ಭುವನೇಶ್ವರ್​:ಇಬ್ಬರು ವ್ಯಕ್ತಿಗಳಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ 28 ವರ್ಷದ ಯುವತಿಯೊಬ್ಬಳನ್ನು ಒಡಿಶಾದ ಅನುಗುಲ್​ ಜಿಲ್ಲೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆರೋಪಿಯನ್ನು ಸುಪ್ರಿಯಾ ಸ್ವೈನ್​ ಅಲಿಯಾಸ್​ ದೀಪಾ ಎಂದು ಗುರುತಿಸಲಾಗಿದೆ. ತನ್ನ ಒರಿಜಿನಲ್​ ಹೆಸರು ಬದಲಾಯಿಸಿ ಅನೇಕರಿಗೆ ವಂಚಿರುವ ಈಕೆ ತಲ್ಚಾರ್​ನ ಮಜಿಕಸಾಹಿ ನಿವಾಸಿ.
ಇದನ್ನೂ ಓದಿ:ಮೊಬೈಲ್​ ಕದ್ದ ಹುಡುಗಿಯನ್ನು ಪೊಲೀಸರಿಗೆ ಹಿಡಿದುಕೊಡಲು ಹೋದ; ಆಕೆಯ ಸ್ಥಿತಿಗೆ ಮರುಗಿ ಸಹಾಯ ಮಾಡಿ ಬಂದ
ತಲ್ಚಾರ್​ನಲ್ಲಿ ತನ್ನ ಸಹೋದರನೊಂದಿಗೆ ವಾಸವಿದ್ದ ಧೆಂಕನಾಲ್​ ಜಿಲ್ಲೆಯ ಪರ್ಜಾಂಗ್​ ನಿವಾಸಿ ಬಿಜಯ್​ ಪ್ರಧಾನ್​ ಎಂಬ ನಿವೃತ್ತ ವೈದ್ಯರನ್ನು ಸುಪ್ರಿಯಾ ಪರಿಚಯ ಮಾಡಿಕೊಂಡಿದ್ದಳು. ತಾನೋರ್ವ ಇನ್ಶುರೆನ್ಸ್​ ಏಜೆಂಟ್ ಎಂದು ನಂಬಿಸಿ, ಸ್ನೇಹ ಬೆಳೆಸಿದ್ದಳು.
ದೀಪಾ ಹೆಸರಿನಲ್ಲಿ ಪರಿಚಯ ಮಾಡಿಕೊಂಡ ಬೆನ್ನಲ್ಲೇ ಬಣ್ಣದ ಮಾತುಗಳನ್ನಾಡಿ ಪ್ರಧಾನ್​ ಬಳಿ ನಂಬಿಕೆ ಗಿಟ್ಟಿಸಿಕೊಂಡಿದ್ದಾಳೆ. ಕೆಲ ದಿನಗಳ ಬಳಿಕ ವೈದ್ಯರು ತೆಗೆದುಕೊಂಡ ಇನ್ಶುರೆನ್ಸ್​ ಪಾಲಿಸಿಯ ಮೆಚುರಿಟಿ ಹಣವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತೇನೆಂದು ಹೇಳಿ, ಅವರಿಂದ ಹೇಗೋ ಬ್ಯಾಂಕ್​ ಮಾಹಿತಿ ಪಡೆದುಕೊಂಡಿದ್ದಾಳೆ. ಇದರ ಬೆನ್ನಲ್ಲೇ ಇನ್​​ಸ್ಟಾಲ್​ಮೆಂಟ್​ಗಳಲ್ಲಿ ಅವರ ಖಾತೆಯಿಂದ 4.57 ಲಕ್ಷ ರೂ. ಹಣವನ್ನು ವಿತ್​ಡ್ರಾ ಮಾಡಿ ಪರಾರಿಯಾಗಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಮೋಸ ಹೋದ ನಿವೃತ್ತ ವೈದ್ಯ ಪ್ರಧಾನ್​, ನಾನು ಬಜಾಜ್​ ಫೈನಾನ್ಸ್​ನಲ್ಲಿ ಒಂದು ಪಾಲಿಸಿ ಹೊಂದಿದ್ದೆ. ಆ ಹುಡುಗಿ ನನ್ನ ಬಳಿ ಬಂದು ನಿಮ್ಮ ಪಾಲಿಸಿಯ ಮೆಚುರಿಟಿ ಮೊತ್ತವನ್ನು ಕೊಡಿಸುತ್ತೇನೆಂದು ಹೇಳಿ ಸೇವಿಂಗ್ಸ್​ ಬ್ಯಾಂಕ್​ ಖಾತೆಯ ಮಾಹಿತಿ ಪಡೆದುಕೊಂಡಳು. ಆದರೆ, ಎಸ್​ಬಿಐನಲ್ಲಿದ್ದ ನನ್ನ ಹಣವನ್ನು ಇನ್​ಸ್ಟಾಲ್​ಮೆಂಟ್​ನಲ್ಲಿ ವಿತ್​ಡ್ರಾ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಪೊಲೀಸ್​ ವಸತಿ ಗೃಹದ ನೀರಿನ ಸಂಪಿಗೆ ಬಿದ್ದು ಕಾನ್ಸ್​ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಇಷ್ಟೇ ಅಲ್ಲದೆ, ಕೊಲಿಯರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ನಿರ್ಮಲ್​ ಬೆಹೆರಾ ಹೆಸರಿನ ಮತ್ತೊರ್ವ ವೈದ್ಯನಿಗೂ ಸುಪ್ರಿಯಾ ವಂಚಿಸಿದ್ದಾಳೆ. ಬಜಾಜ್​ ಫೈನಾನ್ಸ್​ನಲ್ಲಿ ಇನ್ಶುರೆನ್ಸ್​ ಪಾಲಿಸಿ ಮಾಡಿಸಿದ್ದೆ. ಸುಪ್ರಿಯಾ ಸ್ವೈನ್​ ಎಂಬಾಕೆ ನನ್ನ ಬಳಿ ಬಂದು ನಿಮ್ಮ 2 ಲಕ್ಷ ರೂ. ಮೆಚುರಿಟಿ ಹಣವನ್ನು ಕೊಡಿಸುತ್ತೇನೆಂದು ಹೇಳಿ ಎರಡು ಖಾಲಿ ಚೆಕ್​ ಮೇಲೆ ಸಹಿ ಮಾಡಿಸಿಕೊಂಡು ಹೋದರು. ಆದರೆ, ಆಕೆ ನನ್ನ ಉಳಿತಾಯ ಖಾತೆಯಲ್ಲಿ 1.05 ಲಕ್ಷ ರೂ. ಹಣವನ್ನು ವಿತ್​ ಡ್ರಾ ಮಾಡಿದ್ದಾಳೆ ಎಂದು ದೂರಿದ್ದಾರೆ.
ಇದೀಗ ಇಬ್ಬರು ವೈದ್ಯರು ತಲ್ಚಾರ್​ ಹಾಗೂ ಕೊಲಿಯರಿ ಪೊಲೀಸ್ ಠಾಣೆಗಳಲ್ಲಿ ಯುವತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಇದೀಗ ಯುವತಿಯನ್ನು ಬಂಧಿಸಿರುವ ಅನುಗುಲ್​ ಜಿಲ್ಲೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
VIDEO| ಏಲಿಯನ್​ ರೀತಿಯ ಮೇಕೆ: ಮೂಗಿಲ್ಲ ಆದ್ರೆ ಬಾಯಿಯೊಳಗಿದೆ ಕಣ್ಣು, ವಿಚಿತ್ರ ಹುಟ್ಟಿಗೆ ಕಾರಣವೇನು?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:10 + seven =
Remember me
