ತೆಲಂಗಾಣ:ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗಲು ಹುಡುಗಿಯೊಬ್ಬಳು ಖತರ್ನಾಕ್ ಐಡಿಯಾ ಮಾಡಿದ್ದಾಳೆ. ತನ್ನ ತಂದೆಯೇ ಎದುರಲ್ಲೇ ಕಿಡ್ನಾಪ್ ನಾಟಕವಾಡಿದ್ದಾಳೆ. ಕೊನೆಗೆ ತನ್ನ ಇಚ್ಛೆಯಂತೆಯೇ ಮದುವೆಯಾಗಿದ್ದಾಳೆ. ಇದೀಗ ಮದುವೆಯಾಗಿರುವ ಯುವತಿ ಶಾಲಿನಿ ವಿಡಿಯೋವೊಂದನ್ನು ಮಾಡಿ, ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ಪ್ರೀತಿಸಿದವನನ್ನು ಮದುವೆಯಾಗಲು ಈ ರೀತಿ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ತೆಲಂಗಾಣದ ರಾಜಣ್ಣ ಸಿರ್ಸಿ ಎಂಬಲ್ಲಿ ಹಾಡಹಗಲೇ 18 ವರ್ಷದ ಯುವತಿ ಶಾಲಿನಿ ಅಪಹರಣ ನಡೆದಿತ್ತು. ಇದು ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಇದೀಗ ಶಾಲಿನಿ, ನಾನು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದೆ. ಆತನೊಂದಿಗೆ ಈ ಹಿಂದೆಯೇ ನನಗೆ ವಿವಾಹ ಮಾಡಿಕೊಂಡಿದ್ದೆ. ಆದರೆ ಅಪ್ರಾಪ್ತಳಾಗಿದ್ದ ಕಾರಣ ಮದುವೆಯ ವಿಷಯವನ್ನು ಬಹಿರಂಗಪಡಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾಳೆ.
ನನ್ನ ವಿವಾಹಕ್ಕೆ ಪೋಷಕರು ಸಮ್ಮತಿಸಿರಲಿಲ್ಲ. ಕೊನೆಗೆ ನನ್ನ ಗಂಡನ ವಿರುದ್ಧವೇ ಪೊಲೀಸ್ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಹೀಗಾಗಿ ಸ್ನೇಹಿತರ ಸಹಾಯದಿಂದ ಅಪಹರಣದ ನಾಟಕವಾಡಿದ್ದೇವೆ ಎಂದು ಯುವತಿ ಹೇಳಿದ್ದಾಳೆ.
Big Twist in#Sircilla'kidnapping' case- girl says entire thing was pre-planned & that she had only called her boyfriend(named as accused) to elope"We got married a year ago, since I was a minor back then, my parents didn't accept & filed a case against my husband"(More)pic.twitter.com/hD1W83OMeW— Swastika Das (@swastikadas95)December 20, 2022
Big Twist in#Sircilla'kidnapping' case- girl says entire thing was pre-planned & that she had only called her boyfriend(named as accused) to elope"We got married a year ago, since I was a minor back then, my parents didn't accept & filed a case against my husband"(More)pic.twitter.com/hD1W83OMeW
ಘಟನೆಯ ವಿವರ:ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಚಂದೂರ್ತಿ ಮಂಡಲದ ಮೂಡಪಲ್ಲಿಯಲ್ಲಿ ಇತ್ತೀಚೆಗೆ ಹಾಡಹಗಲೇ ಸಿನಿಮಾ ಶೈಲಿಯಲ್ಲಿ ಯುವತಿಯ ಅಪಹರಣ ನಡೆದಿತ್ತು. ತನ್ನ ತಂದೆಯೊಂದಿಗೆ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ ಯುವತಿಯನ್ನು ನಾಲ್ವರು ಅಪಹರಣಕಾರರು ತಂದೆಯ ಮೇಲೆ ದಾಳಿ ಮಾಡಿ ಅಪಹರಿಸಿದ್ದರು.
ವರದಿಗಳ ಪ್ರಕಾರ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಅಪಹರಣದ ದುಷ್ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 14 =
Remember me
