ಜಾರ್ಖಂಡ್​:ಮಹಿಳೆಯೊಬ್ಬಳು ಪತಿಯನ್ನು ಕೊಂದು ಮನೆಯೊಳಗೆ ಸುಡಲು ಮಾಸ್ಟರ್​ ಪ್ಲ್ಯಾನ್​​ ಮಾಡಿ ಪೊಲೀಸರ ಬಳಿ ಸಿಕ್ಕಿ ಬಿದ್ದಿರುವ ಘಟನೆ ಜಾರ್ಖಂಡ್​​ನ ಓಲ್ಡ್ ಸುಭಾಷ್ ಕಾಲೋನಿಯಲ್ಲಿ ನಡೆದಿದೆ.
ಅಮರನಾಥ್ ಸಿಂಗ್ ಮೃತ. ಆರೋಪಿ ಮೀರಾ ಸಿಂಗ್. ಅಮರನಾಥ್ ಸಿಂಗ್ ಅವರು ಸಾರಿಗೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಉದ್ಯೋಗ ಮತ್ತು ಅಧ್ಯಯನಕ್ಕಾಗಿ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದರು.
ಮಹಿಳೆ ಪತಿಯನ್ನು ಕೊಂದು ಶವವನ್ನು ಮನೆಯೊಳಗೆ ಸುಡಲು ಯತ್ನಿಸಿದ್ದಾರೆ. ಆರೋಪಿ ಮಹಿಳೆ ಒಳಗಿನಿಂದ ಬೀಗ ಹಾಕಿಕೊಂಡು, ಪೊಲೀಸರು ಒಳನುಗ್ಗದಂತೆ ತಡೆಯಲು ಬಾಗಿಲು ಮುಟ್ಟಿದರೆ ಕರೆಂಟ್​ ಶಾಕ್​​ ಹೊಡೆಯುವಂತೆ ವ್ಯವಸ್ಥೆ ಮಾಡಿದ್ದಾಳೆ. ಮನೆಯಿಂದ ದುರ್ವಾಸನೆ ಬರಲಾರಂಭಿಸಿದ್ದು, ನೆರೆಹೊರೆಯವರು ಪುಣೆಯಲ್ಲಿ ವಾಸಿಸುವ ದಂಪತಿಯ ಮಗನಿಗೆ ವಿಚಾರ ತಿಳಿಸಿದಾಗ ಕೊಲೆ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಮಹಿಳೆ ಛಾವಣಿ ಮೇಲೆ ಹತ್ತಿ ಕೋಲು ಹಿಡಿದು ಜನರನ್ನು ಬೆದರಿಸಿದ್ದಾರೆ.
ಇದನ್ನೂ ಓದಿ:ಗೀಸರ್‌ನಿಂದ ಗ್ಯಾಸ್ ಸೋರಿಕೆ; ಸ್ನಾನಕ್ಕೆಂದು ತೆರಳಿದ ದಂಪತಿ ಉಸಿರುಗಟ್ಟಿ ಸಾವು
ಆ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಂತರ ಪೊಲೀಸರು ಮನೆಯೊಳಗೆ ಪ್ರವೇಶಿಸಿ ಅರ್ಧ ಸುಟ್ಟ ದೇಹವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮೀರಾ ಸಿಂಗ್​​ನನ್ನು ಬಂಧಿಸಲಾಗಿದೆ. ಮೀರಾ ಮಾನಸಿಕ ಅಸ್ವಸ್ಥಳಾಗಿದ್ದು, ದಂಪತಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಆರೋಪಿಸಿದ್ದಾರೆ.
ಸುಮಲತಾ ಅವರು ದೊಡ್ಡವರಿದ್ದಾರೆ, ದೊಡ್ಡ ಪಕ್ಷಕ್ಕೆ ಸೇರಿದ್ದಾರೆ..ನಾನು ಸಣ್ಣವನು: ಎಚ್​ಡಿಕೆ ತಿರುಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
