ಚೆನ್ನೈ:ಮನೆಗೆ ಬರುವ ನೆಂಟರನ್ನು ನಂಬುವುದು ಅದೆಷ್ಟು ಅಪಾಯಕಾರಿ ಎನ್ನುವುದಕ್ಕೆ ಈ ಘಟನೆ ಒಂದು ಸಾಕ್ಷಿ. ಕರೊನಾ ಲಸಿಕೆ ಕೊಟ್ಟ ಅಕ್ಕನ ಮಗಳು ಬಂಗಾರವನ್ನೆಲ್ಲ ಕದ್ದ ಕಥೆಯಿದು..
ತಮಿಳುನಾಡಿನ ರಾಸತಿ ಹೆಸರಿನ ಮಹಿಳೆಯ ಮನೆಗೆ ಗುರುವಾರದಂದು ಆತನ ಅಕ್ಕನ ಮಗಳು ಸತ್ಯಪ್ರಿಯಾ (26) ಬಂದಿದ್ದಳು. ಚಿಕ್ಕಮ್ಮ ಎಂದು ಪ್ರೀತಿಯಿಂದ ಕರೆಯುತ್ತ ಬಂದ ಮಗಳನ್ನು ರಾಸತಿ ಪ್ರೀತಿಯಿಂದ ಆರೈಕೆ ಮಾಡಲಾರಂಭಿಸಿದಳು. ಅವಳ ಜತೆ ಆಕೆಯ ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳು ಕೂಡ ಆಕೆಯನ್ನು ಆರೈಕೆ ಮಾಡಿದ್ದಾರೆ. ಈ ಮಧ್ಯೆ ಸತ್ಯಪ್ರಿಯಾ ಕರೊನಾ ಲಸಿಕೆ ತಂದಿರುವುದಾಗಿ ಹೇಳಿದ್ದಾಳೆ. ನೀವು ನಾಲ್ವರೂ ಕರೊನಾ ಲಸಿಕೆಯನ್ನು ತೆಗೆದುಕೊಳ್ಳಿ ಎಂದು ಎಲ್ಲರಿಗೂ ಲಸಿಕೆ ಕೊಟ್ಟಿದ್ದಾಳೆ.
ಲಸಿಕೆ ಪಡೆದ ಕೆಲವೇ ಕ್ಷಣಗಳಲ್ಲಿ ನಾಲ್ವರು ಎಚ್ಚರ ತಪ್ಪಿ ಬಿದ್ದಿದ್ದಾರೆ. ಅದಾದ ಮೇಲೆ ಸತ್ಯಪ್ರಿಯಾ ಮನೆಯಲ್ಲಿದ್ದ ಎಲ್ಲ ಚಿನ್ನಾಭರಣವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ. ಶುಕ್ರವಾರದಂದು ಎಚ್ಚರವಾದಾಗ ಚಿಕ್ಕಮ್ಮನ ಕುಟುಂಬಕ್ಕೆ ಶಾಕ್​ ಆಗಿದೆ. ಲಸಿಕೆ ಹೆಸರಿನಲ್ಲಿ ಮೂರ್ಚೆ ಬರುವ ಮದ್ದು ಕೊಟ್ಟು ತಮ್ಮನ್ನು ಮೋಸ ಮಾಡಲಾಗಿದೆ ಎನ್ನುವುದು ಅವರಿಗೆ ಅರಿವಾಗಿದೆ. ಪೊಲೀಸ್​ ಠಾಣೆಯಲ್ಲಿ ಸತ್ಯಪ್ರಿಯಾ ವಿರುದ್ಧ ದೂರು ನೀಡಲಾಗಿದೆ. ಯುವತಿಯನ್ನು ಹಿಡಿದ ಪೊಲೀಸರು ಆಕೆಯ ಬಾಯಿಯಿಂದ ಸತ್ಯವನ್ನು ಹೊರಡಿಸಿದ್ದಾರೆ. ತಪ್ಪೊಪ್ಪಿಕೊಂಡಿರುವ ಆಕೆ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾಳೆ. (ಏಜೆನ್ಸೀಸ್​)
ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ ಮಾಹಿಯ ಹೊಸ ಅವತಾರ..!

ಕರ್ನಾಟಕ ಸೇರಿದಂತೆ ದೇಶದ 10 ಕಡೆಗಳಲ್ಲಿ ಎನ್​ಐಎ ದಾಳಿ: ಐವರು ಯುವಕರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 18 =
Remember me
