ಮೀರತ್​:ಯುವಕನೊಬ್ಬ ವರ್ಷಗಳ ಕಾಲ ಯುವತಿಯೊಬ್ಬಳನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಆಕೆ ಗರ್ಭಿಣಿಯಾದಾಗ ಅವಳಿಗೆ ಗರ್ಭ ನಿರೋಧಕ ಮಾತ್ರೆ ಕೊಟ್ಟು ತಾನು ಮಾತ್ರ ಬೇರೆ ಹುಡುಗಿಯೊಡನೆ ಮದುವೆಯಾಗಲು ಹೊರಟಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?
24 ವರ್ಷದ ರಾಹುಲ್​ ಯುವತಿಯೊಬ್ಬಳನ್ನು ಪ್ರೀತಿಸುವುದಾಗಿ ನಂಬಿಸಿದ್ದ. ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಈ ಮಧ್ಯೆ ರಾಹುಲ್​ಗೆ ಮದುವೆ ನಿಶ್ಚಯವಾಗಿದೆ. ಇನ್ನೊಂದತ್ತ ಆತ ಪ್ರೀತಿಸುತ್ತಿದ್ದ ಯುವತಿಯೂ ಗರ್ಭಿಣಿಯಾಗಿದ್ದಾಳೆ. ಡಿಸೆಂಬರ್​ 7ಕ್ಕೆ ರಾಹುಲ್​ ಮದುವೆ ನಿಶ್ಚಯವಾಗಿತ್ತು. ಆದರೆ ನೀನು ಈ ಮದುವೆಯಾಗುವಂತಿಲ್ಲ. ನಿನ್ನಿಂದಾಗಿ ನಾನು ತಾಯಿ ಆಗುತ್ತಿದ್ದೇನೆ ಎಂದು ಯುವತಿ ಹಠ ಹಿಡಿದು ಕುಳಿತಿದ್ದಾನೆ. ಮಾತು ಕೇಳದ ರಾಹುಲ್​, ಯುವತಿಗೆ ಗರ್ಭ ನಿರೋಧಕ ಮಾತ್ರೆ ಕೊಟ್ಟು ತಿನ್ನಲು ಹೇಳಿದ್ದಾನೆ.
ಇದನ್ನೂ ಓದಿ:ಮೊಮ್ಮಗಳೊಂದಿಗಿನ ಸ್ನೇಹವನ್ನು ಪ್ರಶ್ನಿಸಿದ್ದಕ್ಕೆ ಅಜ್ಜಿಯ ಕಥೆಯನ್ನೇ ಮುಗಿಸಿಬಿಟ್ಟ! ಲವ್​ ಜಿಹಾದ್​ಗೆ ಅಜ್ಜಿ, ಮೊಮ್ಮಗ ಬಲಿ?
ಆ ಕ್ಷಣಕ್ಕೆ ಸುಮ್ಮನಾದ ಯುವತಿ ರಾಹುಲ್​ನ ಮದುವೆ ದಿನದಂದೇ ಗರ್ಭ ನಿರೋಧಕ ಮಾತ್ರೆ ಸೇವಿಸಿದ್ದಾಳೆ. ಐದು ತಿಂಗಳ ಗರ್ಭವತಿಯಾಗಿದ್ದ ಯುವತಿ ಮಾತ್ರೆ ಸೇವಿಸಿದ ತಕ್ಷಣ ರಕ್ತಸ್ರಾವ ಆರಂಭವಾಗಿದೆ. ಆಗ ಮನೆಯವರಿಗೆ ವಿಚಾರ ಗೊತ್ತಾಗಿದ್ದು ಆಕೆಯನ್ನು ಮೀರತ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮತ್ತು ಗರ್ಭದಲ್ಲಿದ್ದ ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಈ ವಿಚಾರವಾಗಿ ಯುವತಿಯ ಕುಟುಂಬ ಪೊಲೀಸ್​ ದೂರು ದಾಖಲಿಸಿದ್ದು, ಹಸೆಮಣೆ ಏರಲೊರಟಿದ್ದ ರಾಹುಲ್​ನನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)
ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − one =
Remember me
