ನವದೆಹಲಿ:ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮನನ್ನು ಆಸ್ಪತ್ರೆಗೆ ಕರೆತಂದ ಮಗ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗದೆ, ಆಕೆ ಆಟೋದಲ್ಲಿ ಕುಳಿತು ಪ್ರಾಣ ಬಿಡುವುದನ್ನು ನೋಡುತ್ತ ಅಸಹಾಯಕನಾಗಿ ನಿಂತಿದ್ದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
28 ವರ್ಷದ ಮುಕುಲ್​ ವ್ಯಾಸ್​ ತನ್ನ ತಾಯಿ ಕಿರಣ ವ್ಯಾಸ (52) ಅವರನ್ನು ಆಸ್ಪತ್ರೆಗೆ ಕರೆ ತಂದಿದ್ದರು. ಸರ್ದಾರ್​ ವಲ್ಲಭ ಭಾಯಿ ಪಟೇಲ್​ ಆಸ್ಪತ್ರೆಗೆ ಸೇರಿಸಲೆಂದು ಕರೆತರಲಾಗಿತ್ತು. ಆದರೆ ಆಸ್ಪತ್ರೆಯವರು ರೋಗಿಯನ್ನು ದಾಖಲಿಸಿಕೊಳ್ಳುವ ಮೊದಲು ಅನೇಕ ಕ್ರಮಗಳನ್ನು ಅನುಸರಿಸುವಂತೆ ಹೇಳಿದ್ದಾರೆ. ಜಿಲ್ಲಾ ಕಣ್ಗಾವಲು ಅಧಿಕಾರಿಯಿಂದ ರೆಫರೆನ್ಸ್​ ಪತ್ರ ತರಬೇಕು ಎಂದಿದ್ದಾರೆ. ನಿಮಗೆ ಮೆಸೇಜ್​ ಬರುತ್ತೆ ಅದನ್ನ ಕೊಡಬೇಕು.. ಹೀಗೆ ನಾನಾ ರೀತಿಯ ನಿಯಮಗಳನ್ನು ಹೇಳಿದ್ದಾರೆ. ಗಂಟೆಗಟ್ಟಲೆ ಆ ಕೆಲಸದಲ್ಲೇ ಮುಕುಲ್​ ಕಾಲ ಕಳೆದಿದ್ದಾನೆ.
ಇತ್ತ ಆಟೋದಲ್ಲಿದ್ದ ಕಿರಣಗೆ ಉಸಿರಾಟ ತೊಂದರೆ ತೀವ್ರವಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಅದಾದ ನಂತರ ಮುಕುಲ್​ ತನ್ನ ತಾಯಿಯ ಸಾವಿಗೆ ಆಸ್ಪತ್ರೆಯವರೇ ಕಾರಣ ಎಂದು ಆರೋಪಿಸಿದ್ದಾನೆ. ಯಾರಾದರೂ ಒಬ್ಬರು ಸಾಯುತ್ತಿದ್ದರೆ ಅವರಿಗೆ ಚಿಕಿತ್ಸೆ ಕೊಡುವುದು ಮುಖ್ಯವೋ ಅಥವಾ ಅವರ ನಿಯಮ ಪಾಲನೆ ಮಾಡುವುದು ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ. ವೈದ್ಯಕೀಯ ಅವ್ಯವಸ್ಥೆಗೆ ಇದೊಂದು ನಿದರ್ಶನವಾಗಿದೆ. (ಏಜೆನ್ಸೀಸ್​)
ಪವಿತ್ರ ಸ್ಥಳದಲ್ಲಿ ಅಶ್ಲೀಲ ವಿಡಿಯೋ ಶೂಟ್ ಮಾಡಿದ ಜೋಡಿ! ಬೆನ್ನ ಹಿಂದೆ ಬಿದ್ದ ಪೊಲೀಸರು

ನೀಲಗಿರಿ ನಮ್ಮ ರಾಜ್ಯಕ್ಕೆ ಬಂದಿದ್ದು ಹೇಗೆ? ಆ ಮರದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
