ಅಂದಿನ ಕಾಲಘಟ್ಟದಲ್ಲಿ ನಮ್ಮ ಹುಡುಗಿಗೆ ಒಬ್ಬ ಒಳ್ಳೆಯ ವರ ಸಿಕ್ಕರೆ ಸಾಕು ಮದುವೆ ಮಾಡಿಬಿಡೋಣ ಎನ್ನುತ್ತಿದ್ದರು ನಮ್ಮ ಹಿರಿಯರು. ಆಗ ಉತ್ತಮ ನೌಕರಿ, ಗರಿಷ್ಠ ಸಂಬಳ ಇದೆಲ್ಲವನ್ನೂ ನೋಡುತ್ತಿದ್ದರು. ಆದರೆ, ಅದನ್ನೇ ಪ್ರತ್ಯೇಕವಾಗಿ ಗಮನಿಸಿ ಹೆಣ್ಣನ್ನು ಕೊಡುತ್ತಿರಲಿಲ್ಲ. ವರ ಸಿಕ್ಕ ತಕ್ಷಣವೇ ನಿಶ್ಚಿತಾರ್ಥ ಮಾಡಿ ಮುಗಿಸಿಬಿಡುತ್ತಿದ್ದರು. ಆದ್ರೆ, ಇಂದು ನಮ್ಮ ಹುಡುಗನಿಗೆ ಒಂದೊಳ್ಳೆ ವಧು ಸಿಕ್ಕರೆ ಹೇಳಿ, ಸಾಲ ಮಾಡಿಯಾದರೂ ಅಚ್ಚುಕಟ್ಟಾಗಿ, ಅದ್ದೂರಿಯಾಗಿ ವಿವಾಹ ಮಾಡಿಕೊಡ್ತೇವೆ ಎಂದು ಗಂಡೇತ್ತವರು ಹೇಳುತ್ತಿದ್ದಾರೆ. ಹಂಗಾಗಿದೆ ಇಂದಿನ ಕಾಲಮಾನ.
ಇದನ್ನೂ ಓದಿ:ಕೇವಲ ಮೂರೇ ತಿಂಗಳಲ್ಲಿ ನಿಜವಾಯ್ತು ಬಾಬಾ ವಂಗಾ ನುಡಿದ ಈ ವರ್ಷದ 5 ಭವಿಷ್ಯವಾಣಿಗಳು!
ಈಗ ಹೆಣ್ಣುಮಕ್ಕಳದ್ದೇ ಡಿಮ್ಯಾಂಡ್​! ಒಳ್ಳೆಯ ಹುಡುಗ ಅನ್ನೋದಕ್ಕಿಂತ ಆತನಿಗೆ ವರ್ಷಕ್ಕೆ 1 ಕೋಟಿ ರೂ. ಸಂಬಳವಿರಬೇಕು, ಸರ್ಕಾರಿ ನೌಕರನೇ ಆಗಿರಬೇಕು, ಸ್ವಂತ ಮನೆಯಿರಬೇಕು ಹೀಗೆ ಹಲವು ಷರತ್ತುಗಳನ್ನು ಬಯಕೆಯಾಗಿ ಮುಂದಿಡುತ್ತಾರೆ. ಇದೇ ರೀತಿ ಇಲ್ಲೊಬ್ಬಳು ಯುವತಿ ತನಗೆ ವರ್ಷಕ್ಕೆ 4 ಲಕ್ಷ ರೂ. ಸಂಬಳ ಬರುತ್ತಿದ್ದರೂ, ಮದುವೆಯಾಗುವ ಗಂಡಿಗೆ ಮಾತ್ರ 1 ಕೋಟಿ ರೂ. ಸಂಬಳ ಇರಲೇಬೇಕು ಎಂದು ಡಿಮ್ಯಾಂಡ್​ ಇಟ್ಟಿದ್ದಾಳೆ. ಆಕೆ ತನ್ನನ್ನು ವರಿಸುವ ಯುವಕ ಏನೆಲ್ಲಾ ಮಾಡಿರಬೇಕು, ಹೇಗಿರಬೇಕು ಎಂದು ನೀಡಿರುವ ಡಿಟೇಲ್ಸ್​ ಈ ಕೆಳಕಂಡಂತಿದೆ ಗಮನಿಸಿ.
ತಾನು ಮದುವೆಯಾಗುವ ಹುಡುಗ ಡಾಕ್ಟರ್​ ಅಥವಾ ಚಾರ್ಟೆಡ್​ ಅಕೌಂಟೆಂಟ್​ ಆಗಿರಲೇಬೇಕಂತೆ. ಯುವತಿ ನೀಡಿರುವ ಡಿಟೇಲ್ಸ್ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವರು ಈಕೆಗಿರುವ ಸಂಬಳಕ್ಕೂ, ಇಟ್ಟಿರುವ ಡಿಮ್ಯಾಂಡ್​ಗೂ ಸಂಬಂಧವೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ:ರೈಲು ನಿಲ್ದಾಣದಲ್ಲಿ ರಂಗವಲ್ಲಿ        ಮತಜಾಗೃತಿ ಮೂಡಿಸಿದ ಕಲಾಕೃತಿಗಳು
ಮತ್ತೊಬ್ಬರು, “ಈ ಹುಡುಗಿ ನಿರೀಕ್ಷೆ ಸರಿ ಎಂದೇ ಇಟ್ಟುಕೊಳ್ಳೋಣ. ಇಷ್ಟೊಂದು ಸಂಬಳ ತರುವ ಯುವಕನನ್ನೇ ಮದುವೆಯಾದಳು ಎಂದೇ ತಿಳಿಯೋಣ. ವಿವಾಹವಾದ ಬಳಿಕ ಆತ ಕೆಲಸ ಕಳೆದುಕೊಂಡರೆ ಈಕೆ ಏನು ಮಾಡುತ್ತಾಳೆಂದು ತಿಳಿಯಲು ನನಗೆ ಬಹಳ ಕುತೂಹಲವಿದೆ” ಎಂದು ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).
26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:3 × 5 =
Remember me
