ನವದೆಹಲಿ:ಫೆ.14ರ ಪ್ರೇಮಿಗಳ ದಿನವನ್ನು ಅನೇಕ ಪ್ರೇಮ ಪಕ್ಷಿಗಳು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಪರಸ್ಪರ ಉಡುಗೊರೆ ವಿನಿಮಯ ಹಾಗೂ ಡೇಟಿಂಗ್​, ಮೀಟಿಂಗ್ ಅಂತಾ ಇಡೀ ದಿನವನ್ನು ಎಂಜಾಯ್​ ಮಾಡಿದ್ದಾರೆ. ಕೆಲವರು ಪಾಲಕರ ಕಣ್ತಪ್ಪಿಸಿ ಕದ್ದುಮುಚ್ಚಿ ತಮ್ಮ ಬಾಯ್​ಫ್ರೆಂಡ್​ ಅಥವಾ ಗರ್ಲ್​ಫ್ರೆಂಡ್​ ಭೇಟಿಯಾಗಿದ್ದಾರೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಯುವತಿಯೊಬ್ಬಳು ಪ್ರೇಮಿಗಳ ದಿನದಂದು ತನ್ನ ಬಾಯ್​ಫ್ರೆಂಡ್​ ಜೊತೆ ಇರುವಾಗ ತಾಯಿಯ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಪ್ರೇಮಿಗಳು ದಿನ ಎಲ್ಲರಿಗೂ ಒಂದೇ ರೀತಿ ಇರಲ್ಲ. ಕೆಲವರಿಗೆ ಪ್ರೇಮಿಗಳ ದಿನವೂ ಕೂಡ ಕಹಿ ದಿನವಾಗಿ ತಿರುವು ಪಡೆದುಕೊಳ್ಳುತ್ತದೆ ಎಂಬುದಕ್ಕೆ ಈ ವಿಡಿಯೋನೆ ಸಾಕ್ಷಿ. ಬಾಯ್​ಫ್ರೆಂಡ್​ ಜೊತೆ ಯುವತಿಯೊಬ್ಬಳು ರೆಸ್ಟೋರೆಂಟ್​ನಲ್ಲಿ ಇರುವಾಗ ತಾಯಿಯ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾಳೆ.
ಮಗಳನ್ನು ಯುವಕನೊಂದಿಗೆ ನೋಡಿದ ತಾಯಿ ಕೋಪದಿಂದ ಕಾಲಲ್ಲಿದ್ದ ಚಪ್ಪಲಿಯನ್ನು ಕಳೆದುಕೊಂಡು ಯುವಕನಿಗೆ ಹಿಗ್ಗಾಮುಗ್ಗಾ ಬಾರಿಸುತ್ತಾಳೆ. ಈ ವೇಳೆ ಡೈನಿಂಗ್​ ಟೇಬಲ್​ನ ಕುರ್ಚಿಯಲ್ಲಿ ಬಾಯ್​ಫ್ರೆಂಡ್​ ಎದುರಿಗೆ ಕುಳಿತಿದ್ದ ಯುವತಿ ಎದ್ದು ತನ್ನ ತಾಯಿಯನ್ನು ತಡೆಯಲು ಯತ್ನಿಸುತ್ತಾಳೆ. ಆದರೆ, ಸುಮ್ಮನಾಗದ ತಾಯಿ ಮಗಳಿಗೂ ಚಪ್ಪಲಿ ಸೇವೆಯನ್ನು ಮಾಡಿರುವುದು ವಿಡಿಯೋದಲ್ಲಿದೆ.
ತನ್ನ ಗರ್ಲ್​ಫ್ರೆಂಡ್​ಗೆ ಹೊಡೆಯಬೇಡಿ ಎಂದು ಯುವಕ ಆಕೆಯ ತಾಯಿಯನ್ನು ಕೇಳಿಕೊಳ್ಳುತ್ತಾನೆ. ಆದರೆ, ಯಾರ ಮಾತನ್ನು ಕೇಳುವ ವ್ಯವಧಾನ ಇರದ ಮಹಿಳೆ ಮನಸೋ ಇಚ್ಛೆ ಇಬ್ಬರಿಗೂ ಥಳಿಸುತ್ತಾಳೆ.
ವಿಡಿಯೋವನ್ನು ಘರ್​ ಕೆ ಕಲೇಶ್​ ಹೆಸರಿನ ಟ್ವಿಟರ್​ ಬಳಕೆದಾರ ಶೇರ್​ ಮಾಡಿಕೊಂಡಿದ್ದು, 3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ ಹರಿಬಿಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ.(ಏಜೆನ್ಸೀಸ್​)
Kalesh B/w Couples and Girl’s Mom on Valentine’s Daypic.twitter.com/01Oia07RRt
— Ghar Ke Kalesh (@gharkekalesh)February 15, 2023

ಪಾಲಕರ ವಿರೋಧ ಲೆಕ್ಕಿಸದೇ ಪಾರ್ಶ್ವವಾಯು ಪೀಡಿತ ಪ್ರಿಯಕರನ್ನು ಮದ್ವೆಯಾಗಿದ್ದ ಸಹನಾಗೆ ಭಾರೀ ಆಘಾತ

ಪತ್ನಿಯಿಂದ ರಹಸ್ಯ ಮುಚ್ಚಿಟ್ಟ ಪತಿಗೆ ಕಾದಿತ್ತು ಬಿಗ್​ ಶಾಕ್​! ಭಾರೀ ಸಂಚಲನ ಮೂಡಿಸಿದ ಕೋರ್ಟ್​ ತೀರ್ಪು

ಶಾರುಖ್​ ಮ್ಯಾನೇಜರ್​ ಪೂಜಾರ ಒಟ್ಟು ಆಸ್ತಿ ಮೌಲ್ಯ, ವಾರ್ಷಿಕ ಸಂಬಳ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 18 =
Remember me
