ಲಖನೌ:ಪರಪುರಷನ ಜತೆ ವಿವಾಹೇತರ ಸಂಬಂಧ ಹೊಂದಿದ್ದ ತನ್ನ ಪತ್ನಿಯನ್ನು ವ್ಯಕ್ತಿಯೊಬ್ಬ ಪೊಲೀಸರ ಸಹಾಯದಿಂದ ರೆಡ್​ಹ್ಯಾಂಡ್​ ಆಗಿ ಹಿಡಿದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಕಾನ್ಪುರ ಮೂಲದ ಮಹಿಳೆ, ವಕೀಲನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಆಕೆಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಪತಿ ಅದನ್ನು ವಿಡಿಯೋ ರೆಕಾರ್ಡ್​ ಮಾಡಿ, ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ರೆಕಾರ್ಡ್​ ಮಾಡುವುದನ್ನು ನೋಡಿದ ಮಹಿಳೆ ನಿಮ್ಮ ಫೋಟೋಗ್ರಫಿ ಮುಗಿಯಿತಾ ನೀವಿನ್ನೂ ಹೋಗಬಹುದು ಎಂದಿರುವುದು ಗಂಡನಿಗೆ ಒಂದು ಕ್ಷಣ ಗರಬಡಿದಂತಾಗಿದೆ.
ಇದನ್ನೂ ಓದಿ:ಫಲಿತಾಂಶಕ್ಕೂ ಮುನ್ನವೇ ಚಾಮುಂಡೇಶ್ವರಿ ಕ್ಷೇತ್ರದ ಸೋಲೊಪ್ಪಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ!
ಅಂದಹಾಗೆ ಮಹಿಳೆಯು ಪೊಲೀಸ್​ ಕಾನ್ಸ್​ಟೆಬಲ್​ ಆಗಿದ್ದು, ಸರ್ಕಾರಿ ಕ್ವಾಟ್ರಸ್​ನಲ್ಲಿ ವಾಸವಿದ್ದಾರೆ. ಅದೇ ನಿವಾಸದಲ್ಲಿ ವಕೀಲನೊಂದಿಗೆ ಸಿಕ್ಕಿಬಿದ್ದಿದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯಲ್ಲಿ ಸೇವೆ ಸಲ್ಲಿಸುತ್ತಿರುವ ಇನ್ನೊಬ್ಬ ಕಾನ್ಸ್​ಟೆಬಲ್ ಅನ್ನು ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಆಕೆಯನ್ನು ಫ್ಯಾಮಿಲಿ ಕೌನ್ಸಿಲಿಂಗ್ ಸೆಂಟರ್‌ನಲ್ಲಿ ನಿಯೋಜನೆಗೊಳಿಸಲಾಗಿದೆ. ದಂಪತಿ ನಡುವೆ ಮನಸ್ತಾಪವಿದ್ದು, ಇಬ್ಬರ ಡಿವೋರ್ಸ್​ ಕೇಸ್​ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಪತಿಯಿಂದ ದೂರಾದ ಬಳಿಕ ವಕೀಲರೊಬ್ಬರ ಜತೆ ಮಹಿಳಾ ಪೇದೆ ಅನೈತಿಕ ಸಂಬಂಧ ಹೊಂದಿರುವುದು ಪತ್ತೆಯಾಗಿದೆ. ಇಬ್ಬರೂ ಆಗಾಗ ಗೌಪ್ಯವಾಗಿ ಭೇಟಿಯಾಗುತ್ತಿದ್ದರು ಎನ್ನಲಾಗಿದೆ.
Husband catches wife red handed sleeping with her Advocate. Police is called on the spot too. Wife says in the end – aapki photography ho gayi ho to ab chalein!
I can see the confidence in her eyes. Must have come from the Advocate who would have filed#498ADV on husbandhttps://t.co/KUZdIgq7CZ
— Deepika Narayan Bhardwaj (@DeepikaBhardwaj)May 4, 2023

ಘಟನೆಯ ಬಗ್ಗೆ ಕೊತ್ವಾಲಿ ಇನ್ಸ್‌ಪೆಕ್ಟರ್ ಸೂರ್ಯಬಾಲಿ ಪಾಂಡೆ ಮಾತನಾಡಿದ್ದು, ಮಹಿಳಾ ಕಾನನ್ಸ್​ಟೆಬಲ್ ಪ್ರಸ್ತುತ ತನ್ನ ಪತಿಯೊಂದಿಗೆ ವಿಚ್ಛೇದನ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾಳೆ. ಸಂಧಾನ ಸ್ಥಿತಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯ ಜತೆ ಆಕೆ ಲಿವಿಂಗ್​ ಟುಗೆದರ್ ಸಂಬಂಧದಲ್ಲಿದ್ದಾರೆ ಎಂದು ವರದಿಯಾಗಿದೆ. ಸದ್ಯಕ್ಕೆ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ ಮತ್ತು ಇಬ್ಬರನ್ನೂ ಬಿಡುಗಡೆ ಮಾಡಲಾಯಿತು. ಆದರೆ, ಪೊಲೀಸ್ ಇಲಾಖೆಗೆ ಕಳಂಕ ತಂದಿರುವ ಮಹಿಳಾ ಪೇದೆ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ವಾಟ್ಸ್​ಆ್ಯಪ್ ಬಳಕೆದಾರರ ಮೈಕ್ರೋಫೋನ್ ದುರ್ಬಳಕೆ?; ವಾಟ್ಸ್​ಆ್ಯಪ್​ ವಿಶ್ವಾಸಾರ್ಹ ಜಾಲತಾಣವಲ್ಲ ಎಂದ ಮಸ್ಕ್

2615 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ: ಸಣ್ಣಪುಟ್ಟ ಗಲಾಟೆ ಹೊರತುಪಡಿಸಿ ಶಾಂತಿಯುತ ಮತದಾನ; ಫಲಿತಾಂಶದತ್ತ ಎಲ್ಲರ ಚಿತ್ತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
