ಮಹಬೂಬ್​ನಗರ:ಮಂಗಗಳ ಕಿಡಿಗೇಡಿತನಕ್ಕೆ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿರುವ ವಿಚಿತ್ರ ಘಟನೆ ತೆಲಂಗಾಣದ ಮಹಬೂಬ್​ನಗರದಲ್ಲಿ ನಡೆದಿದೆ.
ಇದನ್ನೂ ಓದಿ:ಆ್ಯಪ್​ ಮೂಲಕ ಕಾರ್​ ಬುಕ್: ಬಾಡಿಗೆ ನೆಪದಲ್ಲಿ ಕೊಂಡೊಯ್ದು ಜಿಪಿಎಸ್​ ಕಿತ್ತಾಪಿ ಆರೋಪಿಗಳು ಎಸ್ಕೇಪ್..
ಪಟ್ಟಣದ ಲಕ್ಷ್ಮೀ ಥಿಯೇಟರ್ ಬಳಿ ವಾಸವಿರುವ ಸಾಬಿರಾ ಬೇಗಂ(55) ಎಂಬಾಕೆಯೇ ಮೃತ ದುರ್ದೈವಿಯಾಗಿದ್ದು, ನಿನ್ನೆ ಸಾಯಂಕಾಲದಿಂದಲೇ ಮಹಿಳೆಯ ಮನೆಯ ಬಳಿ ಮಂಗಗಳ ಗುಂಪು ವಾಸ್ತವ್ಯ ಹೂಡಿದ್ದವು. ಮಹಿಳೆಯು ಪ್ರತಿದಿನದಂತೆ ಬೆಳಿಗ್ಗೆ ಎದ್ದು ಮನೆಯಂಗಳವನ್ನು ಕಸಗೂಡಿಸುತ್ತಿದ್ದ ವೇಳೆ ಮಂಗಗಳು ಮನೆಯ ಮೇಲಿನ ಸಿಮೆಂಟ್ ಬ್ಲಾಕ್‌ಗೆ ಕಟ್ಟಿದ್ದ ಸರ್ವೀಸ್ ವೈರ್​ನ್ನು ಎಳೆದಿವೆ.ಮಹಿಳೆಯ ದುರಾದೃಷ್ಟ ಎಂಬಂತೆ ಕೋತಿಗಳ ತಾಕತ್ತಿಗೆ ಸಿಮೆಂಟ್ ಗೋಡೆ ಕೊಂಚ ಭಾಗ ಆಕೆಯ ಮೇಲೆ ಕಳಚಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಅಕ್ಕಪಕ್ಕದ ಮನೆಯವರು ಆಕೆಯನ್ನು ಗಮನಿಸಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆಕೆ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಇದನ್ನೂ ಓದಿ:ನನ್ನ ಮಗನಿಗೆ ಗಲ್ಲು ಶಿಕ್ಷೆ ನೀಡಿ: ಮಗನ ವಿರುದ್ಧವೇ ಸಾಕ್ಷಿ ಹೇಳಿದ ತಾಯಿ..ಇನ್ನೊಂದೆಡೆ, ಮಹಬೂಬಾಬಾದ್ ಪಟ್ಟಣದಲ್ಲಿ ಮಂಗಗಳ ಕಾಟ ಜಾಸ್ತಿಯಾಗಿದ್ದು, ಊರವರು ಹೊರಗೆ ಬರಲು ಹೆದರುತ್ತಿದ್ದಾರೆ,. ಈ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಈಗಲಾದರೂ ಪಟ್ಟಣದಲ್ಲಿ ಮಂಗಗಳ ಕಾಟದಿಂದ ಜನರನ್ನು ರಕ್ಷಿಸುವಂತೆ ಸ್ಥಳೀಯ ಅಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − 1 =
Remember me
