ಅಲಫುಝ:ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಮಹಿಳೆಯೊಬ್ಬಳು ಬಿಎಸ್​ಎನ್​ಎಲ್​ ಟವರ್ ಏರಿದ ಘಟನೆ ನೆರೆ ರಾಜ್ಯ ಕೇರಳದಲ್ಲಿ ನಡೆದಿದೆ.
ಅಲಫುಝ ಜಿಲ್ಲೆಯ ಕಯಮಕುಲಮ್​ನಲ್ಲಿ ಮೊಬೈಲ್​ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಪೊಲೀಸರು ಓಡೋಡಿ ಬಂದಿದ್ದಾರೆ.
ಟವರ್​ ಮೇಲೇರಿರುವ ಮಹಿಳೆಯನ್ನು ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ. ಮಹಿಳೆ ಮಾತ್ರ ಇಳಿಯದೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಈಕೆ ಟವರ್​ ಏರಲು ಕಾರಣ ಇಷ್ಟೇ… ಮಗುವನ್ನು ತನ್ನ ಪತಿ ಕರೆದುಕೊಂಡು ಹೋಗಿದ್ದು, ವಾಪಸ್​ ಕೊಡದಿದ್ದರೆ ತಾನು ಪ್ರಾಣ ಬಿಡುವುದಾಗಿ ಹೇಳಿದ್ದಾಳೆ. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಲು ಟವರ್​ ಏರಿದ್ದಾಳೆ.
ಪೊಲೀಸರು ಎಷ್ಟೇ ಹೇಳಿದರೂ ಬಗ್ಗದ ಮಹಿಳೆಯ ವರ್ತನೆಯಿಂದ ಬೇಸತ್ತು ಕೊನೆಗೆ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿದ್ದಾರೆ. ಆಕೆ ಹಾರಿದೂ ಪ್ರಾಣಕ್ಕೇನೂ ಆಗಬಾರದೆಂದು ಸುತ್ತಲೂ ದೊಡ್ಡ ಬಲೆಯನ್ನು ಹಾಕಿದ್ದರು. ಇದೇ ವೇಳೆ ಮಹಿಳೆ ಜಿಗಿದಿದ್ದಾಳೆ. ಈಕೆ ತಮಿಳುನಾಡು ಮೂಲದವಳಾಗಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಮಗುವನ್ನು ಕೊಡಿಸುವ ವಿಚಾರವಾಗಿ ಆಕೆಯ ಪತಿ ಜತೆ ಮಾತನಾಡುವುದಾಗಿಯೂ ಪೊಲೀಸರು ಭರವಸೆ ನೀಡಿದ್ದಾರೆ.(ಏಜೆನ್ಸೀಸ್​)
ನಾನಾಗಿ ಬಿಜೆಪಿಯ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ, ಪಕ್ಷದ ಕಾರ್ಯಕರ್ತನಾಗಿ ದುಡಿಯುವೆ: ಪ್ರಮೋದ್​ ಮಧ್ವರಾಜ್​

ಟ್ರೋಲ್​​ ಆಯ್ತು ಆಲಿಯಾ ಭಟ್​ ಬಟ್ಟೆ: ಈ “ವರ್ಷದ ಕಳಪೆ ಫ್ಯಾಷನ್”​ ಅಂದ್ರು ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 2 =
Remember me
