ಮಲಪ್ಪುರಂ:ಚಲಿಸುತ್ತಿದ್ದ ಬೈಕ್​ಗೆ ಫುಟ್​ಬಾಲ್​ ಬಡಿದಿದ್ದರಿಂದ ನಿಯಂತ್ರಣ ಕಳೆದುಕೊಂಡು ಬೈಕ್​ ಕೆಳಗೆ ಬಿದ್ದ ಪರಿಣಾಮ ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆಯ ಮೇಲೆ ಲಾರಿ ಹರಿದು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಒಥಾಯಿಯಲ್ಲಿ ನಡೆದಿದೆ.
ಮೃತಳನ್ನು ಫಾತಿಮಾ ಸುಹ್ರಾ (38) ಎಂದು ಗುರುತಿಸಲಾಗಿದೆ. ಈಕೆ ಮಲಪ್ಪುರಂನ ತ್ರಿಕ್ಕಾಲಾಂಗೋದೆ ಮೂಲದವಳು. ತನ್ನ ಸಹೋದರ ಮತ್ತು ಮಕ್ಕಳೊಂದಿಗೆ ಅತ್ತೆಯ ಮನೆಗೆ ವಾಪಸ್​ ಬರುವಾಗ ಈ ದುರ್ಘಟನೆ ಸಂಭವಿಸಿದೆ.
ಮಕ್ಕಳು ಫುಟ್​ಬಾಲ್​ ಆಡುತ್ತಿದ್ದರು. ಅವರ ಸಮೀಪದ ರಸ್ತೆಯಲ್ಲಿ ಬೈಕ್​ ಹಾದು ಹೋಗುವಾಗ ಮಕ್ಕಳು ಒದ್ದ ಫುಟ್​ಬಾಲ್​ ಬೈಕ್​ಗೆ ಬಡಿದಿದೆ. ಇದರಿಂದ ಬೈಕ್​ ಸವಾರ ನಿಯಂತ್ರಣ ಕಳೆದುಕೊಂಡಿದ್ದರಿಂದ ಬೈಕ್​ ಕೆಳಗೆ ಬಿದ್ದಿದೆ. ಇದೇ ಸಮಯದಲ್ಲಿ ಹಿಂದೆ ಬರುತ್ತಿದ್ದ ಲಾರಿ, ಫಾತಿಮಾ ಮೇಲೆ ಹರಿದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಫಾತಿಮಾಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಆಕೆಯನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಆಕೆಯ ಸಹೋದರ ಮತ್ತು ಮಕ್ಕಳು ಯಾವುದೇ ಹಾನಿ ಇಲ್ಲದೆ ಬಚಾವ್​ ಆಗಿದ್ದಾರೆ. ಫಾತಿಮಾಳ ದೇಹವನ್ನು ಮಂಜೇರಿ ಮೆಡಿಕಲ್​ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದೆ.(ಏಜೆನ್ಸೀಸ್​)
ಲೇಡಿಸ್ ಟಾಯ್ಲೆಟ್​ಗೆ ನುಗ್ಗಿ ವಿದ್ಯಾರ್ಥಿನಿ ಜತೆ ಅಸಭ್ಯ ವರ್ತನೆ ಪ್ರಕರಣ: 13 ದಿನಗಳ ಬಳಿಕ ಆರೋಪಿ ಬಂಧನ

ವಾಟ್ಸ್ಯಾಪ್ ಅಪ್​ಡೇಟ್​: ನಿಮಗೆ ನೀವೇ ಮೆಸೇಜ್​ ಮಾಡಿಕೊಳ್ಳಬಹುದು!

ನೇತಾಜಿ ಸ್ಮರಣಾರ್ಥ ಅಂಡಮಾನ್ ಮತ್ತು ನಿಕೋಬಾರ್​ನ 21 ದ್ವೀಪಗಳಿಗೆ ನಾಮಕರಣ ಮಾಡಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
