ತಮಿಳುನಾಡು:ಕುಡಿದು ಕಿರುಕುಳ ನೀಡುತ್ತಿದ್ದ ಗಂಡನನ್ನು ಹೆಂಡತಿಯೊಬ್ಬಳು ದೋಸೆ ಕಾವಲಿಯಿಂದ ಹೊಡೆದು ಕೊಂದ ಘಟನೆ ನೆರೆಯ ತಮಿಳುನಾಡಿನಲ್ಲಿ ನಡೆದಿದೆ.
ತಿರುಪ್ಪೂರ್ ನಗರದ ಸೆಂಥಿಲ್ ನಗರದ ರವಿಕುಮಾರ್ ಮೃತ. ಜ್ಯೋತಿಮಣಿ ಕೊಲೆ ಆರೋಪಿಯಾಗಿದ್ದಾರೆ. ಪತಿ ಮದ್ಯದ ಚಟ ಹೊಂದಿದ್ದು, ಈ ವಿಚಾರವಾಗಿ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು. ಈ ಜಗಳ ಕೊಲೆ ಮಾಡುವ ಹಂತಕ್ಕೆ ತಲುಪಿದೆ.
ಇದನ್ನೂ ಓದಿ:ನುಗ್ಗಿಕೇರಿ ಆಂಜನೇಯನ ದರ್ಶನ ಪಡೆದ ಬಿಎಸ್‌ವೈಮಾರ್ಚ್ 22 ರಂದು ರವಿಕುಮಾರ್ ಕುಡಿದ ಅಮಲಿನಲ್ಲಿ ಮನೆಗೆ ಬಂದು ಜ್ಯೋತಿಮಣಿ ಮೇಲೆ ಹಲ್ಲೆ ನಡೆಸಿದ್ದ. ಇದನ್ನು ಸಹಿಸಲಾಗದೆ ಜ್ಯೋತಿಮಣಿ ರವಿಕುಮಾರ್​ಗೆ ದೋಸೆ ಕಾವಲಿಯಿಂದ ಹೊಡೆದಿದ್ದಾಳೆ. ರವಿಕುಮಾರ್ ಪ್ರಜ್ಞೆ ತಪ್ಪಿ ಮೃತ ಪಟ್ಟಿದ್ದಾರೆ.
ಇದನ್ನೂ ಓದಿ:ನೀರೊಳಗಿನ ಪ್ರಯಾಣ; 21 ಕಿ.ಮೀ. ನೀರಿನಡಿ ಬುಲೆಟ್ ರೈಲು ಸಂಚಾರಜ್ಯೋತಿಮಣಿ, ಪತಿ ಶವವನ್ನು ಆಂಬ್ಯುಲೆನ್ಸ್‌ನಲ್ಲಿ ಈರೋಡ್‌ನ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಹೃದಯಾಘಾತವಾಗಿದೆ ಎಂದು ಹೇಳಿದರು. ರವಿಕುಮಾರ್​​ ತಂದೆ ದುಷ್ಕೃತ್ಯದ ಬಗ್ಗೆ ಶಂಕಿಸಿ ತಿರುಮುರುಗನಪೂಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೊಂಡಾದ ವಸ್ತುವಿನಿಂದ ಉಂಟಾದ ಗಾಯಗಳಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದುಬಂದಿದೆ.
ವರದಿಯೊಂದಿಗೆ ಪೊಲೀಸರು ಜ್ಯೋತಿಮಣಿಯನ್ನು ವಿಚಾರಣೆಗೊಳಪಡಿಸಿದ್ದು, ರವಿಕುಮಾರ್‌ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಬುಧವಾರ ಆಕೆಯನ್ನು ಬಂಧಿಸಿ ಕೊಯಮತ್ತೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಈ ಕುಟುಂಬದಲ್ಲಿ ಬರೀ ಗಂಡು ಮಕ್ಕಳೇ ಜನನ..136 ವರ್ಷಗಳ ಬಳಿಕ ಹೆಣ್ಣು ಮಗುವಿನ ಆಗಮನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
