ಹರಿಯಾಣ:ಹರಿಯಾಣದಲ್ಲಿ ಮಹಿಳೆಯೊಬ್ಬಳು ತನ್ನ ಮಾವನನ್ನು ಅಟ್ಟಾಡಿಸಿ ಕಬ್ಬಿಣದ ಪೈಪ್‌ನಿಂದ ಥಳಿಸಿದ ಘಟನೆ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃದ್ಧ ಮಾವ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ವೃದ್ಧ ವ್ಯಕ್ತಿಯನ್ನು ಹಾಗೂ ಮಗಳನ್ನು ರಕ್ಷಿಸಲು ಬಂದ ಕೆಲಸದಾಕೆಗೂ ಈ ಯುವತಿ ಥಳಿಸಿದ್ದು, ವೃದ್ಧನ ಜೇಬಿನಿಂದ 40 ಸಾವಿರ ರೂ.ಗಳನ್ನು ಕದ್ದಿದ್ದಾಳೆ ಎನ್ನಲಾಗಿದೆ.
ಈ ಘಟನೆಯನ್ನು ಶೋನಿ ಕಪೂರ್​ ಎನ್ನುವವರು ಶೇರ್ ಮಾಡಿದ್ದು, ಅಲ್ಲಿದ್ದ ಯಾರೂ ವ್ಯಕ್ತಿಯ ರಕ್ಷಣೆಗೆ ಮುಂದಾಗಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಟ್ವಿಟರ್​ನಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿದ್ದು ಕೆಲವರು ಇದನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡರೆ, ಇನ್ನೂ ಕೆಲವರು ಇದನ್ನೇ ರಾಜಕೀಯ ನಾಯಕ/ಕಿಯರನ್ನು ಟೀಕಿಸಲು ಅಸ್ತ್ರವಾಗಿ ಬಳಸಿದ್ದಾರೆ.
https://twitter.com/ShoneeKapoor/status/1676098767236526080?s=20
ಒಬ್ಬರಂತೂ ಸಾಮಾನ್ಯ ಮಹಿಳೆಯ ಶಕ್ತಿಯನ್ನು ಕಡೆಗಣಿಸಬೇಡಿ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು “ಈ ಮಹಿಳೆ ಪ್ರಿಯಾಂಕಾ ಗಾಂಧಿಯವರ “ಹೆಣ್ಣಾಗಿ ಹೋರಾಟ ಹಾಗೂ ಹೊಡೆದಾಟ ಮಾಡಬಲ್ಲೇ” ದೂರದೃಷ್ಟಿಯನ್ನು ಬಲಪಡಿಸಿದ್ದಾರೆ” ಎಂದಿದ್ದಾರೆ. ಇನ್ನೊಬ್ಬರಂತೂ ಈ ಸಂದರ್ಭದಲ್ಲಿ, ವರದಕ್ಷಿಣೆ ಪಡೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಒಟ್ಟಾರೆಯಾಗಿ ಕಾಮೆಂಟ್ ವಿಭಾಗದಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ಯಾರೂ ಮಹಿಳೆಯನ್ನು ಸಮರ್ಥಿಸಿಕೊಂಡಿಲ್ಲ. ಈ ಪ್ರಕರಣ ಠಾಣೆಯಲ್ಲಿ ದಾಖಲಾಗಿದೆಯೇ ಇಲ್ಲವೇ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
