ಚೆನ್ನೈ:ಕುಟುಂಬ ಎಂದರೆ ಮನಸ್ತಾಪಗಳು ಸರ್ವೇಸಾಮಾನ್ಯ. ಅದರಲ್ಲೂ ಅತ್ತೆ- ಸೊಸೆ ಎಂದರೆ ಪ್ರೀತಿ, ಜಗಳ ಇರುತ್ತದೆ. ಆದರೆ ಇಲ್ಲೊಬ್ಬಳು ಸೊಸೆ ಬಿಸಿ ಟೀ ತಂದುಕೊಡದ್ದಕ್ಕೆ ಗದರಿದ ಅತ್ತೆಯನ್ನೇ ರಾಡ್‍ನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ಚೆನ್ನೈನಲ್ಲಿ ನಡೆದಿದೆ.
ಪಳನಿಯಮ್ಮಾಳ್ ಮೃತ ಮಹಿಳೆ. ಇವರು ತಮಿಳುನಾಡಿನ ಪುದುಕೋಟೆ ಜಿಲ್ಲೆಯವರು. ಕನಕು ಕೊಲೆ ಮಾಡಿದ ಆರೋಪಿ. ಬಿಸಿಬಿಸಿ ಟೀ ಕೇಳಿದ ಅತ್ತೆಯನ್ನು ಸೊಸೆ ಕೊಲೆ ಮಾಡಿದ್ದಾಳೆ.
ಇದನ್ನೂ ಓದಿ:ಸೈಬರ್‌ ಕಳ್ಳರ ಕನ್ನ; 1 ಲಕ್ಷ ರೂ. ಕಳೆದುಕೊಂಡ ನಟಿ ನಗ್ಮಾ!
ಪಳನಿಯಮ್ಮಾಳ್‍ ಬಿಸಿಬಿಸಿ ಟೀ ತರಲು ಸೊಸೆಯನ್ನು ಅಂಗಡಿಗೆ ಕಳುಹಿಸಿದ್ದಳು. ಆದರೆ ಸೊಸೆ ಬಿಸಿ ಟೀ ತಂದಿಲ್ಲ ಎಂದು ಅತ್ತೆ ಗದರಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಸೊಸೆ ಕನಕು ಸೈಕಲ್ ರಿಪೇರಿಗೆ ಬಳಸುವ ಕಬ್ಬಿಣದ ರಾಡ್‍ನಿಂದ ಪಳನಿಯಮ್ಮಾಳ್ ತಲೆಗೆ ಜೋರಾಗಿ ಹೊಡೆದಿದ್ದಾಳೆ.
ಇದನ್ನೂ ಓದಿ:ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ ತಂದೆ-ಮಗ; ಮತ್ತೊಂದು ಬಾಟೆಲ್​ಗೆ ಹಣ ಕೊಡದ ತಾಯಿ ಕಥೆ ಮುಗಿಸಿದ!
ಗಂಭೀರವಾಗಿ ಗಾಯಗೊಂಡಿದ್ದ ಅತ್ತೆ ಪಳನಿಯಮ್ಮಾಳ್‍ಳನ್ನು ನೆರೆಹೊರೆಯವರು ಸೇರಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾಗ, ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಬಳಿಕ ಕನಕು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ
ಮಾನಸಿಕ ಅಸ್ವಸ್ಥೆಯಾಗಿರುವ ಕನಕುಗೆ ಪ್ರತಿನಿತ್ಯ ಔಷಧಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಆಕೆ ಮಾತ್ರೆ ತೆಗದುಕೊಂಡಿರಲಿಲ್ಲ. ಹೀಗಾಗಿ ಅತ್ತೆ ಗದರಿದ್ದಕ್ಕೆ ಸಿಟ್ಟು ಬಂದು ಅತ್ತೆಯನ್ನು ಹೊಡೆದು ಕೊಂದಿದ್ದಾಳೆ ಎನ್ನಲಾಗಿದೆ.
ಗೀಸರ್‌ನಿಂದ ಗ್ಯಾಸ್ ಸೋರಿಕೆ; ಸ್ನಾನಕ್ಕೆಂದು ತೆರಳಿದ ದಂಪತಿ ಉಸಿರುಗಟ್ಟಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 10 =
Remember me
