ಅಹಮದಾಬಾದ್:ಮಹಿಳಾ ಪೇದೆಯೊಬ್ಬರು ತಮ್ಮ 6 ತಿಂಗಳ ಮಗನೊಂದಿಗೆ ‘ಗುಜರಾತ್ ಹೈಕೋರ್ಟ್ ಪ್ಯೂನ್ ನೇಮಕಾತಿ’ ಪರೀಕ್ಷೆ ಬರೆಯಲು ಬಂದಿದ್ದರು. ಇನ್ನೋರ್ವ ಮಹಿಳಾ ಪೇದೆ ಪರೀಕ್ಷೆಯವರೆಗೂ ಮಗುವನ್ನು ಜೋಪಾನವಾಗಿ ನೋಡಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Gruha Jyothi Scheme;  ಸರ್ವರ್‌ ಸಮಸ್ಯೆಯಿಂದ ಅರ್ಜಿಸಲ್ಲಿಸಿದ್ರೂ ನಿಮ್ಮ ಅರ್ಜಿ ಊರ್ಜಿತವಾಗದೇ ಹೋಗಿರಬಹುದು ಇಂದೇ ಪರಿಶೀಲಿಸಿ…
ಗುಜರಾತ್‌ನ ‘ಹೈಕೋರ್ಟ್ ಪ್ಯೂನ್ ನೇಮಕಾತಿ’ ಪರೀಕ್ಷೆಯು ಅಹಮದಾಬಾದ್‌ನ ಓಧವ್‌ನಲ್ಲಿ ನಡೆಯಿತು. ಈ ಪರೀಕ್ಷೆಗೆ ಮಹಿಳಾ ಪೇದೆಯೊಬ್ಬರು ತಮ್ಮ 6 ತಿಂಗಳ ಮಗುವಿನ ಜತೆಗೆ ಬಂದಿದ್ದರು. ಒಂದೆಡೆ ಪರೀಕ್ಷೆ ಶುರುವಾಗುತ್ತಿದ್ದಂತೆ ಮಗು ಅಳತೊಡಗಿತು. ಅಂತಹ ಪರಿಸ್ಥಿತಿಗಳಲ್ಲಿ ಪರೀಕ್ಷೆ ಬರೆಯುವುದು ಅವಳಿಗೆ ಸವಾಲಿನಂತೆ ಆಗಿತ್ತು. ಪರಿಸ್ಥಿತಿಯನ್ನು ನೋಡಿದ ಕಾನ್ಸ್‌ಟೇಬಲ್ ದಯಾ ಬೆನ್ ಮಧ್ಯಪ್ರವೇಶಿಸಿ, ಮಗುವನ್ನು ನಾನು ನೋಡಿಕೊಳ್ಳುತ್ತೇನೆ. ನೀವು ಪರೀಕ್ಷೆಗೆ ಹಾಜರಾಗಿ ಎಂದು ಸಹಾಯ ಮಾಡಿದರು.
ಇದನ್ನೂ ಓದಿ:ಹೊಸ ವ್ಯವಹಾರಕ್ಕೆ ಕೈ ಹಾಕಿದ ನಟ ಉಪೇಂದ್ರ; ಮದುವೆ, ಸಮಾರಂಭಗಳಿಗೆ ಬಾಡಿಗೆಗೆ ಸಿಗಲಿದೆ ತೋಟದ ಮನೆ
ಅಹಮದಾಬಾದ್ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ನಂತರ ಕಾನ್ಸ್‌ಟೇಬಲ್ ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋಗಳು ವೈರಲ್ ಆಗಿವೆ.
ઓઢવ ખાતે પરીક્ષા આપવા માટે આવેલ મહીલા પરીક્ષાર્થીનુ બાળક રોતું હોય જેથી મહિલા પરીક્ષાથી નું પેપર દરમિયાન સમય બગડે નહીં અને પરીક્ષા વ્યવસ્થિત રીતે આપી શકે તે સારું મહિલા પોલીસ કર્મચારી દયાબેન નાઓએ માનવીય અભિગમ દાખવી બાળકને સાચવેલ જેથી માનવીય અભિગમ દાખવવામાંઆવેલ છેpic.twitter.com/SIffnOhfQM
— Ahmedabad Police અમદાવાદ પોલીસ (@AhmedabadPolice)July 9, 2023

ಇದನ್ನೂ ಓದಿ:ಜೈಲಿಗೆ ಹೋಗುವ ಭಯದಿಂದ ಪೊಲೀಸ್ ಠಾಣೆಯಲ್ಲೇ ಹಲ್ಲಿಯನ್ನು ನುಂಗಿದ ಆರೋಪಿ!
ಅಹಮದಾಬಾದ್‌ನ ಓಧವ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದ ತಾಯಿಗೆ ದಯಾ ಎಂಬ ಮಹಿಳಾ ಕಾನ್‌ಸ್ಟೆಬಲ್ ಸಹಾಯ ಮಾಡಿದ್ದಾಳೆ. ‘ಮಗು ಅಳಲು ಆರಂಭಿಸಿದಾಗ ದಯಾ ಮಧ್ಯ ಪ್ರವೇಶಿಸಿ ಮಹಿಳೆ ಪರೀಕ್ಷೆ ಬರೆಯಲು ಸಹಾಯ ಮಾಡಿದಳು’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಲಾಗಿದೆ.ನೆಟಿಜನ್‌ಗಳು ಈ ವಿಡಿಯೋಗೆ ‘ಥ್ಯಾಂಕ್ಯೂ ವೆರಿ ಮಚ್ ಅಕ್ಕ’ ಎಂದು ಕಮೆಂಟ್ ಮಾಡಿದ್ದಾರೆ. ನಿಜವಾಗಿಯೂ ದಯಾ ಬೆನ್ ಉತ್ತಮ ಪೊಲೀಸ್ ಸ್ಟೇಬಲ್ ಎಂದು ಹೇಳುತ್ತಾ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
National Swimming Pool Day 2023: ಆರಾಮವಾಗಿ ಈಜುತ್ತಾ ಒತ್ತಡ, ಚಿಂತೆ ಮರೆತು ಬಿಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 10 =
Remember me
