ನವದೆಹಲಿ:ಉತ್ತರಪ್ರದೇಶದ ನೋಯ್ಡಾದ ಮಹಿಳಾ ಇಂಜಿನಿಯರ್ ಒಬ್ಬರನ್ನು ಸೈಬರ್ ಕ್ರಿಮಿನಲ್‌ಗಳು ಸುಮಾರು ಎಂಟು ಗಂಟೆ ಕಾಲ ಡಿಜಿಟಲ್ ಬಂಧಿಯಾಗಿಟ್ಟು 11 ಲಕ್ಷ ರೂಪಾಯಿ ವಂಚಿಸಿದ್ದಾರೆ. ನ.13 ರಂದು ನಡೆದ ಈ ಘಟನೆ ಮಹಿಳೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಪತಿಗೆ ಹೃದಯಾಘಾತವಾದ ನಂತರ ವಿಚ್ಛೇದಿತ ದಂಪತಿ ಮರುಮದುವೆಯಾದರು!ದೂರನ್ನು ಸ್ವೀಕರಿಸಿ ಮಹಿಳೆಯ ನರಳಾಟವನ್ನು ಆಲಿಸಿದ ಪೊಲೀಸರು, ಪ್ರಕರಣ ಡಿಜಿಟಲ್ ಬಂಧನವಾಗಿದೆ ಎಂದು ತಿಳಿಸಿದ್ದಾರೆ.ವಿವರ ಇಂತಿದೆ: ಮಹಿಳಾ ಇಂಜಿನಿಯರ್​ಗೆ ನ.13 ರಂದು ವ್ಯಕ್ತಿಯೊಬ್ಬನಿಂದ ಸ್ಕೈಪ್ ಕರೆ ಬಂದಿದೆ. ಆತ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡಿದ್ದು, ನಿಮ್ಮ ಬ್ಯಾಂಕ್ ಖಾತೆಗೆ 20 ಲಕ್ಷ ರೂಪಾಯಿ ಕಮಿಷನ್ ಜಮೆ ಆಗಿದೆ ಎಂದು ತಿಳಿಸಿದ್ದಾನೆ. ಕಮಿಷನ್ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುವ ಪ್ರಕ್ರಿಯೆ ಮಾಡಬೇಕಿದ್ದು, ಆಧಾರ್ ಕಾರ್ಡ್ ಮತ್ತಿತರ ವಿವರಗಳನ್ನು ಕೇಳಿದ್ದಾನೆ.
ಇದಕ್ಕೆ ಮಹಿಳಾ ಇಂಜಿನಿಯರ್​ ವಿರೋಧಿಸಿದರೂ, ವಂಚಕ ಹೆಚ್ಚಿನ ಮಾಹಿತಿಗಾಗಿ ಆಕೆಯನ್ನು ಪೀಡಿಸಿದ್ದಾನೆ. ಬೆಳಗ್ಗೆ 9:30 ರಿಂದ ಸಂಜೆ 7 ರವರೆಗೆ ಮಹಿಳೆಗೆ ಆಕೆಯ ಬ್ಯಾಂಕ್ ಖಾತೆಗಳು, ಆಸ್ತಿಗಳು ಮತ್ತು ವಾಸಸ್ಥಳಕ್ಕೆ ಸಂಬಂಧಿಸಿದ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ.
ಸರ್ಕಾರಿ ಅಧಿಕಾರಿಗಳು ಪ್ರಶ್ನಿಸುವ ಸಂದರ್ಭದಲ್ಲಿ ಇದು ಸಾಮಾನ್ಯ ಎಂದು ಭಾವಿಸಿ ತಾನು ಹೊಂದಿರುವ ಎಲ್ಲ ಬ್ಯಾಂಕ್ ಖಾತೆಗಳ ವಿವರ, ಆಸ್ತಿಗಳ ಮಾಹಿತಿಗಳನ್ನು ಹಂಚಿಕೊಂಡಿದ್ದೇನೆ ಎಂದು ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ವಂಚಕರು ಪ್ರಶ್ನೆಗೆ ಸಂಬಂಧಿಸಿದಂತೆ ಖಾಲಿ ಕಾಗದಕ್ಕೆ ಸಹಿ ಹಾಕುವಂತೆ ಕೇಳಿದ್ದು, ಮಹಿಳೆ ನಿರಾಕರಿಸಿದ್ದಾರೆ. ನಂತರ ಅವರು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಕಮಿಷನ್ ಪಡೆದ ಹಣವನ್ನು ಹಿಂತಿರುಗಿಸಬೇಕು ಎಂದು ಹೇಳಿದ್ದಾರೆ. ಮಹಿಳೆಗೆ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಲಾಗಿದೆ. ಅವರು ನಿಮ್ಮ ಖಾತೆಗೆ 20 ಲಕ್ಷ ರೂಪಾಯಿ ಜಮೆ ಆಗಲಿದ್ದು, ಅದನ್ನು ನಿಯಮಗಳ ಪ್ರಕಾರ ವರ್ಗಾಯಿಸಬೇಕು ಎಂದು ಕೇಳಿದ್ದಾರೆ.
ಆದರೆ, ಮಹಿಳೆ 11 ಲಕ್ಷ ರೂ.ನೀಡಬಹುದು ಎಂದು ಹೇಳಿದ್ದಾರೆ. ವಂಚಕರು ಒಪ್ಪಿಕೊಂಡು ಸಂಪೂರ್ಣ ಹಣವನ್ನು ನೀವೇ ವಾಪಸ್​ ಪಡೆಯುತ್ತೀರಿ ಎಂದು ಭರವಸೆ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮೇಲಧಿಕಾರಿ ಕಿರುಕುಳಕ್ಕೆ ಬೇಸತ್ತು ಮಂಡ್ಯ ವೈದ್ಯ ಬೆಂಗಳೂರಲ್ಲಿ ಸಾವಿಗೆ ಶರಣು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + 11 =
Remember me
