ಹೈದರಾಬಾದ್:ಮಹಿಳೆಯೊಬ್ಬಳು ತನ್ನ ಸಹೋದರರ ಜತೆ ಸೇರಿ  ತನ್ನ ಮನೆಯಲ್ಲೇ ಹಣ, ಚಿನ್ನಾಭರಣ ದೋಚಿ ಪೊಲೀಸರ ಬಳಿ ಸಿಕ್ಕಿ ಬಿದ್ದಿ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.
ಮಿರ್ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ಒಸ್ಮಾನ್‌ಪುರದ ಮಹಿಳೆ ಫರೀದಾ ಬೇಗಂ (45) ಸಾಲ ತೀರಿಸುವ ಉದ್ದೇಶದಿಂದ ತನ್ನ ಸಹೋದರ ಮಹಮ್ಮದ್ ಸಮೀರ್ ಮತ್ತು ಸಹೋದರಿ ಫರ್ಹೀನ್ ಬೇಗಂ ಜತೆಗೆ ಚಿನ್ನಾಭರಣಗಳನ್ನು ಕಳವು ಮಾಡಿ ತಪ್ಪಿಸಿಕೊಂಡಿದ್ದಳು.
ಪೊಲೀಸರ ಪ್ರಕಾರ, “ಕಳ್ಳತನ ಮಾಡುವ ಮೊದಲು, ಈಕೆ ತನ್ನ ಪತಿ ಜಹೂರ್‌ಗೆ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದಳು. ಆಕೆಯ ಪತಿ ಜಹೂರ್ ಕೂಡ ಕೆಲಸದ ನಿಮಿತ್ತ ಬಾಗಿಲು ಹಾಕಿಕೊಂಡು ಹೊರಗೆ ಹೋಗಿದ್ದಾನೆ. ಈ ವೇಳೆ ತನ್ನ ಸಹೋದರರ ಜತೆಗೆ ಸ್ವಂತ ಮನೆಗೆ ನುಗ್ಗಿದ ಫರೀದಾ ಬೇಗಂ ಬೀಗವನ್ನು ಒಡೆದುನುಗ್ಗಿ ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳೆ” ಎಂದು ಮಿರ್ಚೌಕ್ ಇನ್ಸ್‌ಪೆಕ್ಟರ್ ಎನ್ .ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಭಾನುವಾರ ತಮ್ಮ ಮನೆಯಲ್ಲಿ ಕಳ್ಳತನವಾಗಿದ್ದನ್ನು ಗಮನಿಸಿದ ಜಹೂರ್ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೋಮವಾರ ಮಹಿಳೆ ಹಾಗೂ ಆಕೆಯ ಒಡಹುಟ್ಟಿದವರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಮಹಿಳೆ ತನ್ನದೇ ಕೆಲವು ಚಿನ್ನಾಭರಣಗಳನ್ನು ಅಡವಿಟ್ಟು ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಆನ್‌ಲೈನ್ ಮೂಲಕ ಸಾಲವನ್ನೂ ಪಡೆದಿದ್ದಳು. ಸಾಲ ಮಾಡಿದ್ದು, ಮತ್ತು ಚಿನ್ನ ಅಡವಿಟ್ಟ ಬಗ್ಗೆ ಪತಿಗೆ ತಿಳಿದಿರಲಿಲ್ಲ. ಅವನು ಅದನ್ನು ಕೇಳುತ್ತಾನೆ ಎಂಬ ಭಯದಿಂದ ಅವಳು ಮನೆಯಲ್ಲಿ ಇರುವ ಚಿನ್ನವನ್ನು ಕದ್ದು ಮಾರಾಟ ಮಾಡಿದ್ದಾಳೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಜಿ- 20 ಶೃಂಗ ಸಭೆ; ವಿಶ್ವ ನಾಯಕರ ಪತ್ನಿಯರಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
