ಉತ್ತರ ಪ್ರದೇಶ:ಇತ್ತೀಚಿನ ದಿನಗಳಲ್ಲಿ ಅನೇಕರು ಪ್ರಸಿದ್ಧರಾಗಲು ಪ್ರಯತ್ನಿಸುತ್ತಿದ್ದಾರೆ. ಸೋಶಿಯಲ್​​ ಮೀಡಿಯಾದಲ್ಲಿ ಅತೀ ಹೆಚ್ಚು ವೀಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಇತ್ತೀಚಿಗೆ ಇಂತಹದೊಂದು ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ರೀಲ್ಸ್​ಗಾಗಿ ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳು ರಸ್ತೆ ಮಧ್ಯೆದಲ್ಲಿ ನೃತ್ಯ ಮಾಡಿದ್ದಾಳೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಿಡಿಶಾಪ ಹಾಕಿದ್ದಾರೆ.
ಮಹಿಳೆಯೊಬ್ಬರು ಮಳೆಯಲ್ಲೇ ಪಾದಚಾರಿ ಮಾರ್ಗದಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಸ್ತೆಯಲ್ಲಿ ಮಹಿಳೆ ಮಾಡಿದ ಅಪಾಯಕಾರಿ ಸಾಹಸಕ್ಕೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ.
रील बनाने का भूत अब भाभियों और आंटियों को ज्यादा चढ़ रहा है ,😜
देखिए VIDEO बीच सड़क पर किस तरीके से ठुमके लगाए जा रहे हैं ,और पीछे से वाहन तेज गति में आ रहे हैं ,गाड़ी की छत से कूद कर सड़क की व्हाइट लाइन भी आउट कर दी! मतलब सीधा रील बनानी है चाहे जान चली जाए?#viralreelsシ…pic.twitter.com/wRlonhxO6I
— निशान्त शर्मा (भारद्वाज) (@Nishantjournali)August 19, 2024

ಮಹಿಳೆ ಮೊದಲು ಕಾರಿನಿಂದ ಕೆಳಗೆ ಇಳಿದು ಡ್ಯಾನ್ಸ್ ಮಾಡತೊಡಗಿದಳು. ಹಿಂದಿನಿಂದ ಬೇರೆ ವಾಹನಗಳು ಬರುತ್ತಿದ್ದರೂ ಎಲ್ಲರೂ ಅವಳನ್ನೇ ನೋಡುತ್ತಿದ್ದರೂ ನಾಚಿಕೆಯಿಲ್ಲದೆ ಹಾರಿ ಕುಣಿದಾಡಿದಳು.
ಎಲ್ಲರೂ ಮಳೆಯಲ್ಲಿ ಪಡುವ ಪಾಡು ಅನುಭವಿಸುತ್ತಿರುವಾಗ ಈ ಮಹಿಳೆ ಮಳೆಯಲ್ಲಿ ಹಾಯಾಗಿ ಎಂಜಾಯ್ ಮಾಡುತ್ತಾ ಎಲ್ಲರಿಗಿಂತ ಭಿನ್ನವಾಗಿ ವರ್ತಿಸಿದ್ದಾಳೆ. ನೆಟ್ಟಿಗರು ಇಂತಹ ಡ್ಯಾನ್ಸ್ ನೋಡಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
ನೆಟಿಜನ್ ಶೇರ್ ಮಾಡಿರುವ ಈ ವಿಡಿಯೋಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಪೊಲೀಸರು ಆಕೆಯ ಕಾರ್ ನಂಬರ್ ಕಳುಹಿಸುವಂತೆ ಹೇಳಿದ್ದಾರೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದರು. ನಂತರ ಈ ವಿಡಿಯೋ ಬಗ್ಗೆ ಯುಪಿ ಪೊಲೀಸರು ಕೂಡ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರಿಗೆ ಲೀಗಲ್ ನೋಟಿಸ್ ನೀಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + five =
Remember me
