ಲಕ್ನೋ:ಉತ್ತರಪ್ರದೇಶದ ರಾಜಭವನದ ಎದುರು ರಸ್ತೆಬದಿಯಲ್ಲೇ ಮಹಿಳೆಯೊಬ್ಬರ ಹೆರಿಗೆ ಆಗಿದ್ದು, ಆರೋಗ್ಯ ಕ್ಷೇತ್ರದ ಅವ್ಯವಸ್ಥೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಲಕ್ನೋದಲ್ಲಿನ ರಾಜಭವನದ ಎದುರು ಇಂದು ಈ ಘಟನೆ ನಡೆದಿದೆ.
ನಾಲ್ಕೂವರೆ ತಿಂಗಳ ಗರ್ಭಿಣಿಗೆ ರಸ್ತೆ ಬದಿಯಲ್ಲೇ ಹೆರಿಗೆ ಆಗಿದೆ. ಅವಧಿಪೂರ್ವ ಹೆರಿಗೆಯಾದ್ದರಿಂದ ಗಂಡುಮಗು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಪ್ರಾಣ ಕಳೆದುಕೊಂಡಿದೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ, ಆರೋಗ್ಯ ಸಚಿವರೂ ಆಗಿರುವ ಬ್ರಜೇಶ್ ಪಾಠಕ್ ಈ ಘಟನೆಯನ್ನು ಖಚಿತಪಡಿಸಿದ್ದು, ರಾಜಭವನದ ಗೇಟ್ ನಂ. 13ರ ಬಳಿ ಈ ಘಟನೆ ನಡೆದಿರುವುದು ನಿಜ. ಈ ಕುರಿತು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಮಹಿಳೆ ಬೆಳಗ್ಗೆ ಲಕ್ನೋದ ಶ್ಯಾಮ್ ಪ್ರಸಾದ್ ಮುಖರ್ಜಿ ಸಿವಿಲ್ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಆಕೆಗೆ ನೋವು ನಿವಾರಕ ಇಂಜೆಕ್ಷನ್ ನೀಡಲಾಗಿತ್ತು. ಬಳಿಕ ಆಕೆ ಮನೆಗೆ ಹೋಗಿದ್ದು, ನೋವು ಕಡಿಮೆ ಆಗದ್ದರಿಂದ ಮತ್ತೆ ಆಸ್ಪತ್ರೆಗೆ ಬರುವ ಮಾರ್ಗಮಧ್ಯೆ ಹೆರಿಗೆ ಆಗಿದೆ ಎಂದು ವೀರಾಂಗಣ ಝಲ್ಕರಿ ಬಾಯಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ನೋವು ಅತಿಯಾದಾಗ ಮಹಿಳೆ ಆ್ಯಂಬುಲೆನ್ಸ್​ಗೆ ಕರೆ ಮಾಡುವ ಬದಲು ರಿಕ್ಷಾದಲ್ಲಿ ಹೋಗಲು ಮುಂದಾಗಿದ್ದಳು. ರಾಜಭವನ್ ಬಳಿ ಸಾರ್ವಜನಿಕರು ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದು, 25 ನಿಮಿಷದಲ್ಲಿ ಆ್ಯಂಬುಲೆನ್ಸ್ ಬಂದಿತ್ತು ಎಂದು ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ಏನಾಯ್ತು ಇವರಿಗೆಲ್ಲ? ಇಂದ್ಯಾಕೆ ಈ ಥರ..?: ಇಲ್ಲಿದೆ ವಿವರ…

ವಿಐಪಿ ವಾಹನಗಳಲ್ಲಿನ್ನು ಸೈರನ್ ಬದಲು ಶಂಖನಾದ?; ಕೊಳಲು, ತಬಲಾ ಶಬ್ದ ಅಳವಡಿಕೆಗೆ ಚಿಂತನೆ ಎಂದ ಗಡ್ಕರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
