ಚೆನ್ನೈ:ತಮಿಳುನಾಡಿನ ಕಾಂಚೀಪುರಂನಲ್ಲಿ ಸೋಮವಾರ ಮಹಿಳಾ ಪೊಲೀಸ್ ಪೇದೆ ಮೇಲೆ ಆಕೆಯ ಪತಿ ಕುಡುಗೋಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಇದನ್ನೂ ಓದಿ:ಶಾರುಖ್ ಖಾನ್ ಚಿತ್ರದಲ್ಲಿ ಸಮಂತಾ..ಇದೆಲ್ಲ ಸುಳ್ಳು ಎಂದಿದ್ದೇಕೆ ಹಿರಾನಿ ಆಪ್ತರು?
ಹೆಡ್ ಕಾನ್‌ಸ್ಟೆಬಲ್ ದಿಲ್ಲಿ ರಾಣಿ ಮೂರು ದಿನಗಳ ನಂತರ ಕೆಲಸಕ್ಕೆ ಮರಳಿದ್ದರು. ಆಕೆ ಎಟಿಎಂನಿಂದ ಹಣವನ್ನು ಹಿಂಪಡೆಯಲು ಹೋಗುತ್ತಿದ್ದಾಗ ಪತಿ ಕುಡುಗೋಲಿನಿಂದ ದಾಳಿ ನಡೆಸಿದ್ದಾನೆ. ಇದರಿಂದಾಗಿ ಆಕೆಯ ಎಡಗೈಗೆ ಮತ್ತಿತರ ಕಡೆ ಗಾಯಗಳಾಗಿವೆ.
ಒಂದು ವರ್ಷದಿಂದ ಒಂಟಿಯಾಗಿ ಜೀವನ ನಡೆಸುತ್ತಿದ್ದ ಪತಿ ಮೇಗನಾಥನ್ ಜತೆ ಡಿಲ್ಲಿ ರಾಣಿ ಭಿನ್ನಾಭಿಪ್ರಾಯ ಹೊಂದಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ವರದಿಗಳು ಹೇಳುತ್ತವೆ.
ಸೋಮವಾರ ಮೇಗನಾಥನ್ ಎಟಿಎಂ ಬಳಿಯಿದ್ದ ದಿಲ್ಲಿ ರಾಣಿ ಬಳಿ ಬಂದಿದ್ದು, ಜಗಳ ತೆಗೆದಿದ್ದಾನೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮೇಗನಾಥನ್ ಕುಡುಗೋಲು ಹೊರತೆಗೆದು ರಾಣಿಯ ಮೇಲೆ ಹಲ್ಲೆ ನಡೆಸಿದ್ದು, ಆಕೆ ಪ್ರಜ್ಞಾಹೀನಳಾಗಿ ನೆಲಕ್ಕೆ ಬಿದ್ದಿದ್ದಾಳೆ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ರಾಣಿಯನ್ನು ಕೂಡಲೇ ಚೆನ್ನೈ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕೆಯ ಕೈ ಮತ್ತು ಕಾಲಿಗೆ ಆಳವಾದ ಗಾಯಗಳಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರತಿಪಕ್ಷದ ನಾಯಕ ಎಡಪಾಡಿ ಕೆ.ಪಳನಿಸಾಮಿ ಈ ವಿಷಯ ಪ್ರಸ್ತಾಪಿಸಿ, ಕಾನೂನು ಸುವ್ಯವಸ್ಥೆಯ ಸ್ಥಿತಿಯನ್ನು ಪ್ರಶ್ನಿಸಿದ್ದಾರೆ.
“ಕಾರಣಗಳೇನೇ ಇರಲಿ, ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿಯೊಬ್ಬರು ಹಗಲು ಹೊತ್ತಿನಲ್ಲಿ ದಾಳಿಗೆ ಒಳಗಾಗುತ್ತಿರುವುದು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುತ್ತದೆ. ಇದಕ್ಕಾಗಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನಾಚಿಕೆಪಡಬೇಕು” ಎಂದು ಎಡಪಾಡಿ ಕೆ.ಪಳನಿಸಾಮಿ ಟ್ವೀಟ್ ಮಾಡಿದ್ದಾರೆ.
ಪ್ರಭಾಸ್ ಅಭಿಮಾನಿಗಳಿಗೆ ಬಿಗ್ ಬಿ ಕ್ಷಮೆ! ‘ಕಲ್ಕಿ 2898 ಎಡಿ’ ನೋಡಿದ ನಂತರ ನನ್ನ ಹತ್ಯೆ ಮಾಡಬೇಡಿ ಎಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − seven =
Remember me
