ಚೆನ್ನೈ:ಇತ್ತೀಚಿನ ವರ್ಷಗಳಲ್ಲಿ ಆನ್​ಲೈನ್​ ಶಾಪಿಂಗ್​ ಸಖತ್​ ಟ್ರೆಂಡ್​ ಆಗುತ್ತಿದ್ದು, ಕುಳಿತಲ್ಲಿಯೇ ಏನು ಬೇಕಾದರೂ ಆರ್ಡರ್​ ಮಾಡಿ ತರಿಸಿಕೊಳ್ಳಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮನೆಗೆ ಬೇಕಾಗಿರುವ ದಿನಸಿ ಸಾಮಾಗ್ರಿಗಳು ಕೂಡ ಆನ್​ಲೈನ್​ನಲ್ಲಿ ದೊರೆಯುತ್ತಿದ್ದು, ಆರ್ಡರ್​ ಮಾಡಿದ ಕೆಲವೇ ಕ್ಷಣಗಳಲ್ಲಿ ಮನೆಗೆ ಬಂದು ತಲುಪಿರುತ್ತದೆ. ಇದೀಗ ಆನ್​ಲೈನ್​ ಶಾಪಿಂಗ್​ ದೈತ್ಯ Zeptoನಲ್ಲಿ ಆರ್ಡರ್​ ಮಾಡಿದ ಹರ್ಷೀಸ್ ಚಾಕೊಲೇಟ್​​​ ಸಿರಪ್‌ ಬಾಟಲಿಯಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.
ಕೆಲ ದಿನಗಳ ಹಿಂದೆ ಮುಂಬೈನ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್‌ಕ್ರೀಂನಲ್ಲಿ ತುಂಡರಿಸಿದ ಮಾನವನ ಬೆರಳು, ಬಳಿಕ ಐಸ್​ಕ್ರೀಂನಲ್ಲಿ ಜರಿ ಪತ್ತೆಯಾಗಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಹರ್ಷೀಸ್​ ಚಾಕೊಲೇಟ್​​ ಸಿರಪ್‌ನ ವಿಡಿಯೋ ಎಲ್ಲೆಡೆ ಸಂಚಲನವನ್ನು ಮೂಡಿಸಿದ್ದು, ಈ ಬಗ್ಗೆ ಕಂಪನಿ ಸ್ಪಷ್ಟನೆ ನೀಡಿದೆ.
ಆರ್ಡರ್ ಮಾಡಿದ ಹರ್ಷೀಸ್​​​​​ ಕಂಪನಿಯ ಚಾಕೋಲೇಟ್ ಸಿರಪ್‌ನಲ್ಲಿ ಸತ್ತ ಇಲಿ ಕಂಡುಬಂದಿದ್ದು, ಪ್ರಮಿ ಶ್ರೀಧರ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದಲ್ಲದೆ ಬಾಟಲಿಯಲ್ಲಿ ಸತ್ತ ಇಲಿ ಇರುವುದು ತಿಳಿಯುವ ಮೊದಲು ಕುಟುಂಬದ ಮೂವರು ಸದಸ್ಯರು ಈ ಸಿರಪ್ ಅನ್ನು ಕುಡಿದಿರುವುದು ತಿಳಿದುಬಂದಿದೆ. ತಕ್ಷಣ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.
View this post on InstagramA post shared by Prami Sridhar (@pramisridhar)

A post shared by Prami Sridhar (@pramisridhar)
ಇದನ್ನೂ ಓದಿ:ಯಾರು ಒತ್ತಡ ಹೇರಿದ್ರು ನಾನು ಕೇಳಲ್ಲ; SPP ಬದಲಾವಣೆ ಕುರಿತು ಖಡಕ್​ ಉತ್ತರ ನೀಡಿದ ಸಿಎಂ
ಈ ಕುರಿತು ಮಾತನಾಡಿದ ಪ್ರಮಿ ಶ್ರೀಧರ್, ನಾವು ಬ್ರೌನಿ ಕೇಕ್‌ಗಳೊಂದಿಗೆ ತಿನ್ನಲು Zeptoದ ಮೂಲಕ ಆನ್​ಲೈನ್​ನಲ್ಲಿ ಹರ್ಷೀಸ್​ ಚಾಕೋಲೇಟ್​ ಸಿರಪ್​ಅನ್ನು ತರಿಸಿಕೊಂಡೆವು. ಕ್ಯಾಪ್​ ತೆಗೆದು ಅದನ್ನು ಕೇಕ್​ ಮೇಲೆ ಹಾಕಲು ಶುರು ಮಾಡಿದಾಗ ಮೊದಲಿಗೆ ನಾವು ಸಣ್ಣ ಸಣ್ಣ ಕೂದಲು ಇರುವುದನ್ನು ನೋಡಿದೆವು. ಬಳಿಕ ಕ್ಯಾಪ್​ ತೆಗೆದು ಪರಿಶೀಲಿಸಿದಾಗ ಇಲ್ಲಿ ಸತ್ತಿರುವುದು ಪತ್ತೆಯಾಗಿತ್ತು. ಯಾವುದೇ ಉತ್ಪನ್ನವಾಗಲಿ ಇನ್ನು ಮುಂದೆ ಸೇವಿಸುವುದಕ್ಕಿಂತ ಮುಂಚೆ ಒಮ್ಮೆ ಪರಿಶೀಲಿಸಿ ಆ ನಂತರ ಸೇವಿಸಿ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿಯು ನಾವು ಈ ವಿಚಾರವಾಗಿ ಕ್ಷಮೆಯಾಚಿಸುತ್ತೇವೆ. ದಯವಿಟ್ಟು ನಿಮ್ಮ ಮಾಹಿತಿಯನ್ನು ನಮ್ಮ ಸಂಸ್ಥೆಯ ಹೆಲ್ಪ್​​ಲೈನ್​ ನಂಬರ್​ಗೆ ಕಳುಹಿಸಿಕೊಡಿ ಆದಷ್ಟು ಬೇಗ ನಾವು ಸಮಸ್ಯೆಯನ್ನು ಇತ್ಯರ್ಥಪಡಿಸುತ್ತೇವೆ ಎಂದು ಕಂಪನಿ ಪ್ರತಿಕ್ರಿಯಿಸಿದೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × 5 =
Remember me
