಜೋಶಿ ಎಂಬುದಾಗಿ ವೋಟರ್ ಕಾರ್ಡ್ ಮಾಡಿಸಿದ. ನಂತರ ಪಾಸ್​ಪೋರ್ಟ್ ಮತ್ತು ಆಧಾರ್ ಕಾರ್ಡ್​ಗಳನ್ನೂ ಮಾಡಿಸಿದ ಎನ್ನಲಾಗಿದೆ.
ಈ ಬಗ್ಗೆ ಸುಳಿವು ಸಿಕ್ಕ ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ದಂಪತಿಯ ಮನೆಗೆ ದಾಳಿಯಿಟ್ಟು, ನಕಲಿ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಹಮದಾಬಾದ್​ನ ಪ್ರಾದೇಶಿಕ ಪಾಸ್​ಪೋರ್ಟ್ ಅಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಸಬ್​ಇನ್ಸ್​ಪೆಕ್ಟರ್ ಎ.ಬಿ.ದೇಸಾಯಿ ತಿಳಿಸಿದ್ದಾರೆ.(ಏಜೆನ್ಸೀಸ್)
ಮಂಗಳ ಗ್ರಹದ ಈ ಹೊಸ ಚಿತ್ರ ನೋಡಿದ್ದೀರಾ ?!
‘ಯಾವ ಭಾರತೀಯನೂ ಈ ದಿನವನ್ನು ಮರೆಯಲು ಸಾಧ್ಯವಿಲ್ಲ’ : ಪುಲ್ವಾಮಾ ಸೈನಿಕರಿಗೆ ಮೋದಿ ನಮನ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 13 =
Remember me
