ನವದೆಹಲಿ:ವರ್ಷಗಳೇ ಕಳೆದರೂ ಮದುವೆ ಆಗಲಿಲ್ಲ ಎಂಬ ಕಾರಣಕ್ಕೆ ಖಿನ್ನತೆಗೆ ಒಳಗಾದ, ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಹಾಗೆಯೇ ಮದುವೆಯ ಬಳಿಕ ಸಾಂಸಾರಿಕ ತಾಪತ್ರಯಗಳಿಂದಲೂ ಬೇಸತ್ತು ಬೇಗ ಸತ್ತುಹೋಗೋಣ ಎಂದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಿಗೂ ಕಡಿಮೆ ಏನಿಲ್ಲ. ಆದರೆ ಇಲ್ಲೊಬ್ಬಳು ಮಹಿಳೆ ಮದುವೆಯಾಗಲು ಇಷ್ಟವಿಲ್ಲ ಎಂಬ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿನ್ನಿ ಎಂದೂ ಶಾರ್ಟ್ ಆ್ಯಂಡ್ ಸ್ವೀಟ್​ ಆಗಿ ಕರೆಯಲ್ಪಡುತ್ತಿದ್ದ ದ್ರೌಪದಿ ಕುಮಾರಿ ಪತ್ರೋ ಎಂಬ 26 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು. ಇಂಡಿಯನ್ ಆಯಿಲ್ ಕಾರ್ಪೋರೇಷನ್​ (ಐಒಸಿ) ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಈಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!
ಕೋಲ್ಕತದಲ್ಲಿ ಐಒಸಿಯಲ್ಲಿ ಉದ್ಯೋಗಿ ಆಗಿರುವ ಈಕೆ ಜಾರ್ಖಂಡ್​ನ ಈಸ್ಟ್​ ಸಿಂಗ್​ಬುಮ್​ ಜಿಲ್ಲೆಯ ಹರ್​ಹರ್​ಗುಟು ಎಂಬಲ್ಲಿನ ತಮ್ಮ ಮನೆಯಲ್ಲಿ ಗುರುವಾರ ನೇಣು ಹಾಕಿಕೊಂಡಿದ್ದಾರೆ. ಬೆಳಗ್ಗೆ ಎಷ್ಟು ಹೊತ್ತಾದರೂ ಕೋಣೆಯ ಬಾಗಿಲು ತೆರೆಯದೇ ಇದ್ದಿದ್ದರಿಂದ ಬಾಗಿಲು ಒಡೆದು ಪ್ರವೇಶಿಸಿದ ಮನೆಯವರಿಗೆ ಬಿನ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಮಾಹಿತಿ ತಿಳಿದ ಪೊಲೀಸರು ಮನೆಗೆ ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮದುವೆಯಾಗಲು ಇಷ್ಟವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬಿನ್ನಿ ಬರೆದಿದ್ದ ಡೆತ್​ನೋಟ್ ಸಿಕ್ಕಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಹೆಚ್ಚಿನ ತನಿಖೆಗಾಗಿ ಆಕೆ ಬಳಸುತ್ತಿದ್ದ ಮೊಬೈಲ್​ ಫೋನ್​ ಹಾಗೂ ಲ್ಯಾಪ್​ಟಾಪ್​ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)
ಅದೇ ಆಸ್ಪತ್ರೆಯಲ್ಲಿ ಈಗ ಮತ್ತೊಬ್ಬ ವೈದ್ಯರ ಆತ್ಮಹತ್ಯೆ!; ಇನ್ನೆಂದಿಗೂ ಎಚ್ಚರಗೊಳ್ಳಲ್ಲ ಈ ಅರಿವಳಿಕೆ ತಜ್ಞ…

‘ನಾ ಪುರುಷನಿಂದ ಗರ್ಭಿಣಿಯಾಗಲಿಲ್ಲ’ ಈ ಗರ್ಭಿಣಿಯ ಕಥೆ ಕೇಳಿದರೆ ನೀವೂ ಗಾಬರಿಯಾಗುತ್ತೀರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 13 =
Remember me
