ಪಟನಾ:ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ತನ್ನ ಬಾಯ್​ಫ್ರೆಂಡ್​ ಗುಪ್ತಾಂಗವನ್ನೇ ಕತ್ತರಿಸಿರುವ ಆಘಾತಕಾರಿ ಘಟನೆ ಬಿಹಾರದ ಸರನ್‌ ಜಿಲ್ಲೆಯ ಪುರಾಣಿ ಬಸನ್​ನಲ್ಲಿ ನಡೆದಿದೆ.
ಹಲ್ಲೆಗೊಳಗಾದ ಸಂತ್ರಸ್ತ ಮಧುರಾ ಬ್ಲಾಕ್​ನ ವಾರ್ಡ್​ ನಂ. 12ರ ಕೌನ್ಸಿಲರ್​. ದಾಳಿ ನಡೆಸಿದ ಪ್ರೇಯಸಿ ವೃತ್ತಿಯಲ್ಲಿ ಡಾಕ್ಟರ್​ ಆಗಿದ್ದು, ಕೊಲೆ ಯತ್ನದ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಸಂತ್ರಸ್ತನನ್ನು ಚಿಕಿತ್ಸೆಗಾಗಿ ಪಟನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದಾಖಲಿಸಲಾಗಿದೆ.
ಕೌನ್ಸಿಲರ್ ಮತ್ತು ಆರೋಪಿ ಡಾಕ್ಟರ್​ ಇಬ್ಬರು ಕಳೆದ ಐದು ವರ್ಷಗಳಿಂದ ಸಂಬಂಧದಲ್ಲಿದ್ದರು. ಅನೇಕ ಬಾರಿ ಮದುವೆ ಬಗ್ಗೆ ಪಸ್ತಾಪ ಮಾಡಿದರೂ ಏನಾದರೂ ಒಂದು ನೆಪ ಹೇಳಿ ಕೌನ್ಸಿಲರ್​ ಮುಂದೂಡುತ್ತಿದ್ದ. ಕೊನೆಗೂ ಆತನ ಮನವೊಲಿಸಿ ನ್ಯಾಯಾಲಯದಲ್ಲಿ ರಿಜಿಸ್ಟರ್ ಮ್ಯಾರೇಜ್​ ಮಾಡಿಕೊಳ್ಳಲು ಒಪ್ಪಿಸಿದಳು. ಅದರಂತೆ, ಮದುವೆಗಾಗಿ ನ್ಯಾಯಾಲಯಕ್ಕೆ ಬಂದರೂ, ಕೌನ್ಸಿಲರ್​ ಮಾತ್ರ ಹಾಜರಾಗಲಿಲ್ಲ.
ಇದಾದ ನಂತರ ಆರೋಪಿ ಡಾಕ್ಟರ್​, ಕೌನ್ಸಿಲರ್​ಗೆ ಕರೆ ಮಾಡಿ ಮಾತನಾಡಬೇಕೆಂದು ತನ್ನ ಮನೆಗೆ ಕರೆದಳು. ಆತ ಮನೆ ಬಂದಾಗ, ನಯವಾಗಿ ಮಾತನಾಡಿ ಖಾಸಗಿ ಅಂಗವನ್ನೇ ಕತ್ತರಿಸಿದ್ದಾಳೆ. ಕೌನ್ಸಿಲರ್‌ನ ಕೂಗು ಕೇಳಿದ ನೆರೆಹೊರೆಯವರು ಮನೆಗೆ ಓಡಿ ಬಂದಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿ, ಆತನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಸರನ್ ಜಿಲ್ಲೆಯ ಮಧುರಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮಾತನಾಡಿ, ಆರೋಪಿ ಮಹಿಳೆ ಹಾಜಿಪುರ ಮೂಲದವಳು. ವೃತ್ತಿಯಲ್ಲಿ ವೈದ್ಯೆಯಾಗಿದ್ದಾಳೆ. ಆಕೆಗೆ 25 ವರ್ಷ. ಮಧುರಾದಲ್ಲಿ ವೈದ್ಯೆಯಾಗಿ ಅಭ್ಯಾಸ ಮಾಡುತ್ತಿದ್ದಳು. ಸಂತ್ರಸ್ತ ಕೌನ್ಸಿಲರ್​ ಕೂಡ ಅವಿವಾಹಿತ ಎಂದು ತಿಳಿಸಿದ್ದಾರೆ.
ನಾವು ಆರೋಪಿಯನ್ನು ಬಂಧಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್‌ಎಚ್‌ಒ ಅವರು ಹೇಳಿದ್ದಾರೆ.(ಏಜೆನ್ಸೀಸ್​)
ವಿಶ್ವಕಪ್​​​ ಗೆದ್ದ ಬೆನ್ನಲ್ಲೇ ವಿಂಡೀಸ್​ನಲ್ಲಿ ಪಿಚ್​ ಮಣ್ಣು ತಿಂದಿದ್ದೇಕೆ? ರೋಹಿತ್​ ಕೊಟ್ಟ ಉತ್ತರ ವೈರಲ್​…

ರೀಲ್ಸ್‌ಗಾಗಿ ಶೋಕಿ ಮಾಡಿ ಜೈಲುಪಾಲಾದ ಅರುಣ್ ಕಟಾರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
