ಜೈಪುರ:ದಿಟ್ಟ ಮಹಿಳೆಯೊಬ್ಬಳು ಮೊಸಳೆ ದಾಳಿಯಿಂದ ತನ್ನ ಗಂಡನನ್ನು ರಕ್ಷಣೆ ಮಾಡಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯ ಕಿಮ್​ಕಾಚ್​ ಗ್ರಾಮದಲ್ಲಿ ನಡೆದಿದೆ.
ಹೊಂಚು ಹಾಕಿ ದಾಳಿ26 ವರ್ಷದ ಬನ್ನೇ ಸಿಂಗ್ ಕುರಿಗಾಹಿಯಾಗಿದ್ದು, ತನ್ನ ಕುರಿಗಳಿಗೆ ನೀರು ಕುಡಿಸಲು ಚಂಬಲ್​ ನದಿಗೆ​ ಹೋಗಿದ್ದ. ಈ ವೇಳೆ ಮೊಸಳೆಯೊಂದು ಹೊಂಚು ಹಾಕಿ ಅವನ ಕಾಲನ್ನು ಹಿಡಿದುಕೊಂಡಿತು. ಸಮೀಪದಲ್ಲೇ ನಿಂತಿದ್ದ ಅವರ ಪತ್ನಿ ವಿಮಲ್ ಬಾಯಿ ತಕ್ಷಣ ಕಾರ್ಯಪ್ರವೃತ್ತರಾದರು.
ಇದನ್ನೂ ಓದಿ:ಬಾರ್​ನಲ್ಲಿ ಮದ್ಯಪಾನ ಮಾಡುವಾದ ಶುರುವಾದ ಕಿರಿಕ್; ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಮಾಡಿದವರ ಮೇಲೆ ದಾಳಿ!
ಕಣ್ಣಿಗೆ ತಿವಿದು ರಕ್ಷಣೆಕೇವಲ ಕೋಲಿನಿಂದ ಮೊಸಳೆ ಮೇಲೆ ಹಲ್ಲೆ ಮಾಡಿ ಗಂಡನ ಕಾಲನ್ನು ಮೊಸಳೆಯ ದವಡೆಯಿಂದ ಬಿಡಿಸಿದ್ದಾಳೆ. ಅದಕ್ಕೂ ಮುನ್ನ ಮೊಸಳೆ ಪತಿಯನ್ನು ನೀರಿನಲ್ಲಿ ಆಳವಾಗಿ ಎಳೆಯಲು ಪ್ರಾರಂಭಿಸಿದಾಗ, ವಿಮಲ್ ಬಾಯಿ ಅದರ ಕಣ್ಣಿಗೆ ಕೋಲನ್ನು ತಿವಿದು, ಅಂತಿಮವಾಗಿ ಗಂಡನನ್ನು ರಕ್ಷಣೆ ಮಾಡಿದ್ದಾಳೆ.
ಧೈರ್ಯಕ್ಕೆ ಧನ್ಯವಾದಬನ್ನೆ ಸಿಂಗ್ ತನ್ನ ಹೆಂಡತಿಯ ಧೈರ್ಯಕ್ಕೆ ಧನ್ಯವಾದ ತಿಳಿಸಿದ್ದಾನೆ. 15 ನಿಮಿಷಗಳ ಅಗ್ನಿಪರೀಕ್ಷೆಯಲ್ಲಿ ವಿಮಲ್ ಬಾಯಿ, ತನ್ನ ತ್ವರಿತ ಆಲೋಚನೆ ಮತ್ತು ಧೈರ್ಯದಿಂದ ತನ್ನ ಪತಿಯ ಜೀವವನ್ನು ಉಳಿಸಿಕೊಂಡಿದ್ದಾಳೆ. ನನ್ನ ಗಂಡನ ಪ್ರಾಣಕ್ಕಿಂತ ಬೇರೆ ಯಾವುದೂ ಮುಖ್ಯವಲ್ಲ ಮತ್ತು ಅವನನ್ನು ಉಳಿಸಲು ತನ್ನ ಪ್ರಾಣವನ್ನು ಬೇಕಾದರೂ ಕೊಡುತ್ತಿದ್ದೆ ಎಂದು ವಿಮಲ ಭಾಯಿ ಹೇಳಿದ್ದಾಳೆ.
मगरमच्छ के मुँह से अपने पति को बचाने वाली बहादुर विमल मीणा को भी सुनिएगा…सरकार सम्मानित भी कर सकती है…
⁦pic.twitter.com/ZIMbG2JXaE
— LP Pant (@pantlp)April 12, 2023

ಮಾಧ್ಯಮದ ಜತೆ ವಿಮಲ ಭಾಯಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಆಕೆಯನ್ನು ಪ್ರಶಂಶಿಸುತ್ತಿದ್ದಾರೆ.(ಏಜೆನ್ಸೀಸ್​)
ಅಂದುಕೊಂಡಿದ್ದನ್ನು ಮಾಡುತ್ತೇನೆ ಅಂತ ಬೆತ್ತಲೆ ಫೋಟೋ ಶೇರ್​ ಮಾಡಿದ ಜೇಮ್ಸ್​ ಬಾಂಡ್​ ನಟಿ!

ಗಟ್ಟಿಯಾಗಿ ತಬ್ಬಿ ಗುಪ್ತಾಂಗವನ್ನು ಮುಟ್ಟಿದ: ಡ್ರೆಸ್ಸಿಂಗ್​ ರೂಮಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ

ರಾಷ್ಟ್ರೀಯ ಪ್ರಶಸ್ತಿ ವಿಜೇತ ಖ್ಯಾತ ನಟಿ ಉತ್ತರಾ ಬಾವೋಕರ್​ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 16 =
Remember me
