ಚೆನ್ನೈ:ಬುದ್ಧಿಗೇಡಿ ಗಂಡನೊಬ್ಬ ಯೂಟ್ಯೂಬ್​ ವಿಡಿಯೋ ನೆರವಿನಿಂದ ತನ್ನ ಪತ್ನಿಗೆ ಹೆರಿಗೆ ಮಾಡಿಸಲು ಹೋಗಿ ಆಕೆಯ ಸಾವಿಗೆ ಕಾರಣವಾಗಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಎಂ. ಲೋಕನಾಯಕಿ (27) ಮೃತ ದುರ್ದೈವಿ. ಈಕೆ ಕೃಷ್ಣಗಿರಿ ಜಿಲ್ಲೆಯ ಪೊಚಂಪಲ್ಲಿ ಬಳಿಯ ಪುಲಿಂಪಟ್ಟಿ ಗ್ರಾಮದ ನಿವಾಸಿ ಮಾದೇಶ್​ (30) ಎಂಬುವರ ಪತ್ನಿ. ಅತಿಯಾದ ರಕ್ತಸ್ರಾವದಿಂದ ಲೋಕನಾಯಕಿ ಕೊನೆಯುಸಿರೆಳೆದಿದ್ದಾಳೆ. ಪತಿ ಮಾದೇಶ್​ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಲೋಕನಾಯಕಿ ಮಂಗಳವಾರ ಬೆಳಗ್ಗೆ ತನ್ನ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದಳು. ಹೆರಿಗೆ ನೋವು ಕಾಣಿಸಿಕೊಂಡಾಗ ಅಲ್ಲಿಯೇ ಇದ್ದ ಗಂಡ ಮಾದೇಶ್​, ಆಸ್ಪತ್ರೆಗೆ ಕರೆದೊಯ್ಯುವ ಬದಲು ಮನೆಯಲ್ಲಿಯೇ ಹೆರಿಗೆ ಮಾಡುವ ಪ್ರಯತ್ನಕ್ಕೆ ಕೈಹಾಕಿದ. ಆದರೆ, ಹೆರಿಗೆಯಾದ ಬೆನ್ನಲ್ಲೇ ಲೋಕನಾಯಕಿ ಆರೋಗ್ಯ ಸ್ಥಿತಿ ಗಂಭೀರವಾಯಿತು. ಬಳಿಕ ಮಾದೇಶ್, ತನ್ನ ಪತ್ನಿ ಮತ್ತು ಮಗುವನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದನು. ಲೋಕನಾಯಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದು ಘೋಷಿಸಿದರು. ತಕ್ಷಣವೇ ವೈದ್ಯರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರು.
ಇದನ್ನೂ ಓದಿ:ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಿ, ಶ್ರುತಿ ಸಂಸ್ಕೃತಿ ಸಂಸ್ಥೆ ತಾಲೂಕು ಸಂಯೋಜಕ ರಾಮಣ್ಣ ಎನ್. ಗಣೇಕಲ್ ಸಲಹೆ
ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಮಾದೇಶ್​, ಮನೆಯಲ್ಲೇ ಹೆರಿಗೆ ಮಾಡಲು ಯೂಟ್ಯೂಬ್​ ವಿಡಿಯೋಗಳನ್ನು ವೀಕ್ಷಣೆ ಮಾಡಿದ್ದ. ಇದರ ಆಧಾರದ ಮೇಲೆ ಆತನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಪೊಲೀಸರು ಅಸ್ವಾಭಾವಿಕ ಪ್ರಕರಣ ದಾಖಲಿಸಿದ್ದಾರೆ. ಮಾದೇಶ್​ ವಿರುದ್ಧದ ಆರೋಪ ಸಾಬೀತಾದಲ್ಲಿ ಆತನನ್ನು ಬಂಧಿಸಲಾಗುತ್ತದೆ. ನವಜಾತ ಶಿಶುವಿಗೆ ಪೊಚಂಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.(ಏಜೆನ್ಸೀಸ್​)
ನನ್ನ ಗೋವಾ ಬಿಟ್ಟು ತೊಲಗಿ: ಪ್ರವಾಸಿಗರ ಮೇಲೆ ಯುವ ಜೋಡಿಯ ದರ್ಪ, ಯುವತಿಯದ್ದೇ ಹೆಚ್ಚು ರಂಪಾಟ

ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ಗೆ ಯಜ್ಞ ನಡೆಸಿದ ಬಿಜೆಪಿ ನಾಯಕರು

ಆಪರೇಷನ್ ನಂತರ ಹೊಟ್ಟೆಯಲ್ಲಿ ಹತ್ತಿ ಮರೆತ ವೈದ್ಯರು: ಬಾಣಂತಿ ಸಾವು, ತಾಯಿ ಪ್ರೀತಿ ಕಾಣದೇ ಮಗು ಅನಾಥ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
