ಭೋಪಾಲ್​:ಗಂಡಾಗಿ ಬದಲಾಗುವ ಆಸೆ ವ್ಯಕ್ತಪಡಿಸಿ ಲಿಂಗ ಬದಲಾವಣೆ ಆಪರೇಷನ್​ ಮಾಡಿಸಿಕೊಳ್ಳಲು ಅನುಮತಿ ಕೋರಿದ್ದ ಮಹಿಳಾ ಪೊಲೀಸ್​ ಕಾನ್ಸ್​ಟೆಬಲ್​ಗೆ ಮಧ್ಯಪ್ರದೇಶ ಸರ್ಕಾರ ಗ್ರೀನ್​ ಸಿಗ್ನಲ್​ ನೀಡಿದೆ.
ಮಹಿಳಾ ಪೇದೆಯ ಹೆಸರು ದೀಪಿಕಾ ಕೋಥಾರಿ. ಇವರು ಮಧ್ಯಪ್ರದೇಶದ ರಾತ್ಲಮ್​ ಜಿಲ್ಲೆಯ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿನ ಗೃಹ ಇಲಾಖೆಗೆ ದೀಪಿಕಾ ಅವರು ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿರುವ ಗೃಹ ಇಲಾಖೆ ಲಿಂಗ ಬದಲಾವಣೆಗೆ ಅಸ್ತು ಎಂದಿದೆ.
ಲಿಂಗ ಗುರುತಿಸುವಿಕೆ ತೊಂದರೆ ಎಂದು ಅರ್ಜಿಯಲ್ಲಿ ದೀಪಿಕಾ ಉಲ್ಲೇಖಿಸಿದ್ದರು. ಇದೀಗ ಆಕೆಯು ಸಲ್ಲಿಸಿದ್ದ ವೈದ್ಯಕೀಯ ವರದಿಗಳ ಆಧಾರದ ಮೇಲೆ ಲಿಂಗ ಬದಲಾವಣೆಗೆ ಅವಕಾಶ ನೀಡಲಾಗಿದೆ. ಡಾ. ರಾಜೀವ್​ ಶರ್ಮಾ ಎಂಬುವರು ಆಪರೇಷನ್​ ಮಾಡಲಿದ್ದಾರೆ.
ಇದನ್ನೂ ಓದಿ:ನಟ ಯಶ್​ ನನ್ನ ಬಳಿ ಬಂದು ಕಣ್ಣೀರಿಟ್ಟಿದ್ದ! ಭಾರೀ ವೈರಲ್​ ಆಗ್ತಿದೆ ತಮಿಳು ನಟ ಜೈ ಆಕಾಶ್​ ಹೇಳಿಕೆ
ಸರ್ಕಾರಿ ನೌಕರರಿಗೆ ಲಿಂಗ ಬದಲಾವಣೆಯನ್ನು ಅನುಮತಿಸಲು ಯಾವುದೇ ಸ್ಪಷ್ಟ ನಿಯಮಗಳಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಲಿಂಗ ಬದಲಾವಣೆಯ ಬಳಿಕ ದೀಪಿಕಾ ಅವರಿಗೆ ಮಹಿಳಾ ನೌಕರರಿಗೆ ಸಿಗುವ ಯಾವುದೇ ಸವಲತ್ತುಗಳು ಸಿಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಾನೂನು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮತ್ತು ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಪರಿಗಣಿಸಿದ ನಂತರ ಲಿಂಗ ಬದಲಾವಣೆಗೆ ಅನುಮತಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
2021ರಲ್ಲಿ ಮತ್ತೊಬ್ಬ ಮಹಿಳಾ ಕಾನ್ಸ್​ಟೆಬಲ್​ ಆರತಿ ಯಾದವ್​ ಅವರಿಗೆ ಇದೇ ರೀತಿಯ ಅನುಮತಿಯನ್ನು ನೀಡಲಾಗಿತ್ತು. ಲಿಂಗ ಬದಲಾವಣೆಗೆ ಅನುಮತಿ ಪಡೆದ ಮಧ್ಯಪ್ರದೇಶದ ಎರಡನೇ ಮಹಿಳಾ ಕಾನ್ಸ್​ಟೆಬಲ್​ ಎಂಬ ಹೆಸರನ್ನು ಗಳಿಸಿದ್ದಾರೆ.(ಏಜೆನ್ಸೀಸ್​)
ಚಂದ್ರಯಾನ-3 ಮಹತ್ವದ ಮೈಲಿಗಲ್ಲು; ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್ ಮಾಡ್ಯೂಲ್!

ನಟ ಯಶ್​ ನನ್ನ ಬಳಿ ಬಂದು ಕಣ್ಣೀರಿಟ್ಟಿದ್ದ! ಭಾರೀ ವೈರಲ್​ ಆಗ್ತಿದೆ ತಮಿಳು ನಟ ಜೈ ಆಕಾಶ್​ ಹೇಳಿಕೆ

ನಿಜವಾಗುತ್ತಾ ಅಮಿತ್ ಶಾ ನುಡಿದ ಭವಿಷ್ಯ… ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟ ಸಭೆಗೂ ಮುನ್ನ ದೆಹಲಿಯಲ್ಲಿ ಕಾಂಗ್ರೆಸ್-ಎಎಪಿ ನಡುವೆ ಬಿರುಕು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 20 =
Remember me
